Advertisement

Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!

06:54 PM Nov 08, 2024 | Team Udayavani |

ಕ್ಯಾನ್‌ ಬೆರಾ: ಈ ದೇಶದಲ್ಲಿ ಇನ್ನು 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸಾಮಾಜಿಕ ಜಾಲತಾಣ ಬಳಕೆ ಮಾಡುವಂತಿಲ್ಲ. ಟಿಕ್‌ಟಾಕ್‌, ಫೇಸ್‌ಬುಕ್‌, ಇನ್ಸ್ಟಾಗ್ರಾಮ್‌ ಸೇರಿ ಯಾವುದೇ ಸಾಮಾಜಿಕ ಜಾಲತಾಣ ಬಳಕೆ ಮಾಡದಂತೆ ಸರ್ಕಾರವೇ ನಿಯಮ ತರುತ್ತಿದೆ.

Advertisement

ಹೌದು, ಇದು ಬರುತ್ತಿರುವುದು ಆಸ್ಟ್ರೇಲಿಯಾದಲ್ಲಿ. 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಷೇಧಿಸಲು ಸರ್ಕಾರವು ಕಾನೂನನ್ನು ಜಾರಿಗೆ ತರಲಿದೆ ಎಂದು ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಘೋಷಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಲ್ಬನೀಸ್, ಸಾಮಾಜಿಕ ಮಾಧ್ಯಮವು ನಮ್ಮ ಮಕ್ಕಳಿಗೆ ಹಾನಿ ಮಾಡುತ್ತಿದೆ ಎಂದು ವಿವರಿಸಿದರು. ನಿರ್ಣಾಯಕ ಕ್ರಮವನ್ನು ತೆಗೆದುಕೊಳ್ಳುವ ಸರ್ಕಾರದ ನಿರ್ಧಾರವನ್ನು ಒತ್ತಿ ಹೇಳಿದರು. ಹೊಸ ಶಾಸನವನ್ನು ಈ ವರ್ಷದ ಕೊನೆಯಲ್ಲಿ ಸಂಸತ್ತಿನಲ್ಲಿ ಪರಿಚಯಿಸಲಾಗುವುದು. ಅನುಮೋದನೆ ದೊರೆತರೆ 12 ತಿಂಗಳ ನಂತರ ಜಾರಿಗೆ ಬರಲಿದೆ.

ಪ್ರಸಿದ್ದ ಸಾಮಾಜಿಕ ಜಾಲತಾಣ ವೇದಿಕೆಗಳಾದ ಫೇಸ್‌ ಬುಕ್‌, ಟಿಕ್‌ ಟಾಕ್‌, ಎಕ್ಸ್‌ ಮತ್ತು ಯೂಟ್ಯೂಬ್‌ ಗಳಿಗೆ ಈ ನಿಷೇಧದ ಬಿಸಿ ತಟ್ಟಲಿದೆ. ಸಚಿವೆ ಮಿಚೆಲ್ ರೋಲ್ಯಾಂಡ್, ಪೋಷಕರು ಒಪ್ಪಿಗೆ ನೀಡುವ ಮಕ್ಕಳಿಗೆ ಸಹ ಯಾವುದೇ ವಿನಾಯಿತಿ ಇರುವುದಿಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next