Advertisement

ಸಾಫ್ಟ್‌ವೇರ್‌ ಇಂಜಿನಿಯರ್‌ ಪರಿಸರ ಪ್ರೀತಿ

02:28 PM Aug 27, 2022 | Team Udayavani |

ಬೀದರ: ಚಿಟಗುಪ್ಪ ತಾಲೂಕಿನ ವಿಠ್ಠಲಪುರದ ಸಾಫ್ಟವೇರ್‌ ಇಂಜಿನಿಯರ್‌ ರಾಜ ರೆಡ್ಡಿ ಎರಡೂವರೆ ಸಾವಿರಕ್ಕೂ ಅಧಿಕ ಸಸಿಗಳನ್ನು ನೆಟ್ಟು ಗಮನ ಸೆಳೆದಿದ್ದಾರೆ.

Advertisement

ವಿಠ್ಠಲಪುರದ ಸರ್ಕಾರಿ ಶಾಲೆ ಆವರಣ, ಮಾತೆ ಮಾಣಿಕೇಶ್ವರಿ ಆಶ್ರಮ, ಚಾಂಗಲೇರಾ ಸರ್ಕಾರಿ ಶಾಲೆ, ವೀರಭದ್ರೇಶ್ವರ ದೇವಸ್ಥಾನ, ಬೇಮಳಖೇಡದ ಆದರ್ಶ ವಿದ್ಯಾಲಯ, ಕರ್ನಾಟಕ ಪಬ್ಲಿಕ್‌ ಸ್ಕೂಲ್‌, ಬಸವತೀರ್ಥ ಶಾಲೆ, ಪೊಲೀಸ್‌ ಠಾಣೆ, ಬೀರಲಿಂಗೇಶ್ವರ ದೇವಸ್ಥಾನ, ಪಂಚಲಿಂಗೇಶ್ವರ ದೇವಸ್ಥಾನ ಆವರಣ ಸೇರಿದಂತೆ ಅನೇಕ ಕಡೆಗಳಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಸಸಿಗಳನ್ನು ನೆಟ್ಟು ಪರಿಸರ ಪ್ರೀತಿ ತೋರಿದ್ದಾರೆ. ಸಾರ್ವಜನಿಕರಿಗೆ ಮನೆ ಮುಂದೆ ನೆಡಲು ಉಚಿತ ಸಸಿಗಳನ್ನು ವಿತರಿಸಿದ್ದಾರೆ.

ಜನರಲ್ಲಿ ಪರಿಸರ ಜಾಗೃತಿಯನ್ನೂ ಮೂಡಿಸುತ್ತಿದ್ದಾರೆ. ಪರಿಸರ ಸಂರಕ್ಷಣೆ ಭಾಗವಾಗಿ ಒಂದು ಲಕ್ಷ ಸಸಿಗಳನ್ನು ನೆಡುವ ಗುರಿ ಹೊಂದಿದ್ದೇನೆ ಎಂದು ರಾಜ ರೆಡ್ಡಿ ಹೇಳುತ್ತಿದ್ದಾರೆ. ರಾಜ ರೆಡ್ಡಿ ಅವರ ಪರಿಸರ ಕಾಳಜಿ ಎಲ್ಲರಿಗೂ ಮಾದರಿಯಾಗಿದೆ ಎಂದು ವೀರಶೈವ ಲಿಂಗಾಯತ ಮಹಾ ವೇದಿಕೆ ಜಿಲ್ಲಾಧ್ಯಕ್ಷ ಅಂಬರೀಷ್‌ ಬಟನಾಪುರೆ, ಪ್ರಧಾನ ಕಾರ್ಯದರ್ಶಿ ಬಸವ ಮೂಲಗೆ, ಸಂಚಾಲಕ ಸಂದೀಪ ರೊಟ್ಟೆ, ತಾಲೂಕು ಅಧ್ಯಕ್ಷ ಶರಣು ರಾಗಾ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next