Advertisement

ವಚನದಿಂದ ಸಾಮಾಜಿಕ ಸಮಾನತೆ

12:57 PM Dec 07, 2018 | Team Udayavani |

ಕಲಬುರಗಿ: ಮಾನವೀಯ ಮೌಲ್ಯಗಳನ್ನು ಒಳಗೊಂಡ ವಚನ ಸಾಹಿತ್ಯ ಸಾಮಾಜಿಕ ಸಮಾನತೆ ಸಾರುತ್ತದೆ, ಜಾತಿಯ ಗಡಿ ಮೀರಿ ವಚನಗಳು ಬೆಳಗುತ್ತಿವೆ ಎಂದು ಸ್ಟೇಷನ್‌ ಬಜಾರ್‌ ಠಾಣೆ ಪಿಐ ಶಕೀಲ್‌ ಅಂಗಡಿ ಹೇಳಿದರು. ಲಿಂ. ಸುವರ್ಣಾ ಶಿವಾನಂದ ಸಜ್ಜನ ಹಾಗರಗುಂಡಗಿ
ಸ್ಮರಣಾರ್ಥ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ನಗರದ ಶಿವಾ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ “ವಚನದೊಳಗಿನ ಓಜ’ ಎನ್ನುವ ಕತ್ತಲು ಕರಗುವ ಪರಿ ಎನ್ನುವ ವಿಶೇಷ ವೈಚಾರಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಉಪನ್ಯಾಸ ನೀಡಿದ ಶರಣ ಸಾಹಿತಿ ವೆಂಕಟೇಶ ಜನಾದ್ರಿ, ಬಿಜ್ಜಳನ ಭಕ್ತಿ ಭಂಡಾರಿಯಾದ ವಿಶ್ವಗುರು ಬಸವಣ್ಣನವರು ಅಧಿಕಾರ, ದ್ರವ್ಯಗಳಿಗೆ ಆಸೆ ಪಡದೆ ಸಾಮಾಜಿಕ ಸಮಾನತೆ ಹಾಗೂ ವೈಚಾರಿಕ ಚಿಂತನೆ ಸಾರಿದರು. ಹನ್ನೆರಡನೇ ಶತಮಾನದ ಬಸವಾದಿ ಶರಣರು ಸಮಾಜದಲ್ಲಿ ಮನೆ ಮಾಡಿದ್ದ ಮೂಢನಂಬಿಕೆ, ಕಂದಾಚಾರಗಳನ್ನು ಖಂಡಿಸಿ ವೈಜ್ಞಾನಿಕ ಮನೋಭಾವನೆಯನ್ನು ಜನಮನದಲ್ಲಿ ಬಿತ್ತಿದ್ದಾರೆ ಎಂದರು.

Advertisement

ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಡಾ| ಎಸ್‌.ಎಸ್‌. ಹಂಚನಾಳ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ದಾನಮ್ಮ ಕೋರವಾರ, ಶಂಕರ ಸಜ್ಜನ ಹಾಗರಗುಂಡಗಿ ಮಾತನಾಡಿದರು.

ಅಕಾಡೆಮಿಯ ಡಾ| ಕೆ. ಗಿರಿಮಲ್ಲ, ಪರಮೇಶ್ವರ ಶಟಕಾರ, ಡಾ| ಅರುಣಕುಮಾರ ಲಗಶೆಟ್ಟಿ, ಜಗದೀಶ ಮರಪಳ್ಳಿ ಚಿಮ್ಮನಚೋಡ, ಶ್ರೀಕಾಂತ ಪಾಟೀಲ ತಿಳಗೂಳ, ಸತೀಶ ಸಜ್ಜನ, ಸುಭಾಶ್ಚಂದ್ರ ಸಜ್ಜನಶೆಟ್ಟಿ ಹೊನ್ನಕಿರಣಗಿ, ಪ್ರಸನ್ನ ವಾಂಜರಖೇಡೆ, ಸವಿತಾ ಪಾಟೀಲ ಸೊಂತ,
ಕವಯತ್ರಿ ಗಾಯತ್ರಿ ಮಹಾಮುನಿ, ವಿರಾಜಕುಮಾರ ಕಲ್ಯಾಣ, ನಾಗರಾಜ ಕಾಮಾ, ಮರಲಿಂಗ ಯಾದಗಿರಿ ಹಾಗೂ ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next