Advertisement
ರದ್ದಾಗಲಿರುವ ರೈಲುಗಳು:ಹರಿಹರ-ಚಿತ್ರದುರ್ಗ-ಹರಿಹರ ಪ್ಯಾಸೆಂಜರ್ ರೈಲು ಮತ್ತು ಕೆಎಸ್‌ಆರ್ ಬೆಂಗಳೂರು-ಹುಬ್ಬಳ್ಳಿ, ಕೆಎಸ್‌ಆರ್ ಶಿವಮೊಗ್ಗ ಟೌನ್ ಪ್ಯಾಸೆಂಜರ್ (56917) ಮತ್ತು ಹುಬ್ಬಳ್ಳಿ-ಕೆಎಸ್‌ಆರ್ ಬೆಂಗಳೂರು (56914), ಶಿವಮೊಗ್ಗ ಟೌನ್-ಕೆಎಸ್‌ಆರ್ ಬೆಂಗಳೂರು ಪ್ಯಾಸೆಂಜರ್ (56918) ಮತ್ತು ಕೆಎಸ್‌ಆರ್ ಬೆಂಗಳೂರು-ಹುಬ್ಬಳ್ಳಿ , ಕೆಎಸ್‌ಆರ್ ಬೆಂಗಳೂರು-ಹೊಸಪೇಟೆ ಪ್ಯಾಸೆಂಜರ್ (56909) ಮತ್ತು ಹುಬ್ಬಳ್ಳಿ-ಕೆಎಸ್‌ಆರ್ ಬೆಂಗಳೂರು (56912), ಹೊಸಪೇಟೆ-ಕೆಎಸ್‌ಆರ್ ಬೆಂಗಳೂರು ಪ್ಯಾಸೆಂಜರ್ (56910) ನ. 28- ಡಿ.10ರವರೆಗೆ 13 ದಿನಗಳ ಕಾಲ ಹಾಗೂ ಚಿಕ್ಕಜಾಜೂರ-ಚಿತ್ರದುರ್ಗ-ಚಿಕ್ಕಜಾಜೂರ ಪ್ಯಾಸೆಂಜರ್ (56519/56520) ನ.30- ಡಿ.10ರವರೆಗೆ 11 ದಿನಗಳ ಕಾಲ ರದ್ದಾಗಲಿವೆ.
ಚಿಕ್ಕಜಾಜೂರ-ಗುಂತಕಲ್-ಚಿಕ್ಕಜಾಜೂರ ಪ್ಯಾಸೆಂಜರ್ (57451/57452) ನ.30- ಡಿ.4ರವರೆಗೆ ಭಾಗಶಃ ಅಮೃತಪುರ ಮತ್ತು ಚಿಕ್ಕಜಾಜೂರ ನಡುವೆ ರದ್ದಾಗಲಿದೆ. ಈ ರೈಲು ಚಿಕ್ಕಜಾಜೂರ ಬದಲು ಅಮೃತಪುರದಿಂದ ಆರಂಭವಾಗಲಿದೆ. ಚಿಕ್ಕಜಾಜೂರ-ಹುಬ್ಬಳ್ಳಿ-ಚಿಕ್ಕಜಾಜೂರ ಪ್ಯಾಸೆಂಜರ್ (56915/56916) ನ.28ರಿಂದ ಡಿ.10ರವರೆಗೆ ಭಾಗಶಃ ಚಿಕ್ಕಜಾಜೂರ ಮತ್ತು ಹರಿಹರದಿಂದ ರದ್ದಾಗಲಿದೆ. ಯಶವಂತಪುರ-ಹರಿಹರ ಎಕ್ಸ್‌ಪ್ರೆಸ್ (16577) ಡಿ.5ರಂದು ಮತ್ತು ಹರಿಹರ-ಯಶವಂತಪುರ (16578) ಡಿ.6ರಂದು ಭಾಗಶಃ ಚಿಕ್ಕಜಾಜೂರ ಮತ್ತು ಹರಿಹರ ನಡುವೆ ರದ್ದಾಗಲಿದೆ. ಈ ರೈಲು ಹರಿಹರ ಬದಲು ಚಿಕ್ಕಜಾಜೂರನಿಂದ ಆರಂಭವಾಗಲಿದೆ. ಅರಸಿಕೆರೆ-ಹುಬ್ಬಳ್ಳಿ ಪ್ಯಾಸೆಂಜರ್ (56273) ರೈಲು ನ.30 ಮತ್ತು ಡಿ.6ರಂದು ಅರಸೀಕೆರೆ ಮತ್ತು ದಾವಣಗೆರೆ ನಡುವೆ ಭಾಗಶಃ ರದ್ದಾಗಲಿದೆ. ಈ ರೈಲು ಅರಸಿಕೆರೆ ಬದಲು ದಾವಣಗೆರೆಯಿಂದ ಸಂಚರಿಸಲಿದೆ. ನಿಯಂತ್ರಣ:
ಧಾರವಾಡ-ಕೆಎಸ್‌ಆರ್ ಬೆಂಗಳೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್ (12726) ರೈಲನ್ನು ಡಿ.4ರಂದು ಮಾರ್ಗ ಮಧ್ಯದ ನಿಲ್ದಾಣದಲ್ಲಿ 25 ನಿಮಿಷ ನಿಯಂತ್ರಿಸಲಾಗುವುದು. ಡಿ.5ರಂದು ಹುಬ್ಬಳ್ಳಿಯಿಂದ ನಿರ್ಗಮಿಸುವ ಗಾಂಧಿಧಾಮ-ಕೆಎಸ್‌ಆರ್ ಎಕ್ಸ್‌ಪ್ರೆಸ್ (16505) ರೈಲನ್ನು ಹಾಗೂ ಡಿ.12ರಂದು ಹುಬ್ಬಳ್ಳಿಯಿಂದ ನಿರ್ಗಮಿಸುವ ಅಜ್ಮಿàರ-ಮೈಸೂರು ಎಕ್ಸ್‌ಪ್ರೆಸ್ (16209) ರೈಲನ್ನು 38 ನಿಮಿಷ ದಾವಣಗೆರೆಯಲ್ಲಿ ನಿಯಂತ್ರಿಸಲಾಗುವುದು ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.