Advertisement

ಜಮ್ಮು ಗಡಿಯಲ್ಲಿ ಭಾರೀ ಹಿಮಪಾತ ; ಸೈನಿಕ ಬಲಿ, ಇನ್ನೋರ್ವನಿಗೆ ಗಾಯ

09:56 AM Jan 03, 2019 | |

ಜಮ್ಮು: ಪೂಂಚ್‌ನ ಅಂತರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಬಳಿ ಬುಧವಾರ ಭಾರೀ ಹಿಮಪಾತ ಸಂಭವಿಸಿ ಸೈನಿಕರೊಬ್ಬರು ಸಮಾಧಿಯಾಗಿದ್ದು, ಇನ್ನೋರ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

Advertisement

ನಸುಕಿನ  4 ಗಂಟೆಯ ವೇಳೆಗೆ ಸೇನಾ ಪೋಸ್ಟ್‌ ಮೇಲೆ ಹಿಮದ ಗುಡ್ಡೆ ಕುಸಿದು ಅವಘಡ ಸಂಭವಿಸಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಹಿಮದ ಅಡಿಯಲ್ಲಿ ಸಿಲುಕಿದ್ದ ಇಬ್ಬರು ಯೋಧರನ್ನು ತಕ್ಷಣ ಕಾರ್ಯಾಚರಣೆ ನಡೆಸಿ ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಲ್ಯಾನ್ಸ್‌ ನಾಯಕ್‌ ಸಪನ್‌ ಮೆಹ್ರಾ ಅವರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು. ಇನ್ನೋರ್ವ ಯೋಧರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next