Advertisement

ಅಲ್-ಶಬಾಬ್ ಉನ್ನತ ಉಗ್ರ ನಾಯಕ ಅಬ್ದುಲ್ಲಾಹಿ ನಾದಿರ್ ಹತ್ಯೆ

07:07 PM Oct 03, 2022 | Team Udayavani |

ಮೊಗಾದಿಶು: ಸೊಮಾಲಿಯಾ ರಾಷ್ಟ್ರೀಯ ಸೇನೆ ಮತ್ತು ಅಂತಾರಾಷ್ಟ್ರೀಯ ಪಾಲುದಾರ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಅಲ್-ಶಬಾಬ್ ಉಗ್ರಗಾಮಿ ಗುಂಪಿನ ಉನ್ನತ ನಾಯಕ ಅಬ್ದುಲ್ಲಾಹಿ ನಾದಿರ್ ನನ್ನು ಹತ್ಯೆ ಮಾಡಲಾಗಿದೆ ಎಂದು ಸೊಮಾಲಿಯಾ ಅಧಿಕಾರಿಗಳು ಹೇಳಿದ್ದಾರೆ.

Advertisement

ಅಬ್ದುಲ್ಲಾಹಿ ನಾದಿರ್ ನ ಸುಳಿವು ನೀಡಿದವರಿಗೆ 3 ಮಿಲಿಯನ್ ಡಾಲರ್ ಇನಾಮು ನೀಡುವುದಾಗಿ ಅಮೆರಿಕ ಹೇಳಿತ್ತು.

ಸೊಮಾಲಿ ಸರಕಾರವು ನಾದಿರ್ ನನ್ನು “ಅಲ್-ಶಬಾಬ್‌ನ ಪ್ರಮುಖ ಸದಸ್ಯರಲ್ಲಿ ಒಬ್ಬ ಎಂದು ಘೋಷಿಸಿತ್ತು. ಮಧ್ಯ ಜುಬ್ಬಾ ಪ್ರದೇಶದ ಹರಂಕಾ ಗ್ರಾಮದಲ್ಲಿ ಶನಿವಾರ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಸೋಮವಾರ ಬಿಡುಗಡೆ ಮಾಡಿದ ಸರ್ಕಾರದ ಹೇಳಿಕೆ ತಿಳಿಸಿದೆ.

“ಅವನ ಸಾವು ಸೊಮಾಲಿ ರಾಷ್ಟ್ರದಿಂದ ತೆಗೆದುಹಾಕಲ್ಪಟ್ಟ ಮುಳ್ಳಾಗಿದೆ, ಮತ್ತು ಸೊಮಾಲಿ ಜನರು ಅವನ ದಾರಿತಪ್ಪುವಿಕೆ ಮತ್ತು ಭಯಾನಕ ಕೃತ್ಯಗಳಿಂದ ಮುಕ್ತರಾಗುತ್ತಾರೆ” ಎಂದು ಹೇಳಿಕೆ ಬಿಡುಗಡೆ ಮಾಡಲಾಗಿದೆ.

ಸಾವಿರಾರು ಹೋರಾಟಗಾರರನ್ನು ಹೊಂದಿದ್ದು, ಸೊಮಾಲಿಯಾದ ಅಧ್ಯಕ್ಷರು ಇತ್ತೀಚೆಗೆ ಅಲ್-ಶಬಾಬ್ ವಿರುದ್ಧ ಸಂಪೂರ್ಣ ಯುದ್ಧ ಘೋಷಿಸಿದ್ದರು, ದಕ್ಷಿಣ ಮತ್ತು ಮಧ್ಯ ಸೊಮಾಲಿಯಾದ ದೊಡ್ಡ ಭಾಗಗಳನ್ನು ನಿಯಂತ್ರಿಸುತ್ತಿತ್ತು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next