Advertisement

ಅಪಘಾತದಲ್ಲಿ ಕೊನೆಯುಸಿರೆಳೆದ ಸಾಮಾಜಿಕ ಜಾಲತಾಣ ತಾರೆ ರೋಹಿತ್ ಭಾಟಿ

10:38 AM Nov 22, 2022 | Team Udayavani |

ನೋಯ್ಡಾ: ಗ್ರೇಟರ್ ನೋಯ್ಡಾದಲ್ಲಿ ವೇಗವಾಗಿ ಬಂದ ಕಾರು ಮರಕ್ಕೆ ಡಿಕ್ಕಿ ಪರಿಣಾಮ 25 ವರ್ಷದ ಸಾಮಾಜಿಕ ಜಾಲತಾಣದ ಸೆಲೆಬ್ರಿಟಿ ಸಾವನ್ನಪ್ಪಿದ್ದಾರೆ ಮತ್ತು ಅವರ ಇಬ್ಬರು ಸ್ನೇಹಿತರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ರೌಡಿ ಭಾಟಿ ಎಂದೇ ಹೆಸರಾದ ಸೋಶಿಯಲ್ ಮೀಡಿಯಾ ತಾರೆ ರೋಹಿತ್ ಭಾಟಿ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅವರ ಸ್ನೇಹಿತರಲ್ಲಿ ಒಬ್ಬರು ಗ್ರೇಟರ್ ನೋಯ್ಡಾದಲ್ಲಿ ಮತ್ತು ಇನ್ನೊಬ್ಬರು ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ:ಹುಣಸೂರು: ತುಂಬಿದ ಕೆರೆ ಮುಂದೆ ಸೆಲ್ಪಿ ಕ್ಲಿಕ್ಕಿಸಿ ಸಂಭ್ರಮಿಸಿದ ಶಾಸಕ ಮಂಜುನಾಥ್

“ಚುಹಾದ್‌ಪುರ ಅಂಡರ್‌ಪಾಸ್ ಬಳಿ ಮುಂಜಾನೆ ಮೂರು ಗಂಟೆ ಸುಮಾರಿಗೆ ಘಟನೆ ನಡೆದಿದೆ. ಭಾಟಿ ಮತ್ತು ಸ್ನೇಹಿತರು ಪಾರ್ಟಿ ಮುಗಿಸಿ ಹಿಂತಿರುಗುತ್ತಿದ್ದರು ಎಂದು ಹೇಳಲಾಗುತ್ತಿದೆ. ವೇಗವಾಗಿ ಬಂದ ಕಾರು ಟರ್ನ್ ಮಾಡಲಾಗದೆ ಮರಕ್ಕೆ ಡಿಕ್ಕಿ ಹೊಡೆದಿದೆ” ಎಂದು ಸ್ಥಳೀಯ ಬೀಟಾ 2 ಪೊಲೀಸ್‌ ಠಾಣೆಯ ನ ಉಸ್ತುವಾರಿ ಅನಿಲ್ ಕುಮಾರ್ ಹೇಳಿದ್ದಾರೆ.

ಬುಲಂದ್‌ಶಹರ್‌ ಮೂಲದ ಭಾಟಿ ಗ್ರೇಟರ್ ನೋಯ್ಡಾದ ಚಿ ಸೆಕ್ಟರ್‌ನಲ್ಲಿ ವಾಸಿಸುತ್ತಿದ್ದರು. ಗುಜಾರ್ ಸಮುದಾಯಕ್ಕೆ ಸೇರಿದ ಭಾಟಿ ಅವರು ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಮ್‌ ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಜನಪ್ರಿಯರಾಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next