ಬೀದರ: ನಗರದ ಗುರುನಾನಕ್ ದೇವ್‌ಇಂಜಿನಿಯರಿಂಗ್ ಕಾಲೇಜಿನ ಅಂತಿಮವರ್ಷದ ಎಲೆಕ್ಟ್ರಾನಿಕ್ ಮತ್ತು ಎಲೆಕ್ಟ್ರಿಕಲ್‌ವಿಭಾಗದ ವಿದ್ಯಾರ್ಥಿಗಳು ತೈಲ ಅಷ್ಟೇ ಅಲ್ಲನಿರ್ವಹಣೆಗೂ ನಯಾಪೈಸೆ ಖರ್ಚಿಲ್ಲದ ಸೌರವಿದ್ಯುತ್ ಚಾಲಿತ ಪರಿಸರ ಸ್ನೇಹಿ ಸೈಕಲ್(ಬೈಕ್)ಆವಿಷ್ಕರಿಸಿದ್ದಾರೆ.
ವಿಭಾಗದ ಎಚ್‌ಒಡಿ ಡಾ|ಕೆ.ನೀಲಶೆಟ್ಟಿಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಸಚಿನ್‌ರಾಠೊಡ, ಉಜಾಲಾ ರಾಠೊಡ, ವೈಷ್ಣವಿದೇಶಮುಖ ಹಾಗೂ ಅಖೀಲಾ ರೆಡ್ಡಿ ಕಾಲೇಜು ಪ್ರೊಜೆಕ್ಟ್ಗಾಗಿ ಈ ಸೋಲಾರ್ ಬೈಸಿಕಲ್‌ಅಭಿವೃದ್ಧಿಪಡಿಸಿದ್ದಾರೆ.ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್‌ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು,ಪರ್ಯಾಯ ಇಂಧನ ಚಾಲಿತ ವಾಹನಗಳಅಭಿವೃದ್ಧಿಯತ್ತ ಹೊಸ ಹೊಸ ಪ್ರಯತ್ನಗಳುನಡೆಯುತ್ತಲೇ ಇವೆ. ಈ ವಿದ್ಯಾರ್ಥಿಗಳ ತಂಡತಮ್ಮಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನೇಬಳಸಿಕೊಂಡು ಸೈಕಲ್ ರೂಪಿಸಿದೆ.
ನೋಡಲಷ್ಟೇ ಅಲ್ಲ ಚಲಾಯಿಸಲು ಬೈಕ್‌ನಂತೆಕಾಣುತ್ತಿದೆ.ಈ ಸೈಕಲ್ ಅನ್ನು ಒಂದು ತಿಂಗಳಲ್ಲಿತಯಾರಿಸಿರುವ ವಿದ್ಯಾರ್ಥಿಗಳು ಒಟ್ಟು 25ಸಾವಿರ ರೂ. ಖರ್ಚು ಮಾಡಿದ್ದಾರೆ. ಇದಕ್ಕೆಬೇಕಾದ ಸೋಲಾರ್ ಪ್ಯಾನಲ್, ಬ್ಯಾಟರಿಸೇರಿದಂತೆ ಕಚ್ಚಾ ವಸ್ತುಗಳನ್ನು ಹೈದ್ರಾಬಾದ್‌ನಲ್ಲಿಖರೀದಿಸಿದ್ದರೆ, ಗುಜರಿ ಅಂಗಡಿಯಿಂದ ಸೈಕಲ್‌ಪಡೆದಿದ್ದಾರೆ. 48 ವೋಲ್ಟ್ ಮೋಟಾರ್, 12ವೋಲ್ಟ್- 25 ವ್ಯಾಟ್ ಸಾಮರ್ಥ್ಯದ ಒಂದುಸೋಲಾರ್ ಪ್ಯಾನಲ್ ಬಳಸಿದ್ದಾರೆ. ಸೌರವಿದ್ಯುತ್‌ನಿಂದ ಓಡಾಡುವ ಈ ಸೈಕಲನ್ನುಬಿಸಿಲಿಲ್ಲದಿದ್ದಾಗ 12 ವೋಲ್ಟ್ನ ನಾಲ್ಕುಬ್ಯಾಟರಿಗಳನ್ನು ಚಾರ್ಜ್ ಮಾಡಿಯೂನಡೆಸಬಹುದು.
ಒಂದು ವೇಳೆ ಸೋಲಾರ್,ಬ್ಯಾಟರಿಗಳು ಕೈಕೊಟ್ಟರೂ ಕಾಲಿನಿಂದತುಳಿದುಕೊಂಡು ಸೈಕಲ್ ಚಲಾಯಿಸಿಕೊಂಡುಮನೆಗೆ ತಲುಪಬಹುದು.ಈ ಬ್ಯಾಟರಿಗಳನ್ನು ನಾಲ್ಕು ಗಂಟೆಗಳಕಾಲ ಚಾರ್ಜ್ ಮಾಡಿದರೆ 30 ಕಿ.ಮೀ.ವರೆಗೂ ಓಡಾಡಬಹುದು. ಜತೆಗೆಸೋಲಾರ್ ಅಳವಡಿಸಿರುವ ಕಾರಣ ಸೈಕಲ್‌ಚಾಲನೆಯಾಗುತ್ತಲೇ ಬ್ಯಾಟರಿಗಳು ಚಾರ್ಜ್‌ಆಗುತ್ತವೆ. ಹೀಗಾಗಿ ಎಷ್ಟು ಮೈಲಿ ಹೋದರೂತೊಂದರೆಯಾಗಲ್ಲ. ಈ ಸೈಕಲ್ ಎಂತಹರಸ್ತೆಯಾದರೂ ಸರಿ ಸಲೀಸಾಗಿ ಓಡುತ್ತದೆಎನ್ನುತ್ತಾರೆ ಸಾಧಕ ವಿದ್ಯಾರ್ಥಿಗಳು.
75 ಕೆ.ಜಿ ಭಾರ ಹೊತ್ತುಕೊಂಡು ಸಾಗಬಲ್ಲಸಾಮರ್ಥ್ಯ ಇದಕ್ಕಿದ್ದು, ಬ್ಯಾಟರಿ ಪ್ರಮಾಣಹೆಚ್ಚಿಸಿದ್ದಲ್ಲಿ ಸಾಮರ್ಥ್ಯವೂ ಅಧಿಕ ಆಗಲಿದೆ. ಪ್ರತಿಗಂಟೆಗೆ 30 ಕಿ.ಮೀ ವೇಗದಲ್ಲಿ ಓಡುವ ಬ್ಯಾಟರಿಚಾಲಿತ ಈ ಸೈಕಲ್ ಇಡೀ ಕಾಲೇಜಿನಲ್ಲಿ ಈಗಮನ್ನಣೆ ಪಡೆದಿದೆ. ಸದ್ಯ ಈ ಸೈಕಲ್ ನೋಡಲುದಿನಕ್ಕೆ ಹತ್ತಾರು ಕಾಲೇಜು ವಿದ್ಯಾರ್ಥಿಗಳು ಬಂದು ಹೋಗುತ್ತಿದ್ದಾರೆ.
ಶಶಿಕಾಂತ ಬಂಬುಳಗ