Advertisement

ಸೌರ ವಿದ್ಯುತ್‌ ಉತ್ಪಾದನೆ ಪರಿಸರಕ್ಕೆ ಪೂರಕ: ಉಮಾಕಾಂತ್‌

04:12 PM May 23, 2022 | Team Udayavani |

ಗುಂಡ್ಲುಪೇಟೆ: ಸೌರ ವಿದ್ಯುತ್‌ನಿಂದ ಅಪಾರವಾದ ಲಾಭವಿದ್ದು, ಪರಿಸರಸ್ನೇಹಿ ಹಾಗೂ ಇಂಗಾಲದ ಡೈಆಕ್ಸೈಡ್‌ ಕಡಿಮೆಯಾಗುವ ಜೊತೆಗೆ ಹಸಿರು ಪರಿಣಾಮದ ಮೇಲೆ ಪ್ರಭಾವ ಬೀರುವ ಮೂಲಕಸಮಾಜದ ಆರೋಗ್ಯ ಸ್ವಾಸ್ಥಕ್ಕೆ ನಾಂದಿಯಾಗುತ್ತದೆ ಎಂದು ಜೆಎಸ್‌ಎಸ್‌ ತಾಂತ್ರಿಕ ಮಹಾ ವಿದ್ಯಾಲಯದ ಜಂಟಿ ನಿರ್ದೇಶಕ ಆರ್‌.ಉಮಾಕಾಂತ್‌ ತಿಳಿಸಿದರು.

Advertisement

ಪಟ್ಟಣದ ಜೆಎಸ್‌ಎಸ್‌ ಕಾಲೇಜಿಗೆ ಜೆಎಸ್‌ಎಸ್‌ ತಾಂತ್ರಿಕ ಮಹಾವಿದ್ಯಾಲಯ, ಎಸ್‌ಆರ್‌ಟಿಪಿ ಅಧಿಕಾರಿಗಳ ತಂಡ ಭೇಟಿ ನೀಡಿ ಸೌರ ಸ್ಥಾವರವನ್ನು ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಅವರು, ಸೌರ ವಿದ್ಯತ್‌ ಪರಿಸರಕ್ಕೆ ಪೂರಕ ಎಂದು ಹೇಳಿದರು.

ಶೇ.40 ಸಹಾಯ ಧನ: ಡಾ.ಎಚ್‌.ನಾಗಣ್ಣಗೌಡ ಮಾತನಾಡಿ, ಸೌರವಿದ್ಯುತ್‌ನಿಂದ ಪರಿಸರದಸಮತೋಲನದ ಜೊತೆಗೆ ರಾಷ್ಟ್ರೀಯ ವಿದ್ಯುತ್‌ಸಮಸ್ಯೆಯನ್ನು ಕೂಡ ಕಡಿಮೆ ಮಾಡಬಹುದು. ಇಲ್ಲಿ ಒಂದು ಕಿಲೋ ವ್ಯಾಟ್‌ ವಿದ್ಯುತ್‌ ಉತ್ಪಾದನೆಯಿಂದಕಲ್ಲಿದ್ದಲು, ನೀರನ್ನು ಸಾಕಷ್ಟು ಉಳಿತಾಯ ಮಾಡಬಹುದು. ಇದರಿಂದ ಜನರ ಆರೋಗ್ಯನೈರ್ಮಲೀಕರಣವನ್ನು ವೃದ್ಧಿಗೊಳಿಸಲು ಅನುಕೂಲವಾಗುತ್ತದೆ, ಸೋಲಾರ್‌ ವಿದ್ಯುತ್‌ ಪ್ಲಾಂಟ್‌ಗಳಿಗೆ ಸರ್ಕಾರದಿಂದ ಶೇ.40 ಧನಸಹಾಯವಿದೆ ಎಂದು ತಿಳಿಸಿದರು.

ಈ ತಾಲೂಕಿನ ಎಲ್ಲಾ ವಿದ್ಯಾಸಂಸ್ಥೆಗಳಿಗೂ ಈ ರೀತಿ ಪ್ಲಾಂಟ್‌ಗಳನ್ನು ಅಳವಡಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಿಳಿಸಿ ಒಂದು ಕಾರ್ಯಾಗಾರಮಾಡಿದರೆ, ಸಾರ್ವಜನಿಕರಿಗೆ ಅನುಕೂಲವಾಗುತ್ತವೆಂಬ ಅಂಶಗಳನ್ನು ಮನವರಿಕೆ ಮಾಡಿಕೊಟ್ಟರು.

ಪ್ರಾಚಾರ್ಯ ಮರಿಸ್ವಾಮಪ್ಪ ಮಾತನಾಡಿ, ದೇಶದಲ್ಲಿ ವಿದ್ಯುತ್‌ ಸಮಸ್ಯೆ ಎದುರಿಸುತ್ತಿದ್ದು, ಬಿಲ್‌ ದರ ಕೂಡ ಗಗನಮುಖವಾಗಿದೆ. ಇದೆಲ್ಲವನ್ನು ಗಮನಿಸಿದ ನಮ್ಮಜೆಎಸ್‌ಎಸ್‌ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಸೌರವಿದ್ಯುತ್‌ ಘಟಕಗಳನ್ನು ಸ್ಥಾಪಿಸುವ ಮೂಲಕಸಂಸ್ಥೆಯ 21 ಶಾಲಾ-ಕಾಲೇಜು, ಕಲ್ಯಾಣಮಂಟಪಗಳಲ್ಲಿ ಅಳವಡಿಸಲು ತಾಂತ್ರಿಕಮಹಾವಿದ್ಯಾಲಯದ ಮೂಲಕ ಕಾರ್ಯಾರಂಭ ಮಾಡಿಸಿದ್ದಾರೆ ಎಂದು ತಿಳಿಸಿದರು.

Advertisement

ಸೌರವಿದ್ಯುತ್‌ ಬಗ್ಗೆ ಈಗಾಗಲೇ ಜನರಿಗೆ ಮಾಹಿತಿ ನೀಡುವುದರ ಜೊತೆಗೆ ವಿಚಾರ ಸಂಕಿರಣ ಏರ್ಪಡಿಸಿಸಾರ್ವಜನಿಕರಿಗೆ ಇದರ ಪ್ರಯೋಜನ ತಿಳಿಸಲು ಈಗಾಗಲೇ ತೀರ್ಮಾನಿಸಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಸುರೇಂದ್ರ ಪಿ.ನಾಯರ್‌,ಸಂಯೋಜಕ ಬಿ.ಎಂ.ಚಂದ್ರಶೇಖರ್‌, ಟಿ.ಎಂ.ಮರಿಸ್ವಾಮಿ, ಅಧೀಕ್ಷಕ ಶಂಭುಲಿಂಗಯ್ಯ, ಶಿವಪ್ರಸಾದ್‌ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next