Advertisement

ಆರೋಗ್ಯಕ್ಕೆ ಮಾರಕವಾದ ತಂಬಾಕು ಸೇವನೆ ತ್ಯಜಿಸೋಣ : ಸೋಮಶೇಖರ್ ಮೇಟಿ ಮನವಿ

02:27 PM Feb 12, 2022 | Team Udayavani |

ಕುಷ್ಟಗಿ: ವಿಶ್ವದಾದ್ಯಂತ ತಂಬಾಕು ಸೇವನೆಯಿಂದ ಪ್ರತಿವರ್ಷವೂ ಅರವತ್ತು ಲಕ್ಷಕ್ಕಿಂತಲೂ ಹೆಚ್ಚು ಜನರು ಸಾವನ್ನಪ್ಪುತ್ತಿದ್ದಾರೆ ಮತ್ತು ಕ್ಯಾನ್ಸರ್ ಹೃದಯ ಸಂಬಂಧಿ ಕಾಯಿಲೆಗಳಿಗೆ ಪ್ರಮುಖವಾಗಿ ತಂಬಾಕು ಸೇವನೆ ಕಾರಣವಾಗುತ್ತದೆ ಆದ್ದರಿಂದ ನಮ್ಮ ಆರೋಗ್ಯಕ್ಕೆ ಮಾರಕವಾಗಿರುವ ತಂಬಾಕು ಸೇವನೆಯನ್ನು ಪ್ರತಿಯೊಬ್ಬರು ಧೃಡ ಮನಸ್ಸು ಮಾಡಿ ಬಿಡಬೇಕು ಎಂದು ಹಿರಿಯ ಆರೋಗ್ಯ ನಿರೀಕ್ಷಕರಾದ ಸೋಮಶೇಖರ್ ಮೇಟಿ ಕರೆ ನೀಡಿದರು.

Advertisement

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಇವರ ಆಶ್ರಯದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಸಂಸ್ಥೆ ಕುಷ್ಟಗಿ ತಂಡದವರಿಂದ ಬಸ್ ನಿಲ್ದಾಣದಲ್ಲಿ ನಡೆದ ಬೀದಿ ನಾಟಕ ಕಾರ್ಯಕ್ರಮವನ್ನು ತಮಟೆ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಹಿರಿಯ ಆರೋಗ್ಯ ಸುರಕ್ಷಿತ ಅಧಿಕಾರಿ ಸುಶೀಲಾ ಶ್ರೀ ರಾಜಾರಾಮ್, ಮಲೇರಿಯಾ ನಿಯಂತ್ರಣ ಅಧಿಕಾರಿ ಪ್ರಕಾಶ ಗುತ್ತೇದಾರ್ ಐಶ್ವರ್ಯ ಸಾರಿಗೆ ಸಂಸ್ಥೆಯ ಘಟಕ ಅಧಿಕಾರಿಗಳು ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ : ವೈದ್ಯರು, ಆ್ಯಂಬುಲೆನ್ಸ್‌ ಬಂದರೂ ಚಿಕಿತ್ಸೆಗೆ ಮನೆ ಬಾಗಿಲು ತೆರೆಯದ ಗರ್ಭಿಣಿ

ನಂತರ ನಡೆದ ಬೀದಿ ನಾಟಕ ಪ್ರದರ್ಶನದಲ್ಲಿ ತಂಬಾಕು ಗುಟ್ಕಾ ಸೇವನೆ ಅದರಿಂದಾಗುವ ದುಷ್ಪರಿಣಾಮಗಳು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ನಿಷೇಧ ತಂಬಾಕು ತ್ಯಜಿ ಸುವುದು ಹೇಗೆ ಮತ್ತು ತಂಬಾಕು ತ್ಯಜಿಸುವುದರಿಂದ ಆಗುವ ಪ್ರಯೋಜನ ಗಳ ಕುರಿತು ವಿವಿಧ ಸನ್ನಿವೇಶಗಳ ಮೂಲಕ ಜನಸಾಮಾನ್ಯರಿಗೆ ಮನಮಿಡಿಯುವ ಹಾಗೆ ಬೀದಿ ನಾಟಕ ಜಾಗೃತಿ ಗೀತೆಗಳು ಕಾರ್ಯಕ್ರಮ ನೀಡಿದರು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಶರಣಪ್ಪ ವಡಿಗೇರಿ, ಕಲಾ ತಂಡದಲ್ಲಿ ಶ್ರೀ ಶುಕಮುನಿ ಗಡಿಗಿ ಬನ್ನಿಗೋಳ ನಾಗಪ್ಪ ಜರ ಗಡ್ಡಿ, ನಾಗರಾಜ್ , ಗೌರವ್ವ ಕುಂಬಾರ್, ಗಿರಿಜಾ ಸೂಡಿ, ಶಿವಣ್ಣ ಪೂಜಾರ್, ಚನ್ನಪ್ಪ ಬಾವಿಮನಿ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next