Advertisement

Desi Swara: ವಿಜ್ಞಾನದ ಬಲದಿಂದ ಸಮಾಜ ವೃದ್ಧಿ- ಸುಸ್ಥಿರ ಭವಿಷ್ಯಕ್ಕಾಗಿ ವಿಜ್ಞಾನ

12:53 PM Mar 09, 2024 | Team Udayavani |

ವಿಜ್ಞಾನ ಯಾವುದೋ ವಸ್ತು, ಜಾಗ, ಅಂಶದಲ್ಲಿಲ್ಲ? ಎಲ್ಲಿ ನೋಡಿದರೂ ವಿಜ್ಞಾನ. ಭೂಮಿಯಿಂದ ಸೂರ್ಯ ಚಂದ್ರರವರೆಗೂ, ಒಂದು ಚಿಕ್ಕ ಕಣದಿಂದ ಹಿಡಿದು ದೊಡ್ಡ ರಾಕೆಟ್‌ ವರೆಗೂ, ಹನಿ ನೀರಿನಿಂದ ಹಿಡಿದು ಸಮುದ್ರದ ವರೆಗೂ ವಿಜ್ಞಾನವೇ ವಿಜ್ಞಾನ. ಇದು ಆಧುನಿಕ ಯುಗ, ವೈಜ್ಞಾನಿಕ ಯುಗ. ಇಲ್ಲಿ ಯಾವುದೇ ವಿಷಯದಲ್ಲಿ ಮೂಢನಂಬಿಕೆಯಿಲ್ಲ. ಪ್ರತಿಯೊಂದು ವಿಷಯವನ್ನು ಪ್ರಯೋಗದೊಂದಿಗೆ ಪ್ರಮಾಣಿಸಿ ಪ್ರತಿಪಾದಿಸುವುದಾಗಿದೆ.

Advertisement

ಜನರು ಉತ್ಸುಕತೆಯಿಂದ ನಾನಾ ರೀತಿಯಲ್ಲಿ ಪ್ರಯೋಗಗಳನ್ನು ಮಾಡಿ ಹೊಸ ವಿಷಯಗಳನ್ನು ಕಂಡುಹಿಡಿದು ವಿಜ್ಞಾನಿಗಳೆನಿಸಿಕೊಂಡಿ¨ªಾರೆ. ಈ ವಿಜ್ಞಾನಿಗಳು ಇಂದು ಜಗತ್ತನ್ನೇ ಮಾನವನ ಬೆರಳಂಚಿನಲ್ಲಿ ಆಡುವಂತೆ ಮಾಡಿದ್ದಾರೆ.
ಹಾಗಾಗಿ ಈ ವಿಜ್ಞಾನವನ್ನು ನಾವು ಆಚರಿಸಬೇಕೆಂದು ಅದಕ್ಕೇಂದೇ ದಿನವನ್ನು ಮೀಸಲಿರಿಸಲಾಗಿದೆ. ಇತ್ತೀಚೆಗೆ ವಿಜ್ಞಾನ ದಿನವನ್ನು ಆಚರಿಸಿದ್ದೇವೆ.

1928ರಲ್ಲಿ ಸರ್‌ ಸಿ. ವಿ. ರಾಮನ್‌ ಅವರ‌ ಆವಿಷ್ಕಾರವಾದ ರಾಮನ್‌ ಎಫೆಕ್ಟ್ 1930ರಲ್ಲಿ ಭೌತಶಾಸ್ತ್ರ ದಲ್ಲಿ ನೊಬೆಲ್‌ ಪುರಸ್ಕಾರವನ್ನು ತಂದು ಕೊಟ್ಟಿತು. ಇದರ ಸ್ಮರಣಾರ್ಥವಾಗಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಪ್ರತೀ ವರ್ಷ ಫೆಬ್ರವರಿ 28ರಂದು ಆಚರಿಸಲಾಗುತ್ತದೆ. ಹಾಗೆಯೆ ಪ್ರತೀ ವರ್ಷವೂ ಒಂದೊಂದು ವಿಷಯವನ್ನಿಟ್ಟುಕೊಂಡು ವಿಜ್ಞಾನವನ್ನು ಬೆಳೆಸಿ, ಜನರಲ್ಲಿ ಅರಿವು ಮೂಡಿಸುವುದಾಗಿದೆ.

