Advertisement

ಒಣತ್ಯಾಜ್ಯ ಸಂಸ್ಕರಣೆ ಖಾಸಗಿ ಸಂಸ್ಥೆಯ ಹೆಗಲಿಗೆ

11:55 AM Dec 10, 2022 | Team Udayavani |

ಪಚ್ಚನಾಡಿ: ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಘನತ್ಯಾಜ್ಯವನ್ನು ಸಂಸ್ಕರಣೆ, ವಿಲೇವಾರಿ ಮಾಡುವ ನಿಟ್ಟಿನಲ್ಲಿ ಹೊಸ ಟೆಂಡರ್‌ ಕರೆಯಲು ಮಂಗಳೂರು ಪಾಲಿಕೆ ನಿರ್ಧರಿಸಿದೆ.

Advertisement

ಇದರಂತೆ ಪಚ್ಚನಾಡಿ ಘನತ್ಯಾಜ್ಯ ಸಂಸ್ಕರಣೆ ಘಟಕದಲ್ಲಿ ಸ್ವೀಕರಿಸಲಾಗುವ ಒಣ ತ್ಯಾಜ್ಯವನ್ನು ಸಂಸ್ಕರಣೆ, ವಿಲೇವಾರಿ, ನಿರ್ವಹಣೆ ಮಾಡಲು 3 ವರ್ಷಗಳ ಅವಧಿಗೆ ಹೊಸ ಟೆಂಡರ್‌ ಮಾಡಿ ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಲಾಗುತ್ತದೆ.

ಪಾಲಿಕೆ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ಪಚ್ಚನಾಡಿ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ವೈಜ್ಞಾನಿಕವಾಗಿ ಸಂಸ್ಕರಣೆ, ವಿಲೇ ವಾರಿ ಮಾಡುವಂತೆ ಹೈಕೋರ್ಟ್‌ ನಲ್ಲಿ ದಾಖಲಾದ ದೂರಿನ ಆಧಾರ ದಲ್ಲಿ ಪಾಲಿಕೆಗೆ ಈಗಾಗಲೇ ನಿರ್ದೇಶನ ನೀಡಿದೆ. ಅದರಂತೆ ಸಂಗ್ರ ಹವಾಗುತ್ತಿರುವ ಒಣತ್ಯಾಜ್ಯಗಳ ಪೈಕಿ ಪುನರ್‌ ಬಳಕೆ, ಇತರ ಉಪಯೋಗ ವಾಗುವ ಪ್ಲಾಸ್ಟಿಕ್‌ ಚೀಲಗಳನ್ನು ಸಾಧ್ಯ ವಾದ ಮಟ್ಟಿಗೆ ಪ್ರತ್ಯೇಕಿಸಿ ಅನಂತರ ಶೇಖರಣೆಗೊಂಡ ಕೇವಲ ನಿರು ಪಯುಕ್ತ, ಇತರ ಒಣ, ಪ್ಲಾಸ್ಟಿಕ್‌ ತ್ಯಾಜ್ಯ ಗಳನ್ನು ಪಾಲಿಕೆಯಿಂದ ಆಯ್ಕೆಯಾದ ಸಂಸ್ಥೆಗೆ ಕಳೆದ ವರ್ಷ ನೀಡಲಾಗಿತ್ತು.

ದೈನಂದಿನ ಒಣ ತ್ಯಾಜ್ಯವನ್ನು ಸಂಸ್ಕ ರಣೆ ಮಾಡಿ ನಿರುಪಯುಕ್ತ ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ವಿಲೇವಾರಿ ಮಾಡಲು ನಿಯಮಾನುಸಾರ ಟೆಂಡರ್‌ ಕರೆದು ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಿದ ಮೇರೆಗೆ ಆಸಕ್ತ ಏಜೆನ್ಸಿಗಳಿಂದ ಪ್ರಸ್ತಾ ವನೆ ಪಡೆಯಲು ಎರಡು ಬಾರಿ ʼಪೂರ್ವ ಪ್ರಸ್ತಾವನೆ’ ಕರೆಯಲಾಗಿತ್ತು.

ಈ ಮಧ್ಯೆ ಪಚ್ಚನಾಡಿಯ ಘನತ್ಯಾಜ್ಯ ಸಂಸ್ಕರಣೆ ಘಟಕದಲ್ಲಿ ಸ್ವೀಕರಿಸಲಾಗುವ ಒಣತ್ಯಾಜ್ಯ ಘಟಕದ ನಿರ್ವಹಣೆಯನ್ನು ಪಾಲಿಕೆಯಿಂದ ಹೆಚ್ಚುವರಿಯಾಗಿ ಯಾವುದೇ ಶುಲ್ಕವನ್ನು ಪಡೆಯದೆ ಲಭ್ಯವಿರುವ ಬೇಲಿಂಗ್‌ ಯಂತ್ರ, ಪಾಲಿಕೆಯಿಂದ ನೀಡುವ ನಿಗದಿತ ಮಾನವ ಸಂಪನ್ಮೂಲದೊಂದಿಗೆ ಹೆಚ್ಚು ವರಿ ಕಾರ್ಮಿಕರ ಸೇವೆಯನ್ನು ಬಳಸಿ ನಿರ್ವಹಣೆ ಮಾಡಲು ಪ್ರಾಯೋಗಿಕ ವಾಗಿ ಷರತ್ತಿಗೊಳಪಟ್ಟು 2 ಸಂಸ್ಥೆಗಳಿಗೆ ಅನುಮತಿಯನ್ನು ನೀಡಲಾಗಿದೆ. ಪ್ರಾಯೋಗಿಕವಾಗಿ ಒಣ ತ್ಯಾಜ್ಯಗಳ ನಿರ್ವಹಣೆ ಮಾಡುತ್ತಿರುವ ಸಂಸ್ಥೆಗಳ ಅನುಭವ, ಸಂಸ್ಕರಣೆ ಮಾಹಿತಿಗಳನ್ನು ಆಧರಿಸಿ ಪಚ್ಚನಾಡಿ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಂಗ್ರಹವಾಗಿರುವ ಪಾರಂಪರಿಕ ತ್ಯಾಜ್ಯ ನಿರ್ವಹಣೆಗಾಗಿ ತಯಾರಿಸಲಾದ ಡಿಪಿಆರ್‌ ಆಧಾರದಲ್ಲಿ ಹೊಸ ದಾಗಿ ನಿರ್ವಹಣೆ ಮಾಡಲು ಪಾಲಿಕೆ ನಿರ್ಧರಿಸಿದೆ.

