Advertisement

ಸಾಮಾಜಿಕ ಅಂತರ, ಮಾಸ್ಕ್ ಇಲ್ಲದಿದ್ದರೆ 200 ರೂ.ದಂಡ

05:44 AM Jun 18, 2020 | Lakshmi GovindaRaj |

ಬೆಂಗಳೂರು: ನಗರದ ಪ್ರಮುಖ ಮಾರುಕಟ್ಟೆ, ಹೋಟೆಲ್‌ಗ‌ಳಲ್ಲಿ ಮಾಸ್ಕ್ ಧರಿಸದೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರುವವರ ಮೇಲೆ ಗುರು ವಾರದಿಂದ 200 ರೂ. ದಂಡ ಬೀಳಲಿದೆ. ಈ ಸಂಬಂಧ ಕರ್ನಾಟಕ ರಾಜ್ಯ ಮಿನರಲ್‌ ಕಾರ್ಪೋರೇಷನ್‌ನ ವ್ಯವಸ್ಥಾಪಕ ನಿರ್ದೇಶಕ ನವೀನ್‌ ರಾಜ್‌ಸಿಂಗ್‌ ಅವರ ನೇತೃತ್ವದಲ್ಲಿ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಬುಧವಾರ ಸಭೆ ನಡೆಯಿತು.

Advertisement

ಈ ಸಂಬಂಧ “ಉದಯವಾಣಿ’ಯೊಂದಿಗೆ ಮಾತನಾಡಿದ ಬಿಬಿಎಂಪಿ  ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತ ಸರ್ಫರಾಜ್‌ಖಾನ್‌, ನಗರದಲ್ಲಿ ಮಾರುಕಟ್ಟೆ ಹಾಗೂ ಹೋಟೆಲ್‌ಗ‌ಳಲ್ಲಿ ಹೆಚ್ಚು ಜನ ಸೇರುತ್ತಿದ್ದು, ಕೊರೊನಾ ಸೋಂಕು ಹಬ್ಬುವ ಆತಂಕ ಎದುರಾಗಿದೆ. ಹೀಗಾಗಿ, ಬಿಬಿಎಂಪಿ ವ್ಯಾಪ್ತಿಯ 8 ವಲಯಗಳಲ್ಲಿ ತಲಾ 5 ಜನರನ್ನು ಒಳಗೊಂಡ ಮಾರ್ಷಲ್‌ಗ‌ಳ ತಂಡ ಹಾಗೂ ಕಿರಿಯ ಮತ್ತು ಹಿರಿಯ ಆರೋಗ್ಯಾಧಿಕಾರಿಗಳ ಕಣ್ಗಾವಲು ತಂಡ ರಚಿಸಲಾಗಿದೆ ಎಂದರು.

ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸದೆ ಇರುವವರ ಮೇಲೆ  ತಲಾ 200 ರೂ. ದಂಡ ವಿಧಿಸಲಾಗುವುದು ಹಾಗೂ ಬಿಬಿಎಂಪಿ ಮಾರ್ಗಸೂಚಿ ಅನುಸರಿಸದ ಹೋಟೆಲ್‌, ರೆಸ್ಟೋರೆಂಟ್‌ನ ಮಾಲಿಕರ ಮೇಲೂ ಕ್ರಮ ತೆಗೆದುಕೊಳ್ಳಲು ಸಾಮಾಜಿಕ ಅಂತರ ಕಾರ್ಯಪಡೆಯ ಅಧ್ಯಕ್ಷರಾ ದ ನವೀನ್‌  ರಾಜ್‌ಸಿಂಗ್‌ ಅವರು ನಿರ್ದೇಶನ ನೀಡಿದ್ದಾರೆ.

ಹೀಗಾಗಿ, ಗುರುವಾರದಿಂದಲೇ ಕಾರ್ಯಾಚರಣೆ ಪ್ರಾರಂಭಿಸಲಾಗುವುದು. ಇದಕ್ಕಾಗಿ ಪ್ರತಿ ವಲಯಕ್ಕೆ ಒಂದು ಪ್ರಹಾರಿ ವಾಹನ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.  ಸಭೆಯಲ್ಲಿ  ಬಿಬಿಎಂಪಿ ವಿಶೇಷ ಆಯುಕ್ತ (ಘನತ್ಯಾಜ್ಯ) ವಿಭಾಗ ರಂದೀಪ್‌, ಚೀಫ್ ಮಾರ್ಷಲ್‌ ರಾಜಿರ್‌ ಸಿಂಗ್‌, ಆರೋಗ್ಯಾಧಿಕಾರಿಗಳಾದ ಸಂಧ್ಯಾ, ಭಾಗ್ಯ ಲಕ್ಷ್ಮೀ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next