Advertisement

ಸೂರ್ಯಗ್ರಹಣಕ್ಕೆ ಜಗತ್ತು ಸಾಕ್ಷಿ ; ದೇವಾಲಯಗಳಲ್ಲಿ ವಿಶೇಷ ಪೂಜೆ

07:58 PM Oct 25, 2022 | Team Udayavani |

ಬೆಂಗಳೂರು: 2022 ರ ಕೊನೆಯ ಸೂರ್ಯಗ್ರಹಣಕ್ಕೆ ಜಗತ್ತು ಸಾಕ್ಷಿಯಾಯಿತು. ಭಾಗಶಃ ಸೂರ್ಯಗ್ರಹಣ ಕರ್ನಾಟಕದ ಹಲವು ಪ್ರದೇಶಗಳು ಸೇರಿ ಭಾರತದ ಹಲವಾರು ಭಾಗಗಳಲ್ಲಿ ಗೋಚರಿಸಿತು.

Advertisement

ದೀಪಗಳ ಹಬ್ಬದ ವೇಳೆ ಸಂಭವಿಸಿದ ಸೂರ್ಯ ಗ್ರಹಣ ಯುರೋಪ್, ಪಶ್ಚಿಮ ಸೈಬೀರಿಯಾ, ಮಧ್ಯ ಏಷ್ಯಾ, ಪಶ್ಚಿಮ ಏಷ್ಯಾದ ಜನರು ಮತ್ತು ಆಫ್ರಿಕಾದ ಈಶಾನ್ಯ ಭಾಗದ ಜನರು ಸೂರ್ಯಗ್ರಹಣವನ್ನು ವೀಕ್ಷಿಸಲು ಸಾಧ್ಯವಾಯಿತು.

ಗ್ರಹಣ ನಂತರ ಹಲವು ದೇವಾಲಯಗಳಲ್ಲಿ ಶುದ್ದಿ ಮತ್ತು ವಿಶೇಷ ಹೋಮ, ಪೂಜೆ ಪ್ರಾರ್ಥನೆಗಳನ್ನು ನಡೆಸಲಾಗಿದೆ. ಹಲವು ಪ್ರದೇಶಗಳಲ್ಲಿ ಜನ ಸಂದಣಿ ವಿರಳವಾಗಿತ್ತು. ಪಾರ್ಶ್ವ ಸೂರ್ಯಗ್ರಹಣ ಸಂಜೆ ಸಂಭವಿಸಿದ ಹಿನ್ನೆಲೆಯಲ್ಲಿ ವಿವಿಧ ದೇವಸ್ಥಾನಗಳಲ್ಲಿ ದೇವರ ದರ್ಶನ, ನಿತ್ಯಪೂಜೆ ಹಾಗೂ ಧಾರ್ಮಿಕ ಅನುಷ್ಠಾನದ ಸಮಯದಲ್ಲಿ ಬದಲಾವಣೆ ಮಾಡಲಾಗಿತ್ತು.

ಕರ್ನಾಟಕದ ಕಾರವಾರದ ಕರಾವಳಿ ತೀರದಲ್ಲಿ ಸೂರ್ಯಗ್ರಹಣ ದರ್ಶನವನ್ನು ವಿದ್ಯಾರ್ಥಿ ಯುವಜನರು ಪಡೆದರು. ಸಂಜೆ 5.5 ರಿಂದ 6 ಗಂಟೆತನಕ ಸೂರ್ಯ ಗ್ರಹಣ ಕಾಣಿಸಿತು‌ . ಕಾರವಾರದ ಕಾಳಿ ನದಿ ದಡದಲ್ಲಿ ಸೂರ್ಯ ಗ್ರಹಣ ವೀಕ್ಷಿಸಲು ಟೆಲಿಸ್ಕೋಪ್ ಹಾಗೂ ಎಕ್ಲಿಪ್ಸ್ ವಿವರ್ ವ್ಯವಸ್ಥೆ ಮಾಡಲಾಗಿತ್ತು. ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಗ್ರಹಣವನ್ನು ವೀಕ್ಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next