ಜೈಪುರ: ಕೆಲವರು ದೇಶದಲ್ಲಿ ಒಳ್ಳೆಯದನ್ನು ಕಾಣಲು ಬಯಸುವುದಿಲ್ಲ ಮತ್ತು ವಿವಾದವನ್ನು ಸೃಷ್ಟಿಸಲು ಇಷ್ಟಪಡುವಷ್ಟು ನಕಾರಾತ್ಮಕತೆಯಿಂದ ತುಂಬಿದ್ದಾರೆ ಎಂದು ವಿರೋಧ ಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಬುಧವಾರ ವಾಗ್ದಾಳಿ ನಡೆಸಿದರು.
ರಾಜಸ್ಥಾನದ ನಾಥದ್ವಾರ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 5,500 ಕೋ.ರೂ .ವೆಚ್ಚದ ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಎಲ್ಲವನ್ನೂ ಮತದಿಂದ ಅಳೆಯುವವರಿಗೆ ದೇಶವನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.
ಈ ಚಿಂತನೆಯಿಂದಾಗಿ ಈ ಹಿಂದೆ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗಿರಲಿಲ್ಲ ಎಂದು ಹೇಳಿದರು.
ಯಾರನ್ನೂ ಹೆಸರಿಸದೆ ವಾಗ್ದಾಳಿ ನಡೆಸಿದ ಮೋದಿ ದೇಶದಲ್ಲಿ ಕೆಲವರು ಇಂತಹ ವಿಕೃತ ಮನಸ್ಥಿತಿಗೆ ಬಲಿಯಾಗಿದ್ದಾರೆ. ಅವರು ತುಂಬಾ ನಕಾರಾತ್ಮಕತೆಯಿಂದ ತುಂಬಿದ್ದಾರೆ ಅವರು ದೇಶದಲ್ಲಿ ಒಳ್ಳೆಯದನ್ನು ನೋಡಲು ಬಯಸುವುದಿಲ್ಲ ಅವರು ವಿವಾದ ಸೃಷ್ಟಿಸಲು ಮಾತ್ರ ಇಷ್ಟಪಡುತ್ತಾರೆ. ಸುಸ್ಥಿರ ಅಭಿವೃದ್ಧಿ ಮತ್ತು ಕ್ಷಿಪ್ರ ಅಭಿವೃದ್ಧಿಗೆ ಮೂಲ ವ್ಯವಸ್ಥೆಯ ಜತೆಗೆ ಆಧುನಿಕ ಮೂಲಸೌಕರ್ಯಗಳನ್ನು ಸೃಷ್ಟಿಸುವುದು ಅಗತ್ಯ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ ಎಂದಿದ್ದಾರೆ.
Related Articles
ಈಗಾಗಲೇ ಸಾಕಷ್ಟು ವೈದ್ಯಕೀಯ ಕಾಲೇಜುಗಳನ್ನು ನಿರ್ಮಿಸಿದ್ದರೆ ವೈದ್ಯರ ಕೊರತೆ ಇರುತ್ತಿರಲಿಲ್ಲ ಎಂದರು.