ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಇಂದು ಭಾರೀ ಚಟುವಟಿಕೆಗಳು ನಡೆಯುತ್ತಿದೆ. ರಾಜ್ಯಕ್ಕೆ ಆಗಮಿಸಿರುವ ಉಸ್ತುವಾರಿ ಅರುಣ್ ಸಿಂಗ್ ಅವರೊಂದಿಗೆ ಶಾಸಕರು ಚರ್ಚೆ ನಡೆಸುತ್ತಿದ್ದಾರೆ. ಸುಮಾರು 30 ಮಂದಿ ಶಾಸಕರು ಅರುಣ್ ಸಿಂಗ್ ಅವರ ಭೇಟಿಗೆ ಸಮಯ ಕೇಳಿದ್ದು, ಒಬ್ಬರಾದ ಬಳಿಕ ಒಬ್ಬರಂತೆ ಭೇಟಿಯಾಗುತ್ತಿದ್ದಾರೆ.
ಅರುಣ್ ಸಿಂಗ್ ಅವರನ್ನು ಭೇಟಿಯಾಗಿರುವ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ ಅವರು ಸಂಪುಟ ಪುನಾರಚನೆಗೆ ಬೇಡಿಕೆ ಇಟ್ಟಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಹೆಚ್ ವಿಶ್ವನಾಥ್ ಒಬ್ಬ ಹುಚ್ಚ… ಅವರ ಆರೋಗ್ಯ ತಪಾಸಣೆ ಮಾಡಿಸಬೇಕು: ಎಸ್ .ಆರ್. ವಿಶ್ವನಾಥ್
ಉತ್ತರ ಕರ್ನಾಟಕ ಭಾಗದ ಕೆಲ ಶಾಸಕರ ಅಭಿಪ್ರಾಯವನ್ನು ಅರುಣ್ ಸಿಂಗ್ ಅವರಿಗೆ ತಿಳಸಿರುವ ನಡಹಳ್ಳಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ನಾಯಕತ್ವ ಬಗ್ಗೆ ನಮ್ಮದೇನೂ ಪ್ರಶ್ನೆ ಇಲ್ಲ. ಆದರೆ ಸಂಪುಟದಲ್ಲಿ ಬೇರೆಯವರಿಗೂ ಅವಕಾಶ ಮಾಡಿಕೊಡಿ ಎಂದು ಹೇಳಿದ್ದಾರೆ.
ನಾಯಕತ್ವ ಬದಲಾವಣೆ ಮಾಡುವುದು ಬೇಡ, ಸಂಪುಟ ಪುನಾರಚನೆ ಮಾಡಿ, ಬೇರೆಯವರಿಗೆ ಅವಕಾಶ ನೀಡಿ ಸಾಮಾಜಿಕ ನ್ಯಾಯಕೊಡಿ. ಯಾವ ಸಮುದಾಯಕ್ಕೆ ಅವಕಾಶ ಸಿಕ್ಕಿಲ್ಲವೋ ಅವರಿಗೆ ಅವಕಾಶ ಮಾಡಿಕೊಡಿ ಎಂದು ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ ಹೇಳಿದ್ದಾರೆ.
ಇದನ್ನೂ ಓದಿ: ಈಶ್ವರಪ್ಪ ಓಪನ್ ಹಾರ್ಟ್ ಮನುಷ್ಯ, ವಲಸಿಗರ ಬಗ್ಗೆ ಕೆಟ್ಟದಾಗಿ ಮಾತಾಡಿಲ್ಲ: ರಮೇಶ ಜಾರಕಿಹೊಳಿ