Advertisement

ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಆಗ್ರಹ

04:10 PM Jun 12, 2022 | Team Udayavani |

ಹಿರೇಬಾಗೇವಾಡಿ: ಸಮೀಪದ ಗ್ರಾಮದ ಕೆ.ಕೆ. ಕೊಪ್ಪದಲ್ಲಿ ಮಹಿಳೆಯರ ನೇತೃತ್ವದಲ್ಲಿ ಗ್ರಾಮಸ್ಥರು ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಆಗ್ರಹಿಸಿ ದಿಢೀರ್‌ ಪ್ರತಿಭಟನೆ ನಡೆಸಿದರು.

Advertisement

8-10 ದಿನಕ್ಕೊಮ್ಮೆ ಮಾತ್ರ ನಮ್ಮ ಭಾಗದಲ್ಲಿ ನೀರು ಬರುತ್ತಿದ್ದು, ನೀರಿನ ಆಭಾವದಿಂದ ಸಮಸ್ಯೆ ಆಗುತ್ತಿದೆ. ಆದರೆ ಈ ಬಗ್ಗೆ ಗ್ರಾಪಂ ಅಗತ್ಯ ಕ್ರಮ ಕೈಗೊಳ್ಳುವಲ್ಲಿ ವಿಳಂಬ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಮ್ಮ ವಾರ್ಡ್‌ಗೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳನ್ನು ಕರೆಯಿಸಿ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು ಸಮಸ್ಯೆಯೇ ಪರಿಹಾರಕ್ಕೆ ಆಗ್ರಹಿಸಿದರು.

ಗ್ರಾಮದಲ್ಲಿ ನಿಧಾನವಾಗಿ ಶಂಕಿತ ಡೆಂಘೀ ರೋಗ ಹರಡುತ್ತಿದೆ. ಈ ಬಗ್ಗೆ ಆರೋಗ್ಯ ಇಲಾಖೆಯು ಎಚ್ಚರ ವಹಿಸಿ ಜನರಲ್ಲಿ ಜಾಗೃತಿ ಮಾಡಿಸುತ್ತಿದೆ. ನೀರು ಬಹುದಿನಗಳವರಗೆ ಶೇಖರಣಿ ಮಾಡಿ ಕುಡಿದರೆ ಅದರಿಂದ ಆರೋಗ್ಯದ ಮೇಲೆ ಆಗುವಂತಹ ದುಷ್ಟರಿಣಾಮಗಳ ಬಗ್ಗೆ ಜನರಿಗೆ ತಿಳಿ ಹೇಳುತ್ತಿದೆ. ಆದರೆ ನೀವು 8-10 ದಿನಗಳವರಗೆ ನೀರು ಬಿಟ್ಟರೆ ಜನ ಹಾಗೂ ಜಾನುವಾರುಗಳ ಗತಿ ಏನು? ನಿಮಗೆ ನಮ್ಮ ಸಮಸ್ಯೆ ಅರ್ಥವಾಗುವುದಿಲ್ಲವೆ. ಫಿಲ್ಟರ್‌ ನೀರು ಇಲ್ಲ, ಕೆಸರು ಮಿಶ್ರಿತ ನೀರು ಕುಡಿದರೆ ಮೆಳೆಗಾಲದ ಆರಂಭದ ಈ ದಿನಮಾನದಲ್ಲಿ ಗ್ರಾಮಸ್ಥರು ಪರಿಸ್ಥಿತಿ ಏನು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮಸ್ಥರ ಅಹವಾಲು ಆಲಿಸಿದ ಗ್ರಾಪಂ ಅಭಿವೃದ್ಧಿ ಅಧಿಕಾರಿ ಶ್ರೀದೇವಿ ಹಿರೇಮಠ ಮಾತನಾಡಿ, ಆದಷ್ಟು ಬೇಗ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕೈಗೊಳ್ಳುವುದಾಗಿ ತಿಳಿಸಿದರು. ಗ್ರಾಪಂ ಸದಸ್ಯ ಈರಪ್ಪ ನಾವಲಗಿ, ಹಾಲಪ್ಪ ಡೊಂಗರಗಾವಿ, ಶಿವಪ್ಪ ಕಲಬಾವಿ, ಗಂಗಪ್ಪ ಬೆಂಡಿಗೇರಿ, ಯಮನಪ್ಪ ತಳವಾರ, ಚಂಬಯ್ಯ ಹಿರೇಮಠ, ಮಹಾಂತೇಶ ಕಲಬಾವಿ, ಬಸವರಾಜ ಡೊಂಗರಗಾವಿ, ಸೋಮಪ್ಪ ಕಲಬಾವಿ, ಯಶೋದಾ ಮುದ್ದಿನ, ಸುರೇಖಾ ಕಲಬಾವಿ, ಅನಸೂಯಾ ದನದಮನಿ, ಮಾಲಾ ಡೊಂಗರಗಾವಿ, ಗಂಗವ್ವ ಕಲಬಾವಿ, ಯಲ್ಲವ್ವ ಸಂಬರಗಿ, ನಿರ್ಮಲಾ ಪಗಾದ, ಬಸವ್ವ ಕಲಬಾವಿ ಸೇರಿದಂತೆ ಇನ್ನೂ ಅನೇಕ ಜನರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next