Advertisement

ಸ್ಲಂ ಜನರ ಸಮಸ್ಯೆಗೆ ಪರಿಹಾರ ನೀಡಿ

09:47 AM Jun 24, 2019 | Suhan S |

ಗದಗ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಮಾದರಿಯಲ್ಲಿ ನಗರ ಪ್ರದೇಶದ ಸ್ಲಂಗಳಲ್ಲಿ ವಾಸ್ತವ್ಯ ಹೂಡುವ ಮೂಲಕ ಕೊಳಚೆ ಪ್ರದೇಶದ ಜನರ ಸಮಸ್ಯೆ ಪರಿಹರಿಸಬೇಕು ಎಂದು ಸ್ಲಂ ಜನಾಂದೋಲನ ಸಂಘಟನೆ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ ಹೇಳಿದರು.

Advertisement

ಸ್ಲಂ ಜನಾಂದೋಲನ ಹಾಗೂ ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣ ಸಮಿತಿ ಸಂಯುಕ್ತಾಶ್ರಯದಲ್ಲಿ ನಗರದ ಕೆ.ಎಚ್.ಪಾಟೀಲ ಸಭಾಂಗಣದಲ್ಲಿ ರವಿವಾರ ನಡೆದ ಸ್ಲಂ ಜನರ ಬೃಹತ್‌ ಸಮಾವೇಶ ಹಾಗೂ ಸಾಂಸ್ಕೃತಿಕ ಹಬ್ಬ ಉದ್ಘಾಟಿಸಿ ಅವರು ಮಾತನಾಡಿ, ಜಿಲ್ಲೆಯ ಸ್ಲಂ ಪ್ರದೇಶಗಳನ್ನು ಪಟ್ಟಿ ಮಾಡಿ, ಅಲ್ಲಿ ವಾಸ್ತವ್ಯ ಮಾಡಬೇಕು ಎಂದರು.

ಸ್ಲಂ ನಿವಾಸಿಗಳ ಕಷ್ಟಗಳನ್ನು ಪರಿಹಾರ ಮಾಡುವಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಜಿಲ್ಲೆಯ ಎಲ್ಲಾ ಸ್ಲಂ ನಿವಾಸಿಗಳು ಸಂಘಟನೆ ಮೂಲಕ ಹೋರಾಟ ಮಾಡಬೇಕು. ಸಂಘಟನಾತ್ಮಕ ಹೋರಾಟದಿಂದ ನ್ಯಾಯೋಚಿತ ಬೇಡಿಕೆ ಈಡೇರಿಸಿಕೊಳ್ಳಬಹುದು. ಅದರೊಂದಿಗೆ ಸ್ಲಂ ಜನರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.

ಜಿಲ್ಲಾ ಸ್ಲಂ ಸಮಿತಿ ಜಿಲ್ಲಾಧ್ಯಕ್ಷ ಇಮ್ತಿಯಾಜ್‌ ಮಾನ್ವಿ ಮಾತನಾಡಿ, ನಗರದ ಗಂಗಿಮಡಿಯಲ್ಲಿ ಪ್ರಧಾನ ಮಂತ್ರಿಗಳ ಆವಾಸ್‌ ಯೋಜನೆಯಲ್ಲಿ 3,630 ಮನೆಗಳನ್ನು ನಿರ್ಮಾ ಣ ಮಾಡಲಾಗುತ್ತಿದೆ. ಅವುಗಳ ಹಂಚಿಕೆಯಲ್ಲಿ ಸ್ಲಂ ನಿವಾಸಿಗಳಿಗೆ ಮೊದಲ ಆದ್ಯತೆ ನೀಡಬೇಕು. ಕಳೆದ ಹಲವು ವರ್ಷಗಳಿಂದ ಸ್ಲಂ ನಿವಾಸಿಗಳನ್ನು ರಾಜಕಾರಣಿಗಳು ವೋಟ್ ಬ್ಯಾಂಕ್‌ ಆಗಿ ಬಳಸಿಕೊಂಡಿದ್ದಾರೆ. ಆದ್ದರಿಂದ ಸ್ಲಂ ಜನರು ಬದಲಾಗಬೇಕು. ಚುನಾವಣೆ ಸಂದರ್ಭದಲ್ಲಿ ಬಣ್ಣದ ಮಾತಿಗೆ ಮರಳಾಗದೇ, ನೈಜವಾಗಿ ನಮ್ಮ ಸಮಸ್ಯೆಗೆ ಸ್ಪಂದಿಸುವವ ಅಭ್ಯರ್ಥಿಗಳನ್ನೇ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಅಂಜುಮನ್‌ ಇಸ್ಲಾಂ ಕಮಿಟಿ ಅಧ್ಯಕ್ಷ ಮಹಮ್ಮದ್‌ ಯುಸೂಫ್‌ ನಮಾಜಿ, ಮುಂಡರಗಿ ಅಂಜುಮನ್‌ ಕಮಿಟಿ ಅಧ್ಯಕ್ಷ ನಬಿಸಾಬ ಕೇಲೂರ, ರಾಜ್ಯ ಮುತ್ತಣ್ಣ ಬಾವಿಮನಿ, ಮಹಿಳಾ ಸಮಿತಿಯ ಪರ್ವಿನ್‌ ಬಾನು ಹವಾಲ್ದಾರ್‌, ಮೆಹರುನ್ನಿಸಾ ಡಲಾಯತ್‌, ತಮ್ಮನ್ನಾ ಧಾರವಾಡ, ಉಸ್ಮಾನ್‌ ಚಿತ್ತಾಪುರ, ರಫೀಕ್‌ ಧಾರವಾಡ, ಶೋಭಾ ಕಮತರ, ಫಕ್ಕೀರಪ್ಪ ತಳವಾರ ಮತ್ತಿತರರು ಇದ್ದರು.

Advertisement

ಬೃಹತ್‌ ಜಾಥಾ: ಸ್ಲಂ ಜನರ ಬೃಹತ್‌ ಸಮಾವೇಶ ಹಾಗೂ ಸಾಂಸ್ಕೃತಿಕ ಹಬ್ಬದ ಅಂಗವಾಗಿ ಇಲ್ಲಿನ ನಗರಸಭೆ ಆವರಣದಿಂದ ಗಾಂಧಿ ವೃತ್ತ, ರೋಟರಿ ಸರ್ಕಲ್, ಭೂಮ್ಮರಡ್ಡಿ ಸರ್ಕಲ್ ಮೂಲಕ ಎಂಪಿಎಂಸಿ ಆವರಣದ ಮೂಲಕ ಕೆ.ಎಚ್. ಪಾಟೀಲ ಸಭಾಂಗಣದ ವರೆಗೆ ಬೃಹತ್‌ ಜಾಥಾ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next