Advertisement

ಕೆಲ ಧರ್ಮಗುರು, ಬಿಷಪ್‌ರಿಂದ ಲೈಂಗಿಕ ಕಿರುಕುಳ: ಪೋಪ್‌

12:30 AM Feb 07, 2019 | |

ಅಬುಧಾಬಿ/ಕೊಚ್ಚಿ: ಕ್ರೈಸ್ತ ಸನ್ಯಾಸಿನಿಯರಿಗೆ ಧರ್ಮ ಗುರುಗಳು, ಬಿಷಪ್‌ಗ್ಳು ಲೈಂಗಿಕ ಕಿರುಕುಳ ನೀಡುತ್ತಿರುವುದು ಹೌದು ಎಂದು ಪೋಪ್‌ ಫ್ರಾನ್ಸಿಸ್‌ ಒಪ್ಪಿಕೊಂಡಿದ್ದಾರೆ. ವ್ಯಾಟಿಕನ್‌ನಿಂದ ಮಹಿಳೆಯರಿಗಾಗಿ ಪ್ರಕಟವಾಗುವ ನಿಯತ ಕಾಲಿಕದಲ್ಲಿ ಲೈಂಗಿಕ ಕಿರುಕುಳದ ಬಗ್ಗೆ ವರದಿ ಪ್ರಕಟವಾಗಿ ರುವಂತೆಯೇ ಅಬುಧಾಬಿ ಪ್ರವಾಸದಿಂದ ವ್ಯಾಟಿಕನ್‌ಗೆ ಹಿಂತಿರುಗುವ ವೇಳೆ ಮಾತನಾಡಿದ ಕ್ರಿಶ್ಚಿಯನ್ನರ ಪರಮೋಚ್ಚ ಧರ್ಮಗುರು ಅಂಥ ಬೆಳವಣಿಗೆಗಳ ಬಗ್ಗೆ ಒಪ್ಪಿಕೊಂಡಿದ್ದಾರೆ. “ಕೆಲ ಧರ್ಮ ಗುರುಗಳು ಮತ್ತು ಬಿಷಪ್‌ ಕ್ರೈಸ್ತ ಸನ್ಯಾಸಿನಿಯರಿಗೆ ಕಿರುಕುಳ ನೀಡಿದ್ದಾರೆ. “ವಿಶ್ವದ ಕೆಲವು ಭಾಗಗಳಲ್ಲಿ ಇಂಥ ಪ್ರಕರಣಗಳು ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಅಂಥವುಗಳನ್ನು ತಡೆಯಲು ವ್ಯಾಟಿಕನ್‌ ಕ್ರಮಗಳನ್ನು ಕೈಗೊಳ್ಳು ತ್ತಿದೆ. ಕೆಲವು ಧರ್ಮ ಗುರುಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಅವುಗಳ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂಬ ಮಾತುಗಳನ್ನು ಕೇಳಲು ಬಯಸುವುದಿಲ್ಲ’ ಎಂದು ಹೇಳಿದ್ದಾರೆ. ಫೆ.21ರಂದು ಕ್ರೈಸ್ತ ಧರ್ಮ ಗುರುಗಳ ಸಭೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಾಟಿಕನ್‌ನಲ್ಲಿ ನಡೆಯಲಿದೆ. ಇದೇ ವೇಳೆ ಕೇರಳ ಕ್ಯಾಥೊಲಿಕ್‌ ಬಿಷಪ್‌ರ ಕೌನ್ಸಿಲ್‌ ಚರ್ಚ್‌ ಗಳಲ್ಲಿ ಲೈಂಗಿಕ ಕಿರುಕುಳ ತಡೆಯಲು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next