Advertisement
ಪಟ್ಟಣದ ಪುರಸಭೆ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ವತಿಯಿಂದ ನಡೆದ ಜನತಾ ದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಜನಸಾಮಾನ್ಯರು ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಅವರ ಸಮ್ಮುಖದಲ್ಲಿಯೇ ಮುಕ್ತಿ ನೀಡುವ ಸಲುವಾಗಿ ಜನತಾ ದರ್ಶನವನ್ನು ಹಮ್ಮಿಕೊಳ್ಳಲಾಗಿದ್ದು, ಇಲ್ಲಿ ನೀಡುವ ದೂರುಗಳಿಗೆ ಎರಡು ದಿನದಲ್ಲೇ ಬಗೆಹರಿಸಲಾಗುವುದು ಎಂದರು.
Related Articles
Advertisement
ಸ್ವಚ್ಛಂದ ಆಡಳಿತಕ್ಕೆ ವೇದಿಕೆ: ಪುರಸಭೆ ಮುಖ್ಯಾಧಿ ಕಾರಿ ಮೀನಾಕ್ಷಿ ಮಾತನಾಡಿ, ಸರ್ಕಾರದ ಈ ಕಾರ್ಯಕ್ರಮ ಪ್ರಮುಖವಾಗಿದ್ದು, ಸರ್ಕಾರ ಮತ್ತು ಸಾರ್ವಜನಿಕರ ನಡುವೆ ಸೇತುವೆಯಾಗಿ ಕಾರ್ಯನಿರ್ವ ಹಿಸುತ್ತಿದೆ. ಇದರಿಂದ ಉತ್ತಮ ಬಾಂಧವ್ಯದ ಜೊತೆಯಲ್ಲಿ ಸ್ವತ್ಛಂದ ಆಡಳಿತಕ್ಕೆ ವೇದಿಕೆಯಾಗಲಿದೆ. ಪುರಸಭೆ ವ್ಯಾಪ್ತಿಗೆ ಸಂಬಂಧಪಟ್ಟಂತೆ ಕೆಲವು ಅರ್ಜಿ ಗಳು ಬಂದಿದ್ದು, ಎರಡು ದಿನಗಳಲ್ಲಿ ಬಗೆಹರಿಸ ಲಾಗುವುದೆಂದು ತಿಳಿಸಿದರು.
ಕೋಲಾರ ಉಪಭಾಗಾ ಧಿಕಾರಿ ವೆಂಕಟಲಕ್ಷ್ಮೀ, ತಹಶೀಲ್ದಾರ್ ಯು.ರಶ್ಮಿ, ತಾಪಂ ಇಒ ಎಚ್.ರವಿಕುಮಾರ್, ಬಿಇಒ ಡಿ.ಎನ್. ಸುಕನ್ಯಾ, ಡಿವೈಎಸ್ಪಿ ಪಾಂಡುರಂಗ, ಸಿಡಿಪಿಒ ಎಂ. ಮುನಿರಾಜು, ಸಮಾಜ ಕಲ್ಯಾಣ ಅಧಿಕಾರಿ ಶಿವಾರೆಡ್ಡಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಪ್ರತಿಭಾ, ಬೆಸ್ಕಾಂ ಎಇಇ ರಾಮಕೃಷ್ಣಪ್ಪ, ಪುರಸಭೆ ಸದಸ್ಯ ಷಪಿ, ರಾಕೇಶಗೌಡ, ರತ್ನಮ್ಮ, ಕಂದಾಯ ನಿರೀಕ್ಷಕ ಅಜಯ್ ಕುಮಾರ್, ಕಾಮಸಮುದ್ರ ಪವನ್, ಗ್ರಾಮಲೆಕ್ಕಿಗ ಚೇತನ್ ಹಾಗೂ ಮತ್ತಿತರರು ಇದ್ದರು.
ಪಾರದರ್ಶಕ, ಭ್ರಷ್ಟಮುಕ್ತ ಆಡಳಿತಕ್ಕೆ ಮುನ್ನುಡಿ: ಮುಂದಿನ ದಿನಗಳಲ್ಲಿ ಹೋಬಳಿ ಮಟ್ಟದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಜನತಾದರ್ಶನ ಕಾರ್ಯಕ್ರಮವನ್ನು ಏರ್ಪಡಿಸಲಾಗುವುದು. ಈ ಮದ್ಯೆ ಪ್ರತಿ ಗ್ರಾಮಗಳಲ್ಲಿ ಗ್ರಾಮಸಭೆ ನಡೆಸುವುದರ ಮೂಲಕ ತಾಲೂಕು ಆಡಳಿತ ಅಧಿಕಾರಿಗಳ ಸಮ್ಮುಖದಲ್ಲಿ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಪಾರದರ್ಶಕ ಭ್ರಷ್ಟಮುಕ್ತ ಆಡಳಿತಕ್ಕೆ ಮುನ್ನುಡಿ ಬರೆಯಲು ಜನತಾದರ್ಶನ ಪೂರಕವಾಗಿದೆ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹೇಳಿದರು.
156 ಅರ್ಜಿ ಸಲ್ಲಿಕೆ : ಇಂದಿನ ಜನತಾದರ್ಶನದಲ್ಲಿ ಒಟ್ಟು 156 ಅರ್ಜಿ ಸಲ್ಲಿಕೆಯಾದವು. ಕಂದಾಯ ಇಲಾಖೆ 106, ಪಂಚಾಯತ್ ರಾಜ್ ಇಲಾಖೆಗೆ 23, ಬೆಸ್ಕಾಂ ಇಲಾಖೆ 1 ಅರ್ಜಿ, ಶಿಕ್ಷಣ ಇಲಾಖೆ 1 ಅರ್ಜಿ, ನಗರಾಭಿವೃದ್ಧಿ ಇಲಾಖೆಗೆ 19ಅರ್ಜಿಗಳು ಸಲ್ಲಿಕೆ ಆಗಿವೆ. ಇದಕ್ಕೂ ಮುನ್ನ ಮಹಿಳಾ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪಶು ವೈದ್ಯ ಇಲಾಖೆ, ಪುರಸಭೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಕಂದಾಯ ಇಲಾಖೆಗಳ ಮಳಿಗೆಗಳನ್ನು ನಿರ್ಮಾಣ ಮಾಡುತ್ತೇವೆ ಎಂದು ಪುರಸಭೆ ಮುಖ್ಯಾಧಿಕಾರಿ ಮೀನಾಕ್ಷಿ ತಿಳಿಸಿದರು.