ಜಗತ್ತಿನ ಸವಾಲುಗಳನ್ನು ಎದುರಿಸಿ ಸುಸ್ಥಿರ ಭವಿಷ್ಯ ನಿರ್ಮಿಸುವಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರದ ಮಹತ್ವವನ್ನು ಎತ್ತಿ ಹಿಡಿಯ ಬೇಕಾಗಿದೆ. “ವಿಕಸಿತ ಭಾರತಕ್ಕಾಗಿ ಸ್ಥಳೀಯ ತಂತ್ರಜ್ಞಾನ’ ಎಂಬ ಈ ವರ್ಷದ ವಿಷಯವು ಜಾಗತಿಕ ಮಟ್ಟದ ಸಮಸ್ಯೆಗಳನ್ನು ಬಗೆ ಹರಿಸಿ ಸಮರ್ಥ ಭವಿಷ್ಯ ನಿರ್ಮಾಣ ಮಾಡುವುದಾಗಿದೆ. ಈ ವಿಷಯವು ಹವಾಮಾನ ಬದಲಾವಣೆ, ಸಂಪನ್ಮೂಲ ಸವಕಳಿ, ಪರಿಸರದ ಅವನತಿ ಮತ್ತು ಸುಸ್ಥಿರವಾದ ಅಭಿವೃದ್ಧಿಯನ್ನು ಕೇಂದ್ರೀಕರಿಸುವುದಾಗಿದೆ.

Advertisement

ಭಾರತ ಮತ್ತು ತಂತ್ರಜ್ಞಾನ
ಅಂದು-ಇಂದು ಎಂದು ಯೋಚಿಸಿದಾಗ ತಂತ್ರಜ್ಞಾನ ಹೇಗೆ ನಮ್ಮ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ ಎಂದು ತಿಳಿದು ಬರುತ್ತದೆ. ಅಂದು ಮನೆಯಲ್ಲಿ ಯಾವುದೇ ಯಂತ್ರೋಪಕರಣಗಳಿರಲಿಲ್ಲ,ಇಂದು ಮನೆ ತುಂಬಾ ಕೈಗೊಂದು, ಕಾಲಿಗೊಂದು ಉಪಕರಣ. ಕಾಳಿನಿಂದ ಹಿಟ್ಟು ಬೀಸಿ , ಕಲಸಿ ರೊಟ್ಟಿ ಮಾಡುವವರೆಗೂ ಪ್ರತಿಯೊಂದು ಹಂತಕ್ಕೊಂದು ಉಪಕರಣ. ಹೀಗೆ ಜೀವನ ಯಾಂತ್ರಿಕವಾದ ಮೇಲೆ ತಂತ್ರಜ್ಞಾನವು ರೊಟ್ಟಿಯ ಮೇಲಿನ ಬೆಣ್ಣೆಯನ್ನು ಸೇರಿಸಿದಂತಾಗಿದೆ.

ದೇಶ ವಿದೇಶಗಳಿಂದ ಶುಭೋದಯದಿಂದ ಶುಭರಾತ್ರಿಯವರೆಗೂ ಸಂದೇಶಗಳನ್ನು ಕಳಿಸುವಲ್ಲಿ, ಸಾವಿರಾರು ಮೈಲಿಗಳಷ್ಟು ದೂರವಿದ್ದರೂ ಪರಸ್ಪರ ಒಬ್ಬರನ್ನೊಬ್ಬರು ನೋಡುತ್ತಾ ಮಾತನಾಡುವುದು, ಅಷ್ಟೇ ಅಲ್ಲ ಇಂದು ಯಾವುದೇ ಕೆಲಸವಿರಲಿ ಥಟ್ಟನೆ ಕಣ್ಣು ರೆಪ್ಪೆ ಬಡಿಯುವಷ್ಟರಲ್ಲಿ ಮುಗಿದು ಬಿಡುತ್ತದೆ.

ಇಂದು ಭಾರತ ದೇಶದಲ್ಲಿ ಹಳ್ಳಿಗಳಿರಲಿ, ಪಟ್ಟಣಗಳಿರಲಿ ಜನರು ಜಾಣತನದಿಂದ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ನಿತ್ಯ ಜೀವನದಲ್ಲಿ ಬಳಸುತ್ತಿದ್ದಾರೆ. ತಂತ್ರಜ್ಞಾನವನ್ನು ಅನೇಕ ರೂಪದಲ್ಲಿ ಬಳಸುತ್ತಿ¨ªಾರೆ. ದೇಶದ ಅಭಿವೃದ್ಧಿಯಲ್ಲಿ ಮುಖ್ಯ ಪಾತ್ರವಹಿಸುವ, ವ್ಯವಸಾಯ, ಉದ್ಯಮ, ಮಾರುಕಟ್ಟೆಗಳು, ಸಾರಿಗೆ ಹೀಗೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆಯಿಂದ ದೇಶವು ಅಭಿವೃದ್ಧಿ ಪಥದಲ್ಲಿ ಮುಂದುವರೆಯುತ್ತಿದೆ.

