Advertisement

Karnataka: ಸಾಮಾಜಿಕ ಸಮಾನತೆ, ಪ್ರಾದೇಶಿಕ ಅಸಮಾನತೆ

12:08 AM May 28, 2023 | Team Udayavani |

ಬೆಂಗಳೂರು: ಜಾತಿ ಹಾಗೂ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಸಿಎಂ ಸಿದ್ದರಾಮಯ್ಯ ತಮ್ಮ ಸಂಪುಟದಲ್ಲಿ ಸಮತೋಲನ ಸಾಧಿಸಿದ್ದರೂ ಪ್ರಾದೇಶಿಕ ವ್ಯತ್ಯಾಸ ನಿವಾರಣೆಯಲ್ಲಿ ಎಡವಿದಂತಾಗಿದೆ.

Advertisement

ಸಿದ್ದರಾಮಯ್ಯ ಸಂಪುಟದಲ್ಲಿ ಎಲ್ಲ ಜಾತಿ-ವರ್ಗಕ್ಕೆ ಪ್ರಾತಿನಿಧ್ಯವಿದೆ. ಆದರೆ 9 ಜಿಲ್ಲೆಗಳಿಗೆ ಪ್ರಾತಿನಿಧ್ಯ ದೊರೆತಿಲ್ಲ. ಎಂದಿನಂತೆ ಬೆಂಗಳೂರು ಸಹಿತ ಹಳೆ ಮೈಸೂರು ಭಾಗಕ್ಕೆ ಸಿಂಹಪಾಲು ಲಭಿಸಿದ್ದು, ಲಿಂಗಾಯತ ಸಮುದಾಯಕ್ಕೆ ಒಟ್ಟು 7 ಸ್ಥಾನಗಳನ್ನು ನೀಡುವ ಮೂಲಕ ವೀರಶೈವ-ಲಿಂಗಾಯತ ಮತಬ್ಯಾಂಕ್‌ ಕಾಪಿಟ್ಟುಕೊಳ್ಳುವ ಲೆಕ್ಕಾಚಾರಕ್ಕೆ ಕಾಂಗ್ರೆಸ್‌ ಮುಂದಾಗಿದೆ.

ಹೇಗಿದೆ ಜಾತಿ ಲೆಕ್ಕಾಚಾರ

ಲಿಂಗಾಯತ ಸಮುದಾಯಕ್ಕೆ ಒಟ್ಟು 7 ಸಚಿವ ಸ್ಥಾನ ನೀಡಲಾಗಿದ್ದು, ಎಲ್ಲ ಪ್ರಮುಖ ಒಳಪಂಗಡಗಳನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಎಂ.ಬಿ.ಪಾಟೀಲ್‌, ಈಶ್ವರ ಖಂಡ್ರೆ, ಲಕ್ಷ್ಮೀ ಹೆಬ್ಟಾಳ್ಕರ್‌, ಶಿವಾನಂದ ಪಾಟೀಲ…, ಎಸ್‌.ಎಸ್‌. ಮಲ್ಲಿಕಾರ್ಜುನ್‌ , ಶರಣ ಪ್ರಕಾಶ ಪಾಟೀಲ…, ಶರಣಬಸಪ್ಪ ದರ್ಶನಾಪುರ ಅವರು ಲಿಂಗಾಯತ ಕೋಟಾದಲ್ಲಿ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ.

