Advertisement

ಯಾರನ್ನೋ ಮುಖ್ಯಮಂತ್ರಿ, ಶಾಸಕ ಮಾಡೋಕೆ ಬ್ರಿಗೇಡ್‌ ಹುಟ್ಟುಹಾಕಿಲ್ಲ

03:45 AM Jan 04, 2017 | Team Udayavani |

ಬಾಗಲಕೋಟೆ: ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನಿಂದ ಬಿಜೆಪಿಗೆ ಲಾಭ ಎನ್ನುತ್ತಿದ್ದ ವಿಧಾನಪರಿಷತ್‌ ವಿಪಕ್ಷ ನಾಯಕ ಈಗ
ಹೊಸ ವರಸೆ ತೆಗೆದಿದ್ದು, ಯಾರನ್ನೋ ಮುಖ್ಯಮಂತ್ರಿ ಅಥವಾ ಶಾಸಕರನ್ನಾಗಿ ಮಾಡಲು ಸಂಗೊಳ್ಳಿ ಬ್ರಿಗೇಡ್‌ ಸಂಘಟನೆ ಹುಟ್ಟು ಹಾಕಿಲ್ಲ ಎಂದು ಹೇಳುವ ಮೂಲಕ ಬ್ರಿಗೇಡ್‌ ವಿರೋಧಿ ಪಾಳೆಯ ಹುಬ್ಬೇರಿಸುವಂತೆ ಮಾಡಿದ್ದಾರೆ.

Advertisement

ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಜಿಲ್ಲಾ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು, ದೇಶಕ್ಕೆ ಸ್ವಾತಂತ್ರÂ ಬಂದು 70 ವರ್ಷ ಕಳೆದಿವೆ. ಇಂದಿಗೂ ಹಲವಾರು ಸಮುದಾಯದವರು ಉಡಲು ಬಟ್ಟೆಯಿಲ್ಲದೆ, ಹೊಟ್ಟೆಗೆ ಅನ್ನವಿಲ್ಲದೆ, ಶಿಕ್ಷಣವಿಲ್ಲದೆ
ಬದುಕುತ್ತಿದ್ದಾರೆ. ಗುಡಿಸಿಲಿನಲ್ಲೇ ವಾಸಿಸುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಇಂತಹವರ ಅಭಿವೃದ್ಧಿಗಾಗಿಯೇ
ರಾಯಣ್ಣ ಬ್ರಿಗೇಡ್‌ ಅನ್ನು ಹುಟ್ಟುಹಾಕಲಾಗಿದೆಯೇ ಹೊರತು ಯಾರನ್ನೋ ಸಿಎಂ ಅಥವಾ ಶಾಸಕರನ್ನಾಗಿ ಮಾಡಲು ಅಲ್ಲ ಎಂದು ಹೇಳಿದರು.

ಮುಂದೆ ನೋಡೋಣ: ಜ.26ರಂದು ಕೂಡಲಸಂಗಮದಲ್ಲಿ 2 ಲಕ್ಷ ಜನರೊಂದಿಗೆ ಬ್ರಿಗೇಡ್‌ ಸಮಾವೇಶ ನಡೆಸಲು ನಿರೀಕ್ಷೆ ಹೊಂದಿದ್ದೇವೆ. ಆ ಬಳಿಕ ರಾಜ್ಯದಲ್ಲಿ ರಾಜಕೀಯ ಬದಲಾವಣೆ ಆದರೂ ಆಗಬಹುದು. ಏನಾಗುತ್ತದೆ ಎಂಬುದು
ಮುಂದೆ ನೋಡೋಣ ಎಂದರು. ಇದಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಯಡಿಯೂರಪ್ಪ
ಮತ್ತು ತಮ್ಮ ಮಧ್ಯೆ ಯಾವುದೇ ಗೊಂದಲ ಇಲ್ಲ. ರಾಯಣ್ಣ ಬ್ರಿಗೇಡ್‌ ಬಗ್ಗೆ ಅವರು ಈಚೆಗೆ ಏನೂ ಮಾತನಾಡಿಲ್ಲ ಎಂದು ಈಶ್ವರಪ್ಪ ಹೇಳಿದರು.

ಜಾತಿ- ಧರ್ಮದ ಆಧಾರದ ಮೇಲೆ ನಡೆಯುವ ಚುನಾವಣೆಗೆ ಸುಪ್ರೀಂ ಕೋರ್ಟ್‌ ತೀರ್ಪು ಚಾಟಿ ಬೀಸಿದೆ. ಈ ತೀರ್ಪು ಸ್ವಾಗತಾರ್ಹ. ಆದರೆ, ಇದು ಇಡೀ ದೇಶದಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳ್ಳಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next