ಶತಮಾನಗಳ ಹಿಂದೆ ಕಡಿದುಹೋಗಿದ್ದ ಸಂಬಂಧವನ್ನು ಸೋಮವಾರ ಪುನಃಸ್ಥಾಪಿಸಿದರು.
Advertisement
ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾ ಸಾಗರತೀರ್ಥ ಶ್ರೀಪಾದರು, ಶ್ರೀ ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಶ್ರೀ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಶ್ರೀ ಸೋದೆ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಮತ್ತು ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಶ್ರೀ ಅನಂತೇಶ್ವರ ದೇವಸ್ಥಾನದ ಅನಂತೇಶ್ವರ ಮತ್ತು ಆಚಾರ್ಯ ಮಧ್ವರ ತಾಣದಲ್ಲಿ ಸಮಾಗಮಗೊಂಡರು. ಇದಕ್ಕೂ ಮುನ್ನ ಸುಬ್ರಹ್ಮಣ್ಯದಿಂದ ಆಗಮಿಸಿದ ಶ್ರೀ ಸುಬ್ರಹ್ಮಣ್ಯ ಮಠಾಧೀಶರು ವಿವಿಧ ಮಠಾಧೀಶರೊಂದಿಗೆ ಶ್ರೀಕೃಷ್ಣ ಮಠದಿಂದ ಸಕಲ ಗೌರವಗಳೊಂದಿಗೆ ಅನಂತೇಶ್ವರ ದೇವಸ್ಥಾನಕ್ಕೆ ತೆರಳಿದಾಗ ಅಲ್ಲಿದ್ದಶ್ರೀ ಸೋದೆ ಮಠಾಧೀಶರು ಸ್ವಾಗತಿಸಿದರು. ಬಳಿಕ ದೇವರಿಗೆ ಪೂಜೆ, ಪ್ರಾರ್ಥನೆ ಸಲ್ಲಿಸಿದರು.
Related Articles
18ನೇ ಶತಮಾನದಲ್ಲಿ ಉಂಡಾರು ಗ್ರಾಮದ ಸೋದರರಾದ ಶ್ರೀ ವಿಶ್ವನಿಧಿತೀರ್ಥರು (1740-1753), ಶ್ರೀ ವಿಶ್ವಾಧೀಶ್ವರತೀರ್ಥರು (1753-1803) ಸೋದೆ ಮಠಾಧೀಶರಾಗಿದ್ದರೆ ಇವರ ಇನ್ನೋರ್ವ ಸೋದರ ಸುಬ್ರಹ್ಮಣ್ಯ ಮಠಾಧೀಶರಾಗಿದ್ದರು. ಅವರ ಹೆಸರು ಮಠದ ದಾಖಲೆಗಳಲ್ಲಿ ನಿಖರವಾಗಿ ತಿಳಿಯುತ್ತಿಲ್ಲ. ಈ ಅವಧಿಯಲ್ಲಿ ಸಂಬಂಧ ಕಡಿದು ಹೋಗಿತ್ತು.
Advertisement