ಹುಣಸೂರು: ಮೈಸೂರಿನ ವಿದ್ಯಾವರ್ಧಕ ತಾಂತ್ರಿಕ ಮಹಾವಿದ್ಯಾಲಯದ ಎನ್‌ಎಸ್‌ಎಸ್‌ವಿದ್ಯಾರ್ಥಿಗಳು ಹುಣಸೂರು ತಾಲೂಕಿನ ಬಿಳಿಕೆರೆಹೋಬಳಿಯ ಕರೀಮುದ್ದನಹಳ್ಳಿಯಲ್ಲಿ ಸಾಮಾ ಜಿಕ ಕಾರ್ಯ ನಡೆಸುವ ಮೂಲಕ ಗ್ರಾಮಸ್ಥರಲ್ಲಿ ಅರಿವು ಮೂಡಿಸಿದರು.
ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಎನ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಎನ್‌ಎಸ್‌ಎಸ್ ಸಂಯೋಜಕ ಪ್ರೊ.ಡಾ.ಕೆ. ಗೋಪಾಲರೆಡ್ಡಿ, ಸಮಾಜದಲ್ಲಿ ಸೇವೆಗೆ ಬೆಲೆ ಕಟ್ಟಲುಸಾಧ್ಯವಿಲ್ಲ. ಹೀಗಾಗಿ ಒಂದಿಲ್ಲೊಂದು ರೀತಿಯಲ್ಲಿ ಸೇವೆ ಮಾಡುವ ಮನೋಭಾವ ಬೆಳೆಸಿಕೊಳ್ಳ ಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಎನ್‌ಎಸ್‌ಎಸ್‌ನಲ್ಲಿ ವಿದ್ಯಾರ್ಥಿಗಳಿಗೆ ನಾಯಕತ್ವ ಗುಣ, ಸಮಯಪಾಲನೆ ಹಾಗೂ ಎಂತಹ ಪ್ರತಿಕೂಲ ಸಂದರ್ಭದಲ್ಲೂ ಒತ್ತಡ ನಿಭಾಯಿಸುವ ಶಕ್ತಿಸಿಗುತ್ತದೆ. ವಿದ್ಯಾರ್ಥಿಗಳಲ್ಲಿರುವ ಅದಮ್ಯ ಶಕ್ತಿಯನ್ನು ಗುರುತಿಸಲಾಗುವುದು. ಸಾಂಪ್ರದಾ ಯಿಕ ಶಿಕ್ಷಣ ಒಂದರಲ್ಲೇ ಏನೂ ಸಾಧಿಸಲಾಗುವು ದಿಲ್ಲ. ಈ ಸೇವಾ ಯೋಜನೆಯ ಮುಖಾಂತರ ಗ್ರಾಮಗಳನ್ನು ಉದ್ಧಾರ ಮಾಡಲು ಸಹಾಯ ವಾಗು ತ್ತದೆ. ಈ ಯೋಜನೆಯನ್ನು 1969ರಲ್ಲಿ ಅಂದಿನ ಕೇಂದ್ರ ಶಿಕ್ಷಣ ಸಚಿವ ಡಾ ವಿ.ಆರ್.ವಿ. ರಾವ್ ಜಾರಿಗೆ ತಂದರು ಎಂದು ಸ್ಮರಿಸಿದರು.
ತಮ್ಮ ಕಾಲೇಜಿನ 2 ಬಸ್ಸುಗಳು ಪ್ರತಿದಿನ ಬೆಳಗ್ಗೆ ಉಚಿತ ಬಸ್ ಸೇವೆ ಕಲ್ಪಿಸಲಾಗಿದೆ. ಇದು ಸಹ ಒಂದು ರೀತಿಯಲ್ಲಿ ಸೇವೆ ಮಾಡಲು ಸ್ಫೂರ್ತಿ. ನಮ್ಮ ಸಂಸ್ಥೆಯಲ್ಲಿ ಬಡವರು ಹಾಗೂ ಉತ್ತಮ ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಸುಮಾರು 25 ಲಕ್ಷ ರೂ. ವಿತರಿಸಲಾ ಗಿದೆ ಎಂದರು. ಕಾರ್ಯಕ್ರಮ ದಲ್ಲಿಪ್ರೊ.ಶರತ್ ಕುಮಾರ್, ಪ್ರೊ. ಬಿ.ಎಚ್. ಸ್ವಾತಿ, ಪ್ರೊ. ವಿ.ಮೇಘಾ, ಎಚ್.ಆರ್ ಮೋಹನ್ ಇತರರಿದ್ದರು. ಕಾಲೇಜಿನ 35 ವಿದ್ಯಾರ್ಥಿಗಳು ಗ್ರಾಮದ ಪ್ರತಿ ಮನೆಗೆ ತೆರಳಿ ಕೋವಿಡ್ ಹಾಗು ಪ್ಲಾಸ್ಟಿಕ್ ಬಗ್ಗೆ ಜಾಗೃತಿ ಮೂಡಿಸಿದರು.
ಪ್ರತಿಯೊಬ್ಬರೂ ಸಸಿ ನೆಟ್ಟು ಪೋಷಿಸಿ :
ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸಾಲುಮರದ ತಿಮ್ಮಕ್ಕನನ್ನು ಮಾದರಿ ಯಾಗಿರಿಸಿಕೊಂಡು ಪರಿಸರ ಹೊಣೆ ಹೊರಬೇಕು. ನಾವು ವಿದ್ಯಾವಂತರು ಕೊನೆ ಪಕ್ಷ ಒಂದು ಗಿಡವಾದರು ನೆಟ್ಟು ಬೆಳೆಸಿದರೆ, ಅದೇ ಸೇವೆ ಯಾಗುತ್ತದೆ. ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಕೆಯನ್ನು ಗ್ರಾಮೀಣರು ಕಡಿಮೆ ಮಾಡಿದಲ್ಲಿ ಪರಿಸರಕ್ಕೂ ಕೊಡುಗೆ ನೀಡಿದಂತಾಗಲಿದೆ ಎಂದು ಎನ್‌ಎಸ್‌ಎಸ್ ಸಂಯೋಜಕ ಪ್ರೊ.ಡಾ.ಕೆ.ಗೋಪಾಲರೆಡ್ಡಿ ತಿಳಿಸಿದರು.