ಅಂದು ಶಿಲ್ಪಿಗಳು ತಮ್ಮ ಕೆತ್ತನೆಯಲ್ಲಿ ಹಲವಾರು ಉಪಕರಣಗಳನ್ನು ಪರಿಚಯಿಸುರುವುದನ್ನು ನಾವು ಈಗಾಗಲೇ ನೋಡಿದ್ದೇವೆ ಅಥವಾ ಕೇಳಿದ್ದೇವೆ. ಆ ಉಪಕರಣಗಳು ಅಂದು ಬಳಕೆಯಲ್ಲಿದ್ದವೋ ಎಂಬ ಪ್ರಶ್ನೆ ಕಾಡುತ್ತದೆ. ಬಳಕೆಯಲ್ಲಿದ್ದರೆ ಅವು ಅಭಿವೃದ್ಧಿಯಾಗಿ ಇಂದಿಗೂ ಕೂಡ ತಮ್ಮ ಛಾಪನ್ನು ಮೂಡಿಸಿರುತ್ತಿದ್ದವು. ಇಂದು ಇವೆಲ್ಲ ಬಳಕೆಯಲ್ಲಿವೆ ಹಾಗೆಯೇ ದಿನದಿಂದ ದಿನಕ್ಕೆ ಅಭಿವೃದ್ಧಿ ಕೂಡ ಹೊಂದುತ್ತಿವೆ.

ಅಂದು ಪುಷ್ಪಕ ವಿಮಾನದಲ್ಲಿ, ಬೇರೆ ಶೈಲಿಯ ವಿಮಾನಗಳಲ್ಲಿ ಜನರು ಓಡಾಡುವುದನ್ನು ನಾವು ದೂರದರ್ಶನದ ಕಾರ್ಯಕ್ರಮಗಳಲ್ಲಿ ನೋಡಿದ್ದೇವೆ. ಅದು ನಿಜವೋ ಸುಳ್ಳೋ ಅದು ಬೇರೆ ಪ್ರಶ್ನೆ ಆದರೆ ಇಂದು ನಾವು ವಿಮಾನ, ಹೆಲಿಕಾಪ್ಟ್ರ್‌, ರಾಕೆಟ್‌, ಪ್ಯಾರಾಚೂಟ್‌ ಹೀಗೆ ಮುಂತಾದ ರೂಪದಲ್ಲಿ ಆಗಸದಲ್ಲಿ ಸಂಚರಿಸುತ್ತೇವೆ. ಅಂದು ಜನರು ಎಲ್ಲೆಂದರಲ್ಲಿ ಪ್ರತ್ಯಕ್ಷವಾಗುತ್ತಿದ್ದರು. ನೀರಿನಲ್ಲಿ, ಗೋಡೆಗಳಲ್ಲಿ, ಕನ್ನಡಿಗಳಲ್ಲಿ, ನಾವು ನೆನೆಸಿದಲ್ಲಿ ಪ್ರತ್ಯಕ್ಷವಾಗುತ್ತಿದ್ದರು. ಇಂದು ನಾವು ಎÇÉೆಂದರಲ್ಲಿ ಕುಳಿತು ಯಾರು ಬೇಕೋ ಅವರೊಂದಿಗೆ, ಎಷ್ಟೇ ದೂರವಿದ್ದರೂ ಒಬ್ಬರನ್ನೊಬ್ಬರು ನೋಡುತ್ತಾ ಮಾತನಾಡುತ್ತೇವೆ. ಇನ್ನೇನು ಇದರಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿಯಂದ ಎಲ್ಲೆಂದರಲ್ಲಿ ಪ್ರತ್ಯಕ್ಷವಾಗುವ ದಿನವೂ ಬರಬಹುದು.

ಅಂದು ದೇವತೆಗಳು ಬ್ರಹ್ಮಾಂಡವನ್ನು ಕಣ್ಮುಚ್ಚಿ ತೆರೆಯುವಷ್ಟರಲ್ಲಿ ತಲುಪುತ್ತಿದ್ದರು ಹಾಗೆಯೇ ಯಾವುದೇ ಸುರಕ್ಷಾ ಕವಚವಿಲ್ಲದೇ ನಿರ್ಭಯದಿಂದ ಚಲಿಸುತ್ತಿದ್ದರು. ಇಂದು ಮಾನವನು ಬ್ರಹ್ಮಾಂಡ ತಲುಪಿ ಸೂರ್ಯ, ಚಂದ್ರ ತಾರೆಗಳು, ಗ್ರಹಗಳನ್ನು ಅಭ್ಯಸಿಸಿ ಅಲ್ಲಿಯೂ ಕೂಡ ಮಾನವನು ತನ್ನ ನೆಲೆಯನ್ನು ಊರಬಲ್ಲನೇ ಎಂದು ಪರಿಶೀಲಿಸುತ್ತಿದ್ದಾರೆ.
ತಂತ್ರಜ್ಞಾನದ ದುರ್ಬಳಕೆ