ಒಕ್ಕಲಿಗರಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೇರಿ ಚಲುವರಾಯಸ್ವಾಮಿ, ಪಿರಿಯಾಪಟ್ಟಣ ವೆಂಕಟೇಶ್‌,ಎಂ.ಸಿ.ಸುಧಾಕರ್‌, ಕೃಷ್ಣಬೈರೇಗೌಡ ಸಹಿತ ಐವರಿಗೆ, ರೆಡ್ಡಿ ಸಮುದಾಯದಿಂದ ಎಚ್‌.ಕೆ.ಪಾಟೀಲ್‌ ಹಾಗೂ ರಾಮಲಿಂಗಾ ರೆಡ್ಡಿಗೆ ಅವಕಾಶ ನೀಡಲಾಗಿದೆ.ಕೆ. ಎಚ್‌. ಮುನಿಯಪ್ಪ, ಡಾ| ಜಿ.ಪರಮೇಶ್ವರ, ಎಚ್‌. ಸಿ.ಮಹದೇವಪ್ಪ, ಆರ್‌.ಬಿ. ತಿಮ್ಮಾಪುರ ಮತ್ತು ಪ್ರಿಯಾಂಕ್‌ ಖರ್ಗೆ, ಶಿವರಾಜ್‌ ತಂಗಡಗಿ ಅವರು ಪರಿಶಿಷ್ಟ ಜಾತಿ ಕೋಟಾ ದಲ್ಲಿ ಸಚಿವರಾಗಿ¨ªಾರೆ. ಪರಿಶಿಷ್ಟ ಪಂಗಡ ದಿಂದ ನಾಗೇಂದ್ರ,
ಮಧುಗಿರಿ ರಾಜಣ್ಣ, ಸತೀಶ್‌ ಜಾರಕಿಹೊಳಿ ಅವರಿಗೆ ಅವಕಾಶ ದೊರೆತಿದೆ.ಹಿಂದುಳಿದ ಜಾತಿಗಳಲ್ಲಿ ರಾಜು ಕ್ಷತ್ರಿಯ ಸಮುದಾಯದ ಬೋಸರಾಜು, ಬೆಸ್ತ ಸಮುದಾಯದ ಮಾಂಕಾಳ ವೈದ್ಯ, ಮರಾಠ ಸಮಾಜದಿಂದ ಸಂತೋಷ್‌ ಲಾಡ್‌, ಕುರುಬ ಸಮುದಾಯದಿಂದ ಸಿದ್ದರಾಮಯ್ಯ, ಬೈರತಿ ಸುರೇಶ್‌, ಬಿಲ್ಲವ (ಈಡಿಗ) ಸಮುದಾಯದಿಂದ ಮಧು ಬಂಗಾರಪ್ಪ ಸಚಿವರಾಗಿದ್ದಾರೆ.

Advertisement

ಮುಸ್ಲಿಂ ಸಮುದಾಯದಿಂದ ಜಮೀರ್‌ ಅಹಮದ್‌ ಖಾನ್‌, ರಹೀಂ ಖಾನ್‌, ಕ್ರೈಸ್ತ ಸಮುದಾಯದಿಂದ ಕೆ.ಜೆ.ಜಾರ್ಜ್‌, ಜೈನ ಸಮುದಾಯದಿಂದ ಡಿ.ಸುಧಾಕರ್‌ ಹಾಗೂ ಬ್ರಾಹ್ಮಣ ಸಮು ದಾಯದ ಪ್ರತಿನಿಧಿಯಾಗಿ ದಿನೇಶ್‌ ಗುಂಡೂರಾವ್‌ ಅವರಿಗೆ ಸಚಿವ ಸ್ಥಾನ ದೊರಕಿದೆ.

9 ಜಿಲ್ಲೆಗೆ ಸಿಗದ ಪ್ರಾತಿನಿಧ್ಯ
ಸಿದ್ದರಾಮಯ್ಯ ಸಂಪುಟದಲ್ಲಿ 9 ಜಿಲ್ಲೆಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ಬೆಂಗಳೂರು ನಗರದಿಂದ ಆರು ಜನರಿಗೆ ಅವಕಾಶ ಕಲ್ಪಿಸಿರುವುದು ಮತ್ತೆ ಅಸಮಾಧಾನಕ್ಕೆ ಕಾರಣವಾಗಿದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಮಡಿಕೇರಿ, ಚಾಮರಾಜನಗರ, ಕೋಲಾರ, ಹಾವೇರಿ ಹಾಗೂ ವಿಜಯನಗರ ಜಿಲ್ಲೆಗೆ ಸಂಪುಟದಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲ. ಸಿದ್ದರಾಮಯ್ಯ ಒಳಗೊಂಡಂತೆ ಮೈಸೂರಿಗೆ 3, ಬೆಳಗಾವಿಗೆ 2 ಹಾಗೂ ಕಲಬುರಗಿ ಜಿಲ್ಲೆಗೆ 2 ಸಂಪುಟ ಸ್ಥಾನ ಲಭಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next