Advertisement

ಕಾಂಗ್ರೆಸ್‌ನಿಂದಲೇ ಸಾಮಾಜಿಕ ನ್ಯಾಯ

11:48 AM Mar 30, 2022 | Team Udayavani |

ಚಿತ್ತಾಪುರ: ರಾಜಕೀಯದಲ್ಲಿ ಎಲ್ಲ ಜಾತಿ, ಜನಾಂಗದವರಿಗೆ ಸಮಾನ ಅವಕಾಶ ನೀಡುವ ನಿಟ್ಟಿನಲ್ಲಿ ಸಾಮಾಜಿಕ ನ್ಯಾಯ ಕಾಂಗ್ರೆಸ್‌ ಪಕ್ಷದಿಂದ ಮಾತ್ರ ಸಾಧ್ಯ ಎಂದು ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 2020 ನವೆಂಬರ್‌ 9 ರಂದು ಪುರಸಭೆ ಅಧ್ಯಕ್ಷ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಹೈಕಮಾಂಡ್‌ ತೀಮಾರ್ನದಂತೆ ಅಧ್ಯಕ್ಷ ಹುದ್ದೆಯ ಅಧಿಕಾರವಧಿಯ 30 ತಿಂಗಳ ಅವಧಿಯಲ್ಲಿ ಚಂದ್ರಶೇಖರ ಕಾಶಿ, ಮಲ್ಲಿಕಾರ್ಜುನ ಕಾಳಗಿ ಅವರಿಗೆ ತಲಾ 15 ತಿಂಗಳು ಎಂದು ಅಧಿಕಾರ ಹಂಚಿಕೆ ಮಾಡಲಾಗಿತ್ತು. ಅಧ್ಯಕ್ಷ ಹುದ್ದೆ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. ಆಗ ಅಧ್ಯಕ್ಷೆ ಹುದ್ದೆಗೆ ಚಂದ್ರಶೇಖರ ಕಾಶಿ ಮತ್ತು ಮಲ್ಲಿಕಾರ್ಜುನ ಕಾಳಗಿ ಅವರ ನಡುವೆ ತೀವ್ರ ಪೈಪೋಟಿ ಉಂಟಾಗಿತ್ತು. ಆಗ ಅನುಕಂಪದ ಆಧಾರದ ಮೇಲೆ ಚಂದ್ರಶೇಖರ ಕಾಶಿ ಅವರಿಗೆ ಅವಕಾಶ ನೀಡಲಾಗಿತ್ತು. ಈಗ ಮಲ್ಲಿಕಾರ್ಜುನ ಕಾಳಗಿ ಅವರಿಗೆ ಸಾಮಾಜಿಕ ನ್ಯಾಯದಡಿ ಅಧ್ಯಕ್ಷ ಹುದ್ದೆಗೆ ಅವಕಾಶ ನೀಡಲಾಗಿದೆ ಎಂದರು.

ಕಾಂಗ್ರೆಸ್‌ ಪಕ್ಷದಲ್ಲಿ ಶಾಸಕ ಪ್ರಿಯಾಂಕ್‌ ಖರ್ಗೆ ಅವರಂತ ಗಟ್ಟಿ ನಾಯಕತ್ವ ಇರುವುದರಿಂದ ಅಧಿಕಾರ ಹಂಚಿಕೆ ಸಾಧ್ಯವಾಗಿದೆ. ಇಲ್ಲಿ ಯಾವುದೇ ಕುದುರೆ ವ್ಯಾಪಾರ ಅಥವಾ ಸದಸ್ಯರ ಖರೀದಿಯಂತಹ ಕೆಟ್ಟ ಚಾಳಿಗೆ ಅವಕಾಶ ನೀಡಿಲ್ಲ. ಕಾಂಗ್ರೆಸ್‌ ಹೈಕಮಾಂಡ್‌ ತೀರ್ಮಾನವೇ ಅಂತಿಮವಾಗಿದೆ ಎಂದು ಹೇಳಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಭೀಮಣ್ಣ ಸಾಲಿ, ಪುರಸಭೆ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ, ಮುಖಂಡರಾದ ಮುಕ್ತಾರ ಪಟೇಲ್‌, ಸೂರ್ಯಕಾಂತ ಪೂಜಾರಿ, ರಸೂಲ್‌ ಮುಸ್ತಫಾ, ಪಾಶಾಮಿಯ್ನಾ ಖುರೇಷಿ, ಈರಪ್ಪ ಭೋವಿ, ಶೀಲಾ ಕಾಶಿ, ಶಿವಕಾಂತ ಬೆಣ್ಣೂರಕರ್‌, ಅಹ್ಮದ್‌ ಸೇಠ್, ನಾಗಯ್ಯ ಗುತ್ತೇದಾರ, ಶಿವಾಜಿ ಕಾಶಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next