ಚಿಕ್ಕಮಗಳೂರು: “ಕಾಂಗ್ರೆಸ್‌ನಲ್ಲಿರುವ ಹಲವು ಪ್ರಾಮಾಣಿಕ ಶಾಸಕರು ಆ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಲಿದ್ದಾರೆ’ ಎನ್ನುವ ಮೂಲಕ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಜನ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಕ್ಕೆ ವಿರುದಟಛಿವಾಗಿ ಮತ ನೀಡಿದ್ದರು. ಆದರೆ ಅವೆರಡೂ ಪಕ್ಷಗಳು ವಾಮಮಾರ್ಗದಿಂದ ಆಡಳಿತ ಹಿಡಿದಿವೆ. ಈ ಬಗ್ಗೆ ಕಾಂಗ್ರೆಸ್‌ನ ಹಲವು ಪ್ರಾಮಾಣಿಕ ಶಾಸಕರಿಗೆ ಅಸಮಾಧಾನ ಹಾಗೂ ನೋವು ಇದೆ ಎಂದರು.
ಚುನಾವಣಾ ಫಲಿತಾಂಶ ಬರುತ್ತಿದ್ದಂತೆಯೇ ಹಲವು ಶಾಸಕರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿಗೆ ಬರಲು ಸಿದ್ಧರಿದ್ದರು. ಆದರೆ ಸರ್ವೋಚ್ಚ ನ್ಯಾಯಾಲಯ ಕೇವಲ 1 ದಿನದಲ್ಲಿ ಬಹುಮತ ಸಾಬೀತುಪಡಿಸುವಂತೆ ತೀರ್ಪು ನೀಡಿದ್ದರಿಂದ ಅದು ಸಾಧ್ಯವಾಗಲಿಲ್ಲ. ಈಗಲೂ ಹಲವು ಶಾಸಕರು ನಮ್ಮ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ. ನಾವು ಯಾರನ್ನೂ ಪಕ್ಷಕ್ಕೆ ಬರುವಂತೆ ಕರೆಯುವುದಿಲ್ಲ. ಆದರೆ ಅವರಾಗಿಯೇ ಬಂದಲ್ಲಿ ಬರಮಾಡಿಕೊಳ್ಳಲಾಗುವುದು ಎಂದರು.
ಸೋಲಿನ ಹೆಸರಿನಲ್ಲಿ ಎಸ್.ಆರ್. ಪಾಟೀಲ್ ರಾಜೀನಾಮೆ ಕೊಡಿಸಿದ್ದಾರೆ.ಸೋತರೆ ಎಸ್.ಆರ್.ಪಾಟೀಲ್, ಗೆದ್ದರೆ ಅದು ಸೋನಿಯಾ ಮತ್ತು ರಾಹುಲ್.ಇದೆಂಥಾ ರಾಜಕಾರಣ? ರಾಜ್ಯ ಹಾಗೂ ದೇಶದ ಜನತೆ ಎಲ್ಲ ವನ್ನೂ ಗಮನಿಸುತ್ತಿರುತ್ತಾರೆ. ಅವರೇ ಇದಕ್ಕೆ ಸೂಕ್ತ ಪ್ರತಿಕ್ರಿಯೆ
ನೀಡುತ್ತಾರೆ ಎಂದರು. ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡದ ಹಿನ್ನೆಲೆಯಲ್ಲಿ ಬಿ.ಜಿ.ಪುಟ್ಟಸ್ವಾಮಿ ಅಸಮಾಧಾನಗೊಂಡಿರುವ ಕುರಿತು ಪ್ರತಿಕ್ರಿಯಿಸಿದ ಈಶ್ವರಪ್ಪ, ಪಕ್ಷದಲ್ಲಿ ಇರುವವರು ಸ್ಥಾನಮಾನ ಕೇಳುವುದು ಸಹಜ. ಎಲ್ಲರಿಗೂ ಸ್ಥಾನಮಾನ ಕೊಡಲು ಸಾಧ್ಯವಾಗುವುದಿಲ್ಲ. ಒಬ್ಬರಿಗೆ ಸಿಕ್ಕಾಗ ಮತ್ತೂಬ್ಬರಿಗೆ ನೋವಾಗುವುದು ಸಹಜ. ಅದನ್ನು ಪಕ್ಷದ ನಾಯಕರ ಬಳಿ ಹೇಳಿಕೊಳ್ಳುತ್ತಾರೆ. ಎಲ್ಲವೂ ಸರಿಯಾಗಿದೆ ಎಂದು ಹೇಳಿದರು.