Advertisement

ಪತ್ರಕರ್ತೆ ರಾಣಾ ಆಯೂಬ್‌ ವಿರುದ್ಧ ಕೇಸು ದಾಖಲು

09:31 PM Oct 13, 2022 | Team Udayavani |

ನವದೆಹಲಿ: ಪತ್ರಕರ್ತೆ ರಾಣಾ ಅಯೂಬ್‌ ವಿರುದ್ಧ ಜಾರಿ ನಿರ್ದೇಶನಾಲಯ; ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿದೆ.

Advertisement

ಈ ಕುರಿತು ಸಲ್ಲಿಸಿದ ಆರೋಪಪಟ್ಟಿಯಲ್ಲಿ ಅಯೂಬ್‌ ಹೆಸರೂ ಸೇರಿಕೊಂಡಿದೆ. ಅಯೂಬ್‌ 2020 ಏಪ್ರಿಲ್‌ನಲ್ಲಿ ಜಾಲತಾಣಗಳಲ್ಲಿ  ಅಭಿಯಾನ ನಡೆಸಿ ವಿದೇಶಗಳಿಂದ ಒಟ್ಟು 2.69 ಕೋಟಿ ರೂ. ಸಂಗ್ರಹಿಸಿದ್ದಾರೆ.

ಆದರೆ ಇದಕ್ಕೆ ಎಫ್ಆರ್‌ಸಿಎ ಕಾಯ್ದೆಯಂತೆ ಹೆಸರು ನೋಂದಣಿ ಮಾಡಿಸಿಲ್ಲ, ಅಲ್ಲದೇ ಅವರು ಹಣವನ್ನು ಸಾರ್ವಜನಿಕವಾಗಿ ಬಳಸಿದ್ದು ಕೇವಲ 29 ಲಕ್ಷ ರೂ. ಮಾತ್ರ. 50 ಲಕ್ಷ ರೂ.ಗಳನ್ನು ನಿಗದಿತ ಠೇವಣಿಯಾಗಿಟ್ಟಿದ್ದರೆ, ಇನ್ನು 50 ಲಕ್ಷ ರೂ.ಗಳನ್ನು ಖಾಸಗಿ ಖಾತೆಗೆ ರವಾನಿಸಿಕೊಂಡಿದ್ದಾರೆ ಎಂದು ತನಿಖಾ ಸಂಸ್ಥೆ ಆರೋಪಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next