Advertisement

ಡಿ. 17: “ಸೋಲ್ಜರ್‌ಥಾನ್‌ ವಿಜಯ್‌ ರನ್‌, ಸೈಕ್ಲಿಂಗ್‌’

02:18 PM Dec 16, 2023 | Team Udayavani |

ಮಹಾನಗರ: ಪಾಕಿಸ್ಥಾನ ವಿರುದ್ಧ 1971ರಲ್ಲಿ ಭಾರತ ಜಯಶಾಲಿಯಾಗಿ 93,000 ಪಾಕಿಸ್ಥಾನಿ ಸೈನಿಕರು ಶರಣಾದ ಅತೀ ದೊಡ್ಡ ಗೆಲುವಿನ ಸವಿನೆನಪು ಹಾಗೂ ಯೋಧರಿಗೆ ಗೌರವ ಸಲ್ಲಿಸುವ ಸಲುವಾಗಿ ಸೋಲ್ಜರ್‌ಥಾನ್‌ ವಿಜಯ್‌ ರನ್‌ ಮತ್ತು ಸೈಕ್ಲಿಂಗ್‌ ಕಾರ್ಯಕ್ರಮ ಡಿ. 17ರಂದು ನಡೆಯಲಿದೆ.

Advertisement

ಫಿಟಿಸ್ತಾನ್‌-ಏಕ್‌ ಫಿಟ್‌ ಭಾರತ್‌ ಸಂಸ್ಥೆ ಭಾರತಾದ್ಯಂತ 240 ನಗರಗಳಲ್ಲಿ ಈ ಕಾರ್ಯಕ್ರಮ ಆಯೋಜಿಸುತ್ತಿದೆ. ಓಟ ಮತ್ತು ಸೈಕ್ಲಿಂಗ್‌ ಕಾರ್ಯಕ್ರಮ ಕದ್ರಿ ಪಾರ್ಕ್‌ ಸಮೀಪದ ಹುತಾತ್ಮರ ಸ್ಮಾರಕ ವಾರ್‌ ಮೆಮೋರಿಯಲ್‌ ಬಳಿ ಬೆಳಗ್ಗೆ 6.15ಕ್ಕೆ ಪ್ರಾರಂಭವಾಗಿ ಏರ್‌ಪೋರ್ಟ್‌ ರಸ್ತೆಯ ಕಡೆಗೆ ಚಲಿಸಲಿದೆ. ಈ ಸಂಸ್ಥೆಯನ್ನು ಹುಟ್ಟು ಹಾಕಿದವರು ನಿವೃತ್ತ ಸೇನಾಧಿಕಾರಿ ಮೇಜರ್‌ ಡಾ|ಸುರೇಂದ್ರ ಪುನಿಯ.

ಓಟಗಾರರಿಗೆ 5 ಕಿ.ಮೀ. ಮತ್ತು ಸೈಕ್ಲಿಸ್ಟ್‌ಗೆ 10 ಕಿ.ಮೀ.ಗಳ ಒಟ್ಟು ದೂರವನ್ನು ನೀಡಲಾಗುತ್ತದೆ. ನೋಂದಾಯಿತ ಭಾಗವಹಿಸುವವರು ನಿವೃತ್ತ ಸೇನಾ ಜನರಲ್‌ ವಿ.ಕೆ.ಸಿಂಗ್‌ ಅವರು ಸಹಿ ಮಾಡಿದ ಟಿ-ಶರ್ಟ್‌, ಪದಕ ಮತ್ತು ಇ-ಪ್ರಮಾಣಪತ್ರವನ್ನು ಪಡೆಯುತ್ತಾರೆ. 2 ಕಿ.ಮೀ. ಓಡಲು, ನಡೆಯಲು ಬಯಸಿದರೆ ಅವರು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ತಂಡದ ರಿತೇಶ್‌ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next