ಶ್ರೀನಗರ : ಜಮ್ಮು ಕಾಶ್ಮೀರದಲ್ಲಿ ಪಾಕ್ ಸೇನಾ ಪಡೆಗಳು ಮತ್ತೆ ನಡೆಸಿರುವ ಕದನವಿರಾಮ ಉಲ್ಲಂಘನೆಯ ಪರಿಣಾಮವಾಗಿ ಇಂದು ಶನಿವಾರ ಭಾರತೀಯ ಯೋಧನೋರ್ವ ಹುತಾತ್ಮನಾಗಿರುವುದು ವರದಿಯಾಗಿದೆ.
ಗಡಿ ನಿಯಂತ್ರಣ ರೇಖೆಯ ರಾಜೋರಿ ವಲಯದಲ್ಲಿ ಪಾಕ್ ಸೇನೆಯಿಂದ ಕದನ ವಿರಾಮ ಉಲ್ಲಂಘನೆ ನಡೆದಿದೆ.
ಪಾಕ್ ಪಡೆಗಳು ನಡೆಸಿರುವ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಭಾರತೀಯ ಸೇನಾ ಪಡೆಯ ಯೋಧ ಲ್ಯಾನ್ಸ್ ನಾಯಕ್ ಮೊಹಮ್ಮದ್ ನಸೀರ್ ಮೃತಪಟ್ಟರೆಂದು ಎಎನ್ಐ ವರದಿ ಮಾಡಿದೆ.
ಶನಿವಾರ ನಡೆದ ಇನ್ನೊಂದು ಪ್ರಕರಣದಲ್ಲಿ ಜಮ್ಮು ಕಾಶ್ಮೀರದ ಕುಲಗಾಂವ್ ನಲ್ಲಿ ಉಗ್ರರು ಭದ್ರತಾ ಗಸ್ತು ತಂಡದ ಮೇಲೆ ಗ್ರೆನೇಡ್ ಎಸೆದ ಪರಿಣಾಮ ಓರ್ವ ಸಿಆರ್ಪಿಎಫ್ ಜವಾನ ಗಾಯಗೊಂಡರೆಂದು ವರದಿಯಾಗಿದೆ.
ದಾಳಿಕೋರರಲ್ಲಿ ಒಬ್ಬನನ್ನು ಸೆರೆ ಹಿಡಿಯಲಾಗಿದ್ದು ಆತ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.