Advertisement

ಸಂಘಟನೆಯಿಂದ ಸಮಾಜ ಅಭಿವೃದ್ಧಿ

12:54 PM May 12, 2019 | pallavi |

ಗುಳೇದಗುಡ್ಡ: ಸಮಾಜದಲ್ಲಿ ಸಂಘಟನೆ ಮುಖ್ಯ. ಸಂಘಟಿತರಾಗಿ ಯಾವುದೇ ಕಾರ್ಯ ಹಮ್ಮಿಕೊಂಡರೂ ಯಶಸ್ವಿಯಾಗಲು ಸಾಧ್ಯ. ರಾಜ್ಯದಲ್ಲಿ ಸುಮಾರು 8 ರಿಂದ 10ಲಕ್ಷ ಜನಸಂಖ್ಯೆ ಹೊಂದಿರುವ ಆರ್ಯವೈಶ್ಯ ಸಮಾಜದ ಜನ ರಾಜ್ಯಾದ್ಯಂತ ಸಂಘಟಿತರಾಗಬೇಕಿದೆ ಎಂದು ರಾಜ್ಯ ಆರ್ಯವೈಶ್ಯ ಮಹಾ ಮಂಡಳದ ಜಿಲ್ಲಾಧ್ಯಕ್ಷ ವಿ.ಆರ್‌. ಜನಾದ್ರಿ ಹೇಳಿದರು.

Advertisement

ಸ್ಥಳೀಯ ಆರ್ಯವೈಶ್ಯ ಸೇವಾ ಸಮಿತಿ ಆಶ್ರಯದಲ್ಲಿ ಶ್ರೀ ವಾಸವಿ ಕನ್ನಿಕಾಪರಮೇಶ್ವರಿ ದೇವಿಯ ನೂತನ ದೇವಸ್ಥಾನ ಉದ್ಘಾಟನಾ ಸಮಾರಂಭದಲ್ಲಿ ಹಮ್ಮಿಕೊಂಡಿದ್ದ ವಾಸವಿದೇವಿ ಗೋಷ್ಠಿ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಸಂಘಟಿತರಾದರೆ ಸಮಾಜಮುಖೀಯಾಗಿ ಅಭಿವೃದ್ಧಿ ಹೊಂದಲು ಸಾಧ್ಯ. ಸಂಘಟನೆಯಿಂದ ಬಡವರ ಕಲ್ಯಾಣ ಸಾಧ್ಯವೆಂದು ಹೇಳಿದರು.

ರಾಜ್ಯ ಮಹಾಸಭಾದ ಜಿಲ್ಲಾಧ್ಯಕ್ಷ ಮಂಜುನಾಥ ಪತ್ತೇಪುರ ಮಾತನಾಡಿ, ಗುಳೇದಗುಡ್ಡದಲ್ಲಿ ವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನ ಹಾಗೂ ಸಮಾಜದ ಕಲ್ಯಾಣ ಮಂಟಪ ನಿರ್ಮಾಣ ಮಾಡಿದ್ದು ಉತ್ತಮ ಕಾರ್ಯ. ದೇವಸ್ಥಾನ ನಿರ್ಮಾಣದಿಂದ ಧಾರ್ಮಿಕ ಕಾರ್ಯ ಮಾಡಲು, ಕಲ್ಯಾಣ ಮಂಟಪದಲ್ಲಿ ಸಮಾಜದ ಬಡವರಿಗೂ ಅದನ್ನು ಬಳಸಲು ಅನುಕೂಲವಾಗುತ್ತದೆ ಎಂದು ಹೇಳಿದರು.

ಗುಳೇದಗುಡ್ಡದ ಆರ್ಯವೈಶ್ಯ ಸೇವಾ ಸಮಿತಿ ಅಧ್ಯಕ್ಷ ರಾಮಣ್ಣ ಬಿಜಾಪುರ ಅಧ್ಯಕ್ಷತೆ ಹಾಗೂ ಗೌರವಾಧ್ಯಕ್ಷೆ ರಾಧಾಬಾಯಿ ಕೃಷ್ಣಪ್ಪ ಧಾರವಾಡ ಗೌರವಾಧ್ಯಕ್ಷತೆವಹಿಸಿದ್ದರು.

ಸ್ಥಳೀಯ ಸೇವಾ ಸಮಿತಿಯ ಉಪಾಧ್ಯಕ್ಷ ಹಣಮಂತಪ್ಪ ಅಗಡಿ ಹಾಗೂ ವಾಸವಿ ದೇವಸ್ಥಾನ ಹಾಗೂ ಕಲ್ಯಾಣ ಮಂಟಪದ ಉದ್ಘಾಟನಾ ಸಮಿತಿ ಅಧ್ಯಕ್ಷ ಶ್ರೀಕಾಂತ ಧಾರವಾಡ, ವಿದ್ಯಾಧರ ಹೇಮಾದ್ರಿ, ಪ್ರಕಾಶ ಬೋನಗೇರಿ,ಮಹೇಶ ಬಿಜಾಪುರ, ಜಗದೀಶ ಹೇಮಾದ್ರಿ, ವೆಂಕಟೇಶ ಬಿಜಾಪುರ, ರಾಘವೇಂದ್ರ ತಾವರಗೇರಿ, ವಿಶ್ವನಾಥ ಪಾನಗಂಟಿ, ಹನಮೇಶ ತಾವರಗೇರಿ, ಶ್ರೀಕಾಂತ ವಂಕಲಕುಂಟಿ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next