Advertisement

“ಪತ್ರಕರ್ತರಿಗೆ ಸಾಮಾಜಿಕ ಹೊಣೆಗಾರಿಕೆ ಮುಖ್ಯ’

12:33 AM Dec 29, 2021 | Team Udayavani |

ಮಂಗಳೂರು: ಪತ್ರಕರ್ತರು ಸಾಮಾಜಿಕ ಹೊಣೆಗಾರಿಕೆಯನ್ನು ಅರಿತು ಕಾರ್ಯ ನಿರ್ವಹಿಸಿದರೆ ಸಮಾಜಕ್ಕೆ ಸಿಗುವ ಫಲಿತಾಂಶ ಉತ್ತಮ ವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಹೇಳಿದ್ದಾರೆ.

Advertisement

ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಮಂಗಳವಾರ ಜರಗಿದ ಜಿಲ್ಲಾ ಪತ್ರಕರ್ತರ ಸಮ್ಮೇಳನದ ಸಮಾರೋಪ ದಲ್ಲಿ ಮುಖ್ಯ ಅತಿಥಿಯಾಗಿದ್ದ ಅವರು, ಮಾಧ್ಯಮವು ಆಡಳಿತ ವ್ಯವಸ್ಥೆಯ ಕಣ್ಣು ಹಾಗೂ ಕಿವಿಯಾಗಿದ್ದು ಜನಪರ ಆಡಳಿತದಲ್ಲಿ ಅದು ನಿರ್ವಹಿಸುವ ಪಾತ್ರ ಮಹತ್ತರವಾದುದು. ಮಾಧ್ಯ ಮಗಳ ಮೇಲೆ ಜನತೆ ಹೊಂದಿರುವ ನಂಬಿಕೆಯನ್ನು ಪತ್ರಕರ್ತರು ಉಳಿಸಿ ಕೊಳ್ಳಬೇಕು ಎಂದರು.

ಜಿಲ್ಲಾ ಎಸ್‌ ಪಿ ಹೃಷಿಕೇಶ್‌ ಸೋನಾವಣೆ ಮಾತನಾಡಿ, ಪತ್ರ ಕರ್ತರು ವೃತ್ತಿಯಲ್ಲಿ ಕ್ರಿಯಾಶೀಲತೆ ಜತೆಗೆ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.

ನಗರ ಪೊಲೀಸ್‌ ಉಪ ಆಯುಕ್ತ ಹರಿರಾಂ ಶಂಕರ್‌, ಅದಾನಿ ಸಂಸ್ಥೆಯ ಅಧ್ಯಕ್ಷ ಕಿಶೋರ್‌ ಆಳ್ವ, ಕೆನರಾ ಬ್ಯಾಂಕಿನ ಮಂಗಳೂರು ವೃತ್ತಕಚೇರಿಯ ಜಿಎಂ ಯೋಗೀಶ್‌ ಆಚಾರ್ಯ ಮಾತನಾಡಿದರು.

ಸಮ್ಮೇಳನ ಸರ್ವಾಧ್ಯಕ್ಷ, ಹಿರಿಯ ಪತ್ರಕರ್ತ ಮನೋಹರ ಪ್ರಸಾದ್‌ ಅವರ ಭಾವಚಿತ್ರ ಯಾನ ಕೃತಿಯನ್ನು ಬಿಡುಗಡೆಗೊಳಿಸಲಾಯಿತು.

Advertisement

ಇದನ್ನೂ ಓದಿ:ನೀಟ್‌ ಪಿಜಿ 2021ರ ಕೌನ್ಸೆಲಿಂಗ್‌ ವಿಳಂಬ : ರಸ್ತೆಗಿಳಿದು ಪ್ರತಿಭಟನೆಗೆ ಮುಂದಾದ ವೈದ್ಯರು

ದ.ಕ. ಜಿಲ್ಲೆ ಭೌಗೋಳಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಅನನ್ಯತೆ ಹೊಂದಿದೆ. ಹಾಗೆಯೇ ಇಲ್ಲಿಯ ಪತ್ರಕರ್ತರೂ ವೃತ್ತಿ ಜತೆ ಸಮಾಜಮುಖಿ  ಕೆಲಸಗಳಲ್ಲಿ ತೊಡಗಿ ದ್ದಾರೆ ಎಂದು ಮನೋಹರ ಪ್ರಸಾದ್‌ ಹೇಳಿದರು.

ಮನೋಹರ ಪ್ರಸಾದ್‌ ಹಾಗೂ ಹಿರಿಯ ಪತ್ರಕರ್ತರಾದ ಬಾಲಕೃಷ್ಣ ಪುತ್ತಿಗೆ, ಭಾಸ್ಕರ ರೈ ಕಟ್ಟ, ಸಾಂತೂರು ಶ್ರೀನಿವಾಸ ತಂತ್ರಿ ಮತ್ತಿತರರನ್ನು ಸಮ್ಮಾನಿಸಲಾಯಿತು. ಕರಾವಳಿ ಅಭಿವೃದ್ಧಿ ಹಾಗೂ ಮಾಧ್ಯಮ- ಸಾಮಾಜಿಕ ಹೊಣೆಗಾರಿಕೆ ಬಗ್ಗೆ ಗೋಷ್ಠಿಗಳು ಜರಗಿದವು. ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಬಾಳ ಜಗನ್ನಾಥ ಶೆಟ್ಟಿ, ಮಂಗಳೂರು ಪ್ರಸ್‌ಕ್ಲಬ್‌ ಅಧ್ಯಕ್ಷ ಅನ್ನು ಮಂಗಳೂರು, ಪತ್ರಿಕಾ ಭವನ ಟ್ರಸ್ಟ್‌ ಅಧ್ಯಕ್ಷ ರಾಮಕೃಷ್ಣ ಆರ್‌. ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next