Advertisement
ಬಿಹಾರದಾದ್ಯಂತ “ಜನನಾಯಕ’ ಎಂದೇ ಜನಪ್ರಿಯರಾಗಿದ್ದ ಕರ್ಪೂರಿ ಠಾಕೂರ್ ರಾಜ್ಯದ ಅತ್ಯಂತ ಹಿಂದುಳಿದ ವರ್ಗದ ನಾಯಕರಾಗಿದ್ದರು. ಎರಡು ಬಾರಿ, 1970ರ ಡಿಸೆಂಬರ್‌ನಿಂದ 1971ರ ಜೂನ್‌ವರೆಗೆ ಮತ್ತು 1977ರ ಡಿಸೆಂಬರ್‌ನಿಂದ 1979ರ ಎಪ್ರಿಲ್‌ವರೆಗೆ ಬಿಹಾರದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಸಿಎಂ ಆಗಿದ್ದಾಗ ಸರಕಾರಿ ಉದ್ಯೋಗಗಳಲ್ಲಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಮುಂಗೇರಿ ಲಾಲ್ ಸಮಿತಿ ವರದಿಯನ್ನು ಜಾರಿಗೊಳಿಸಿದ್ದರು. ಮೀಸಲಾತಿ ಒದಗಿಸಲು “ಕರ್ಪೂರಿ ಠಾಕೂರ್ ಸೂತ್ರ’ವನ್ನು ಪರಿ ಚಯಿಸುವ ಮೂಲಕ ದೇಶಾದ್ಯಂತ ಮನೆ ಮಾತಾದರು. ಸ್ವಾತಂತ್ರ್ಯ ಹೋರಾಟದ ವೇಳೆ “ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಚಳವಳಿಯಲ್ಲಿ ಸಕ್ರಿಯ ವಾಗಿ ಭಾಗವಹಿಸಿ, ಜೈಲುವಾಸವನ್ನೂ ಅನುಭವಿಸಿದ್ದರು.ಬಿಹಾರದಲ್ಲಿ ಸಂಪೂರ್ಣವಾಗಿ ಸಾರಾಯಿ ನಿಷೇಧಿಸಿದ ಮೊದಲ ಸಿಎಂ ಎಂಬ ಖ್ಯಾತಿಯೂ ಅವರದು. 1924ರ ಜ. 24ರಂದು ಜನಿಸಿದ ಠಾಕೂರ್ ಅವರ ಜನ್ಮಶತಮಾನೋತ್ಸವದ ಒಂದು ದಿನ ಮುಂಚಿತವಾಗಿಯೇ ಅವರಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿ ಘೋಷಣೆಯಾಗಿರುವುದು ವಿಶೇಷ.
-ಕರ್ಪೂರಿ ಠಾಕೂರ್‌ಜಿ ಬಿಹಾರದ ಅತ್ಯಂತ ಹಿಂದುಳಿದ ವರ್ಗದ ಜನನಾಯಕ.
-ಬಿಹಾರದ ಮುಖ್ಯಮಂತ್ರಿ ಯಾಗಿದ್ದ ಅವರು ಹಿಂದುಳಿದ ವರ್ಗಕ್ಕೆ ಮೀಸಲಾತಿ ಜಾರಿ ಗೊಳಿಸಿದ ಹರಿಕಾರ.
-ಮೆಟ್ರಿಕ್ಯುಲೇಷನ್‌ನಲ್ಲಿ ಇಂಗ್ಲಿಷ್ ಕಡ್ಡಾಯವನ್ನು ನಿಷೇಧಿಸಿದ್ದರು.