ಹಾಗಾದರೆ ಇಷ್ಟೊಂದು ಸಹಾಯಕವಾಗಿರುವ ಈ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ನಾವು ಸರಿಯಾದ ರೀತಿಯಲ್ಲಿ ಬಳಸುತ್ತಿದ್ದೇವೆಯೇ. ಜನರು ಈ ಆಧುನಿಕ ತಂತ್ರಜ್ಞಾನದ ಪರಿಣಾಮವಾಗಿ ತಮ್ಮ ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತಿದ್ದರೆ. ಈ ತಂತ್ರಜ್ಞಾನದ ಅತಿಯಾದ ಬಳಕೆ ಮಾನವನ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರುತ್ತಿದೆ.

ಜನರ ಜೀವನ ಶೈಲಿಯಲ್ಲಿ ಬದಲಾವಣೆ ಬಂದಿರುವುದಕ್ಕೆ ತಂತ್ರಜ್ಞಾನವೇ ಕಾರಣ. ಇಂದು ಹತ್ತು ಜನರು ಮಾಡುವ ಕಾರ್ಯವನ್ನು ಒಂದು ಯಂತ್ರ 5 ನಿಮಿಷಗಳಲ್ಲಿ ಮಾಡುತ್ತದೆ. ಹಾಗಾದರೆ ನಾವು ಏಕೆ ಕೆಲಸ ಮಾಡಬೇಕು ಎನ್ನುತ್ತಾ ಆಲಸಿಗಳಾಗುತ್ತಿದ್ದಾರೆ. ಇದರಿಂದ ಅನೇಕ ರೋಗಗಳಿಗೆ ತುತ್ತಾಗಿ ಅಕಾಲಿಕ ಮರಣಕ್ಕೆ ತುತ್ತಾಗುತ್ತಿದ್ದಾರೆ. ಹೀಗಾಗಿ ಇಂದು ನಾವೆಲ್ಲ ಎಚ್ಚೆತ್ತುಕೊಂಡು ತಂತ್ರಜ್ಞಾನವನ್ನು ಜಾಣ್ಮೆಯಿಂದ ಬಳಸಿ, ನಮ್ಮನ್ನು ಹಾಗೂ ಪರಿಸರವನ್ನು ಕಾಪಾಡಬೇಕಾಗಿದೆ. ವಿಕಸಿತ ಭಾರತಕ್ಕಾಗಿ ಸ್ಥಳೀಯ ತಂತ್ರಜ್ಞಾನ, ಈ ತಂತ್ರಜ್ಞಾನವನ್ನು ನಮ್ಮ ಜನರ, ದೇಶದ ವಿಕಸನಕ್ಕೆ ಬಳಸುವುದಾಗಿದೆ. ಹಾಗೆಯೇ ಜಾಗತಿಕ ಅಭಿವೃದ್ಧಿಯನ್ನು ಕೂಡ ಪರಿಗಣಿಸಿ ಹವಾಮಾನ ಬದಲಾವಣೆ, ಸಂಪನ್ಮೂಲ ಸವಕಳಿ, ಪರಿಸರದ ಅವನತಿ ಮತ್ತು ಸುಸ್ಥಿರವಾದ ಅಭಿವೃದ್ಧಿಯನ್ನು ಕೇಂದ್ರೀಕರಿಸುವುದಾಗಿದೆ. ಬನ್ನಿ ಇಂದು ನಾವೆಲ್ಲ ತಂತ್ರಜ್ಞಾನದ ಬಗ್ಗೆ ಸರಿಯಾದ ಮಾಹಿತಿ ಪಡೆದು, ಆವಶ್ಯಕತೆಯಿದ್ದಲ್ಲಿ ಬಳಸಿ, ನಮ್ಮ ದೇಶವನ್ನು ಬೆಳೆಸೋಣ ಮತ್ತು ಪರಿಸರವನ್ನು ಉಳಿಸೋಣ.

*ಜಯಾ ಛಬ್ಬಿ, ಮಸ್ಕತ್‌

 

Advertisement

Udayavani is now on Telegram. Click here to join our channel and stay updated with the latest news.

Next