Advertisement

ಹಾಲಿ ಗುತ್ತಿಗೆ ಅವಧಿ ಮುಂದುವರಿಕೆ

ಈ ಪ್ರಕ್ರಿಯೆ ಅಂತಿಮಗೊಳ್ಳುವ ತನಕ ಪ್ರಸ್ತುತ ಒಣತ್ಯಾಜ್ಯ ಘಟಕದ ನಿರ್ವಹಣೆ ಯನ್ನು ಪಾಲಿಕೆಯಿಂದ ಹೆಚ್ಚುವರಿ ಯಾವುದೇ ಶುಲ್ಕವನ್ನು ಪಡೆಯದೇ ಲಭ್ಯ ವಿರುವ ಬೇಲಿಂಗ್‌ ಯಂತ್ರ, ಪಾಲಿ ಕೆಯಿಂದ ನೀಡುವ ನಿಗದಿತ ಮಾನವ ಸಂಪನ್ಮೂಲ ದೊಂದಿಗೆ ಹೆಚ್ಚುವರಿ ಸ್ವಂತ ಕಾರ್ಮಿಕರ ಸೇವೆ ಯನ್ನು ಬಳಸಿ ನಿರ್ವ ಹಣೆ ಮಾಡುವ ಎರಡೂ ಖಾಸಗಿ ಸಂಸ್ಥೆಗಳ ಗುತ್ತಿಗೆ ನಿರ್ವಹಣೆ ಅವಧಿಯನ್ನು ಮುಂದು ವರಿಸಲು ಪಾಲಿಕೆ ಚಿಂತನೆ ನಡೆಸಿದೆ.

ನಿತ್ಯ 99 ಟನ್‌ ಒಣಕಸ ಸಂಗ್ರಹ

ಪಾಲಿಕೆ ವ್ಯಾಪ್ತಿಯಲ್ಲಿ ಪ್ರತೀ ಶುಕ್ರ ವಾರ ಸುಮಾರು 200 ಟನ್‌ ಒಣ ಕಸವನ್ನು ಸಂಗ್ರಹಿಸಲಾಗುತ್ತದೆ. ಇದನ್ನು ಪ್ರತೀದಿನಕ್ಕೆ ವಿಭಾಗ ಮಾಡಿದಾಗ ಸುಮಾರು 29 ಟನ್‌ ಒಣಕಸ ಪ್ರತೀದಿನ ಸಂಗ್ರಹ ಮಾಡಿ ದಂತಾಗುತ್ತದೆ. ಜತೆಗೆ, ವಾರಾಂತ್ಯದಲ್ಲಿ 20 ಟನ್‌ ಹಾಗೂ ಹಸಿ ಕಸದೊಂದಿಗೆ ಸೇರ್ಪಡೆಯಾಗಿ ಸುಮಾರು 50 ಟನ್‌ ಸಹಿತ ಒಟ್ಟು 99 ಟನ್‌ ಒಣಕಸ ಪ್ರತಿನಿತ್ಯ ಸಂಗ್ರ ಹವಾಗುತ್ತದೆ. ಈ ಬಗ್ಗೆ ಪಾಲಿಕೆಯಲ್ಲಿ ಚರ್ಚಿಸಲಾಗಿದ್ದು, ಶೀಘ್ರದಲ್ಲಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮನಪಾ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ತಿಳಿಸಿದ್ದಾರೆ.

ಹೊಸ ಟೆಂಡರ್‌ಗೆ ನಿರ್ಧಾರ: ಪಚ್ಚನಾಡಿಯ ಸಂಸ್ಕರಣೆ ಘಟಕದಲ್ಲಿ ಸ್ವೀಕರಿಸಲಾಗುವ ಒಣತ್ಯಾಜ್ಯವನ್ನು ಸಂಸ್ಕರಣೆ, ವಿಲೇವಾರಿ ಮಾಡಲು ಹೊಸ ಟೆಂಡರ್‌ಗೆ ಪಾಲಿಕೆ ನಿರ್ಧರಿಸಿದೆ. ಇದರ ಸಾಧಕ – ಬಾಧಕ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳ ಜತೆಗೆ ಶುಕ್ರವಾರ ಪಾಲಿಕೆಯಲ್ಲಿ ಚರ್ಚಿಸಲಾಗಿದೆ. ಶೀಘ್ರದಲ್ಲಿ ಟೆಂಡರ್‌ ಕುರಿತ ತೀರ್ಮಾನ ಕೈಗೊಳ್ಳಲಾಗುವುದು.  -ಜಯಾನಂದ ಅಂಚನ್‌, ಮೇಯರ್‌, ಮಂ. ಪಾಲಿಕೆ

„ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next