Advertisement

ಘನತ್ಯಾಜ್ಯ ವಿಲೇವಾರಿ: ಜಿಲ್ಲಾಧಿಕಾರಿಗಳ ಸಭೆ

09:39 AM Jun 30, 2019 | Suhan S |

ಧಾರವಾಡ: ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಆದೇಶದ ಮೇರೆಗೆ ಘನ ತ್ಯಾಜ್ಯ ವಸ್ತುಗಳ ನಿರ್ವಹಣಾ ನಿಯಮ 2016ರ ಅನುಷ್ಠಾನ ಕುರಿತು ರಚಿತವಾಗಿರುವ ಜಿಲ್ಲಾಮಟ್ಟದ ವಿಶೇಷ ಕಾರ್ಯಪಡೆಯ ಮೂರನೆಯ ಪ್ರಗತಿ ಪರಿಶೀಲನಾ ಸಭೆ ಡಿಸಿ ಕಚೇರಿಯಲ್ಲಿ ನಡೆಯಿತು.

Advertisement

ಜಿಲ್ಲಾಧಿಕಾರಿ ದೀಪಾ ಚೋಳನ್‌ ಮಾತನಾಡಿ, ವಾಣಿಜ್ಯ ಮಳಿಗೆದಾರರು, ವಸತಿ ಸಮುಚ್ಛಯದವರು, ಕಲ್ಯಾಣ ಮಂಟಪದವರು ಹಾಗೂ ಹೋಟೆಲ್ ಉದ್ಯಮದಾರರು ತಮ್ಮ ಆವರಣದಲ್ಲಿ ಉತ್ಪತ್ತಿಯಾಗುವ ಘನ ತ್ಯಾಜ್ಯ ವಸ್ತುಗಳನ್ನು ಹಸಿ ಕಸ ಹಾಗೂ ಒಣ ಕಸವನ್ನಾಗಿ ವಿಂಗಡಿಸದೇ ಕಸ ವಿಲೇವಾರಿಗಾಗಿ ನೀಡುತ್ತಿರುವುದು ಪಾಲಿಕೆ ಅಧಿಕಾರಿಗಳಿಂದ ತಿಳಿದು ಬಂದಿದೆ. ಜಿಲ್ಲಾ ವಿಶೇಷ ಕಾರ್ಯಪಡೆ ಇಂತಹ ವಾಣಿಜ್ಯ ಮಳಿಗೆದಾರರಿಗೆ ಜು.1ರಿಂದ ಅನ್ವಯಿಸುವಂತೆ ಘನ ತ್ಯಾಜ್ಯ ವಸ್ತುಗಳನ್ನು ಸರಿಯಾಗಿ ವಿಂಗಡಿಸಿ ನೀಡಬೇಕೆಂದು ಸೂಚಿಸಿದರು.

ಘನ ತ್ಯಾಜ್ಯ ವಸ್ತುಗಳನ್ನು ವಿಂಗಡಿಸದೇ ನೀಡುವ ವಾಣಿಜ್ಯ ಮಳಿಗೆದಾರರಿಗೆ, ವಸತಿ ಸಮುಚ್ಛಯ, ಕಲ್ಯಾಣ ಮಂಟಪ ಹಾಗೂ ಹೋಟೆಲ್ ಉದ್ಯಮದಾರರಿಗೆ ಕರ್ನಾಟಕ ಮುನ್ಸಿಪಲ್ ಕಾರ್ಪೋರೇಶನ್‌ ಕಾಯ್ದೆ 1976ರ ಅಡಿಯಲ್ಲಿ ದಂಡ ವಿಧಿಸಲು ಪಾಲಿಕೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಎಲ್ಲಾ ವಾಣಿಜ್ಯ ಮಳಿಗೆದಾರರು ವಸತಿ ಸಮುಚ್ಛಯ, ಕಲ್ಯಾಣ ಮಂಟಪ ಹಾಗೂ ಹೋಟೆಲ್ ಉದ್ಯಮದಾರರಿಗೆ ಹಾಗೂ ಇತರೆ ಸಾರ್ವಜನಿಕರು ಜು.1ರಿಂದ ಉತ್ಪತ್ತಿಯಾಗುವ ಘನ ತ್ಯಾಜ್ಯ ವಸ್ತುಗಳನ್ನು ವಿಂಗಡಿಸಿ ವಿಲೇವಾರಿಗಾಗಿ ನೀಡಲು ಸಹಕರಿಸಬೇಕೆಂದು ಸಾರ್ವಜನಿಕರಿಗೆ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next