Advertisement
ದ.ಕ. ಜಿಲ್ಲೆಯ ಚಾರ್ಮಾಡಿ, ಶಿಶಿಲ, ಶಿಬಾಜೆ, ಶಿರಾಡಿ ಹಾಗೂ ಕೊಡಗು, ಚಿಕ್ಕಮಗಳೂರು, ಸಕಲೇಶಪುರ ಗಡಿಭಾಗದಲ್ಲಿ ಕಾಡಾನೆ ಉಪಟಳ ಮಿತಿ ಮೀರಿದೆ. ಕೃಷಿಯ ಜತೆಗೆ ಅನೇಕ ಜೀವಹಾನಿಯೂ ಸಂಭವಿಸಿದೆ. ಇದನ್ನು ತಡೆಯಲು ಅರಣ್ಯ ಇಲಾಖೆಯು ಜೋತಾಡುವ ಸೌರಬೇಲಿ (Solar Powered Double line Hanging Fence) ಯನ್ನು ಈಗಾಗಲೇ ಚಿಕ್ಕಮಗಳೂರಿನ ಮೂಡಿಗೆರೆ ಹಾಗೂ ಶಿರಾಡಿ ಘಾಟಿ ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಿದ್ದು, ಪರಿಣಾಮಕಾರಿ ಎನಿಸಿರುವುದರಿಂದ ದ.ಕ. ಜಿಲ್ಲೆಯಲ್ಲಿ ಪ್ರಯೋಗವಾಗಿ ಬೆಳ್ತಂಗಡಿ ಹಾಗೂ ಸುಬ್ರಹ್ಮಣ್ಯದಲ್ಲಿ ಅನುಷ್ಠಾನ ಗೊಳಿಸಿದೆ.
Related Articles
ಸುಬ್ರಹ್ಮಣ್ಯ ಸಮೀಪ ಸುಮಾರು 1 ಕಿ.ಮೀ. ದೂರಕ್ಕೆ ಯೋಜನೆ ಅಳವಡಿಸಲಾಗಿದೆ. ಬೆಳ್ತಂಗಡಿ ತಾಲೂಕಿನ ಮುಂಡಾಜೆ ಸಮೀಪ ರಾಷ್ಟ್ರೀಯ ಹೆದ್ದಾರಿ ಬದಿಯಯಲ್ಲಿರುವ ಅರಣ್ಯ ಇಲಾಖೆಗೆ ಸೇರಿದ ನರ್ಸರಿಗೆ ಕಾಡಾನೆ ದಾಳಿ ನಡೆಸಿ 2,000ಕ್ಕೂ ಅಧಿಕ ಗಿಡಗಳನ್ನು ಧ್ವಂಸಗೊಳಿತ್ತು. ಇದರಿಂದ ಮುಂಡಾಜೆ ಹಾಗೂ ಕಡಿರುದ್ಯಾವರ ಗ್ರಾಮಕ್ಕೆ ವ್ಯಾಪಿಸುವ ಅರಣ್ಯದಲ್ಲಿ ಫರ್ಲಾನಿವರೆಗೆ 2.5 ಕಿ.ಮೀ. ದೂರದಲ್ಲಿ 12 ಲಕ್ಷ ರೂ. ಅನುದಾನದಲ್ಲಿ ಜೋತಾಡುವ ಸೌರ ಬೇಲಿ ಅಳವಡಿಸಲಾಗಿದೆ. ಈ ವ್ಯವಸ್ಥೆಯನ್ನು ವಿಸ್ತರಿಸಿದರೆ ಇನ್ನಷ್ಟು ಕೃಷಿಕರಿಗೆ ಪ್ರಯೋಜನವಾಗಲಿದೆ.
Advertisement
2023-24ರಲ್ಲಿ ಆನೆ ಕಂದಕಬೆಳ್ತಂಗಡಿ-4.500 ಕಿ.ಮೀ., ಕಡಬ-3 ಕಿ.ಮೀ., ಸುಳ್ಯ 2 ಕಿ.ಮೀ. ಸೇರಿ 34 ಲಕ್ಷ ರೂ. ಆನೆ ಕಂದಕಕ್ಕೆ ವಿನಿಯೋಗಿಸಿದರೆ, ಇರುವ ಕಂದಕದ ವಿಸ್ತರಣೆಗಾಗಿ 72.150 ಲಕ್ಷ ರೂ.ಗಳನ್ನು ಅರಣ್ಯ ಇಲಾಖೆ ವಿನಿಯೋಗಿಸಿದೆ. ಕಾಡಾನೆ ದಾಳಿ ತಡೆಗೆ ಅರಣ್ಯ ಇಲಾಖೆ ಈ ಬಾರಿ ವಿಶೇಷ ಪ್ರಯೋಗ ನಡೆಸಿದೆ. ಬೆಳ್ತಂಗಡಿ ಹಾಗೂ ಸುಬ್ರಹ್ಮಣ್ಯದಲ್ಲಿ ಹ್ಯಾಂಗಿಂಗ್ ಸೋಲಾರ್ ಬೇಲಿ ಅಳವಡಿಸಿದ್ದೇವೆ. ಯಶಸ್ಸು ಕಂಡಿದ್ದರಿಂದ ಕಡಬ, ಸುಳ್ಯದಲ್ಲಿ ಹೆಚ್ಚುವರಿ ಬೇಡಿಕೆಯಿದೆ. ಮುಂದಿನ ವರ್ಷ ಹೆಚ್ಚಿನ ಅವಕಾಶ ಕೋರಿ ಅನುಷ್ಠಾನ ಮಾಡಲಾಗುವುದು.
– ಅಂಥೋನಿ ಎಸ್. ಮರಿಯಪ್ಪ,
ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಂಗಳೂರು -ಚೈತ್ರೇಶ್ ಇಳಂತಿಲ