Advertisement

ಮಕಳಿಗೆ ಸಾಮಾಜಿಕ-ಧಾರ್ಮಿಕ ತಿಳಿವಳಿಕೆ ನೀಡಿ:ವಿಜಯೇಂದ್ರ

06:01 PM Mar 24, 2022 | Team Udayavani |

ಗದಗ: ಮೌನತಪಸ್ವಿ ಜಡೆಯ ಶಾಂತಲಿಂಗೇಶ್ವರರ ಬದುಕೇ ಪವಾಡ. ಮನುಕುಲದ ಒಳಿತಿಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದು, ಸತು³ರುಷರ ಬದುಕು ನಮ್ಮೆಲ್ಲರಿಗೆ ಮಾದರಿ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

Advertisement

ನಗರದ ಮುಳಗುಂದ ರಸ್ತೆಯಲ್ಲಿರುವ ತೋಂಟೇಶ ಮಾನ್ವಿ ಅವರ ನಿವಾಸದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ಸಾವಿರ ತಿಂಗಳ ಸತು³ರುಷ, ಮೌನತಪಸ್ವಿ ಶ್ರೀ ಜಡೆಯ ಶಾಂತಲಿಂಗ ಸ್ವಾಮೀಜಿ ಜನ್ಮದಿನದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಮೌನ ತಪಸ್ವಿಯ ಪಾದ ಸ್ಪರ್ಶದಿಂದ ಗದಗ ನಗರ ಪಾವನವಾಗಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಮೊಬೈಲ್‌ ಬಳಕೆಯಿಂದ ಮಾನವೀಯ ಸಂಬಂಧಗಳು ಸಡಿಲಗೊಳ್ಳುತ್ತಿವೆ. ಮಕ್ಕಳಿಗೆ ತಂದೆ, ತಾಯಿ ಎಂಬ ಪರಿವೇ ಇಲ್ಲವೆಂಬಂತೆ ಬೆಳೆಯುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಪೋಷಕರು ತಮ್ಮ ಮಕ್ಕಳ ಮೇಲೆ ನಿಗಾವಹಿಸಬೇಕು. ನಮ್ಮ ಸಂಸ್ಕೃತಿ, ಪರಂಪರೆ, ಸಂಪ್ರದಾಯ, ಆಚಾರ ವಿಚಾರಗಳನ್ನು ಬೆಳೆಸಬೇಕು. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಇಂತಹ ಸತು³ರುಷರ ಉಪನ್ಯಾಸ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಕರೆ ತಂದು ಅವರಲ್ಲಿ ಸಾಮಾಜಿಕ, ಧಾರ್ಮಿಕ ಜವಾಬ್ದಾರಿಗಳ ತಿಳಿವಳಿಕೆ ನೀಡಿ, ಸನ್ಮಾರ್ಗ ದಲ್ಲಿ ಮುನ್ನಡೆಸಬೇಕು ಎಂದು ಸಲಹೆ ನೀಡಿದರು.

ಶಿರಹಟ್ಟಿಯ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ಜಡೆಯ ಶಾಂತಲಿಂಗೇಶ್ವರರು ಸಾವಿರ ತಿಂಗಳು ಸತ್ಪುರುಷ ಎನ್ನುತ್ತಾರೆ. ಆದರೆ, ಅವರು ಸಾವಿರದ ಸತು³ರುಷರು. ಜೀವನ ನಿರ್ವಹಣೆ ಹಾಗೂ ಸಂವಹನದಲ್ಲಿ ಭಾಷೆ ಎಂಬುದು ಮಹತ್ವದ ಪಾತ್ರವಹಿಸುತ್ತದೆ. ವಿಶ್ವದ ಅನೇಕ ಭಾಷೆಗಳನ್ನು ಕಲಿತು, ಅದರಲ್ಲಿ ಪಿಎಚ್‌ಡಿ ಪದವಿ ಪಡೆದ ಏಕೈಕ ವ್ಯಕ್ತಿ ಎಂಬ ಕೀರ್ತಿ ತಮಿಳುನಾಡಿನ ಸ್ವಾಮಿನಾಥನ್‌ ಅವರಿಗೆ ಸಲ್ಲುತ್ತದೆ ಎಂದರು.

Advertisement

ಜೀವನದ ಬಹುಭಾಗವನ್ನು ಮೌನವಾಗಿಯೇ ಜಯಿಸಿದ ಜಡೆಯ ಶಾಂತಲಿಂಗ ಸ್ವಾಮೀಜಿ ಅವರಲ್ಲಿ ಜ್ಞಾನವೇ ಘನಗೊಂಡಿದೆ. ಮೌನಾ ನುಷ್ಠಾನದ ಮೂಲಕವೇ ಸಮಾಜಕ್ಕೆ ಬೆಳಕಾಗಿ ಭಕ್ತರ ಹೃದಯಲ್ಲಿ ಅಜರಾಮರಾಗಿದ್ದಾರೆ. ಮೌನದಿಂದಲೇ ಸಾಮಾಜಿಕ ಕ್ರಾಂತಿ ಮಾಡಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಬಿ.ವೈ. ವಿಜಯೇಂದ್ರ ದಂಪತಿಯನ್ನು ಸನ್ಮಾನಿಸಲಾಯಿತು. ಶ್ರೀ ಜಡೆಯ ಶಾಂತಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಿವಮೊಗ್ಗ ಗೂಗ್ಲಿಹಳ್ಳಿಯ ಪಂಚಮಠದ ಶ್ರೀ ಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಶಿವಲಿಂಗೇಶ್ವರ ವಿರಕ್ತಮಠದ ಸದಾಶಿವ ಸ್ವಾಮೀಜಿ, ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ, ತಮಕೂರಿನ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಶಾಸಕ ಕಳಕಪ್ಪ ಬಂಡಿ, ಮಾಜಿ ಸಚಿವರಾದ ವಿನಯ ಕುಲಕರ್ಣಿ, ಅಲ್ಲಂ ವೀರಭದ್ರಪ್ಪ, ಮಾಜಿ ಶಾಸಕ ಡಿ.ಆರ್‌. ಪಾಟೀಲ, ಜಿ.ಎಸ್‌. ಪಾಟೀಲ, ಸಂಘಟಕರಾದ ತೋಂಟೇಶ ಮಾನ್ವಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next