ಮುಂಬಯಿ: ತುಳು-ಕನ್ನಡಿಗರ ಪ್ರತಿಷ್ಠಿತ ಸಂಸ್ಥೆ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ನೂತನ ಅಧ್ಯಕ್ಷರಾಗಿ ಹರೀಶ್ ಜಿ. ಅಮೀನ್ ಪುನರಾಯ್ಕೆಗೊಂಡಿದ್ದಾರೆ.
ಸಮಾಜದ ಜನರಿಗೆ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಜನಪರ ಸೇವೆಗೈಯುತ್ತಾ ಮಾದರಿ ಸಂಸ್ಥೆಯಾಗಿ ಬೆಳೆದಿರುವ ಬಿಲ್ಲವರ ಅಸೋಸಿಯೇಶನ್‌ನ 88ನೇ ಹಾಗೂ 89ನೇ ವಾರ್ಷಿಕ ಮಹಾ ಸಭೆಯಲ್ಲಿ ಕಾರ್ಯಕಾರಿ ಸಮಿತಿಗೆ 30 ಸದಸ್ಯರು ಆಯ್ಕೆಗೊಂಡಿದ್ದರು. ಸೆ. 15 ರಂದು ಕಾರ್ಯಕಾರಿ ಸಮಿತಿಯ ಸಭೆಯಲ್ಲಿ 2021- 2024 ರ ಕಾಲಾವಧಿಗೆ ಹರೀಶ್ ಜಿ. ಅಮೀನ್ ಅವರನ್ನು ಸರ್ವಾನುಮತದಿಂದ ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಶಂಕರ್ ಡಿ. ಪೂಜಾರಿ, ಜಯಂತಿ ವಿ. ಉಳ್ಳಾಲ್, ಧರ್ಮಪಾಲ್ ಜಿ. ಅಂಚನ್, ಕೆ. ಸುರೇಶ್ ಕುಮಾರ್ ಹಾಗೂ ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್ ಜಿ. ಸಾಲ್ಯಾನ್, ಜತೆ ಕಾರ್ಯದರ್ಶಿಗಳಾಗಿ ಕೇಶವ್ ಕೆ. ಕೋಟ್ಯಾನ್, ಅಶೋಕ್ ಕೆ. ಕುಕ್ಯಾನ್ ಸಸಿಹಿತ್ಲು, ವಿಶ್ವನಾಥ್ ಆರ್. ತೋನ್ಸೆ, ಜಯ ವಿ. ಪೂಜಾರಿ, ಗೌರವ ಪ್ರಧಾನ ಕೋಶಾಧಿಕಾರಿಯಾಗಿ ರಾಜೇಶ್ ಜೆ. ಬಂಗೇರ, ಜತೆ ಕೋಶಾಧಿಕಾರಿಗಳಾಗಿ ಶಿವರಾಮ್ ಎಸ್. ಪೂಜಾರಿ, ಮೋಹನ್ ಡಿ. ಪೂಜಾರಿ, ಹರಿಶ್ಚಂದ್ರ ಜಿ. ಕುಂದರ್, ಶರತ್ ಪೂಜಾರಿ ಹಾಗೂ ಸೇವಾದಳದ ಮುಖ್ಯಸ್ಥರಾಗಿ ಗಣೇಶ್ ಕೆ. ಪೂಜಾರಿಯವರನ್ನು ಆಯ್ಕೆ ಮಾಡಲಾಯಿತು.
ಇದನ್ನೂ ಓದಿ:‘ಪುಕ್ಸಟ್ಟೆ ಲೈಫು’ ಇನ್‌ಸೈಡ್ ಸ್ಟೋರಿ: ಸಂಚಾರಿ ವಿಜಯ್ ಚಿತ್ರಕ್ಕೆ ಕಿಚ್ಚನ ಮೆಚ್ಚುಗೆ
ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ದಯಾನಂದ್ ಆರ್. ಪೂಜಾರಿ, ಶ್ರೀನಿವಾಸ್ ಆರ್. ಕರ್ಕೇರ, ಧನಂಜಯ ಎಸ್. ಕೋಟ್ಯಾನ್, ಮೋಹನ್‌ದಾಸ್ ಜಿ. ಪೂಜಾರಿ, ಮಹೇಶ್ ಸಿ. ಪೂಜಾರಿ ಕಾರ್ಕಳ, ಧರ್ಮೇಶ್ ಎಸ್. ಸಾಲ್ಯಾನ್, ನಾಗೇಶ್ ಎಂ. ಕೋಟ್ಯಾನ್, ನೀಲೇಶ್ ಪೂಜಾರಿ ಪಲಿಮಾರು, ಶಕುಂತಲಾ ಕೆ. ಕೋಟ್ಯಾನ್, ಹರೀಶ್ ಜಿ. ಪೂಜಾರಿ, ಬಬಿತಾ ಜೆ. ಕೋಟ್ಯಾನ್, ನವೀನ್ ಎಲ್. ಬಂಗೇರ, ಕೇಶವ್ ಎಸ್. ಪೂಜಾರಿ, ರವಿ ಸನಿಲ್, ಶಂಕರ್ ಸಂಜೀವ ಪೂಜಾರಿ, ನಿರಂಜನ್ ಲಕ್ಷ್ಮಣ್ ಪೂಜಾರಿ, ಮೋಹನ್ ಸಿ. ಕೋಟ್ಯಾನ್, ಸಬಿತಾ ಜಿ. ಪೂಜಾರಿ, ನವೀನ್ ಎಂ. ಪೂಜಾರಿ ಹಾಗೂ ಆಂತರಿಕ ಲೆಕ್ಕಪರಿಶೋಧಕರಾಗಿ ಸಚಿನ್ ಎಸ್. ಪೂಜಾರಿ, ದಿವಾಕರ್ ಎನ್. ಪೂಜಾರಿಯವರನ್ನು ಆಯ್ಕೆ ಮಾಡಲಾಗಿದೆ ಎಂದು ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಪ್ರಕಟನೆ ತಿಳಿಸಿದೆ.