Advertisement

ಶಿಕ್ಷಣದಿಂದ ಸಾಮಾಜಿಕ ಬದಲಾವಣೆ 

04:27 PM Apr 15, 2018 | |

ಗೋಕಾಕ: ಸಂವಿಧಾನಶಿಲ್ಪಿ, ಭಾರತರತ್ನ, ಡಾ| ಬಾಬಾಸಾಹೇಬ ಅಂಬೇಡ್ಕರ್‌ ತಮ್ಮ ಜೀವಿತಾವಧಿಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು. ಶಿಕ್ಷಣದಿಂದಲೇ ಸಾಮಾಜಿಕ ಬದಲಾವಣೆ ಸಾಧ್ಯ ಎಂದು ನಂಬಿದ್ದರು ಎಂದು ತಹಶೀಲ್ದಾರ್‌ ಜಿ.ಎಸ್‌. ಮಳಗಿ ಹೇಳಿದರು.

Advertisement

ನಗರದ ತಾಪಂ ಸಭಾಭವನದಲ್ಲಿ ತಾಲೂಕಾಡಳಿತ, ತಾಲೂಕ ಪಂಚಾಯತ, ನಗರಸಭೆ ಹಾಗೂ ತಾಲೂಕಿನ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಏರ್ಪಡಿಸಲಾದ ಡಾ| ಬಿ.ಆರ್‌.ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂದಿನ ದಿನಗಳಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವಿದೆ. ಶಿಕ್ಷಣ ಪಡೆದರೆ ಸಂವಿಧಾನದ ಹಕ್ಕು ಹಾಗೂ ಕರ್ತವ್ಯ ಅರಿತು ದೇಶದ ಒಳ್ಳೆಯ ಪ್ರಜೆಗಳಾಗಿ ಬಾಳಬಹುದು ಎಂದು ತಿಳಿಸಿದರು.

ಡಾ| ಬಿ. ಆರ್‌. ಅಂಬೇಡ್ಕರರ ಬಗ್ಗೆ ಉಪನ್ಯಾಸ ನೀಡಿದ ಅಥಣಿಯ ನ್ಯಾಯವಾದಿ ಭಾವುಸಾಹೇಬ ಕಾಂಬಳೆ, ಅಂಬೇಡ್ಕರ್‌ ಅವರು ಭಾರತದ ಸಂವಿಧಾನ ರಚನೆಯಲ್ಲಿ ದೇಶದ ಪ್ರತಿಯೊಬ್ಬರಿಗೂ ಸಮಾನ ಹಕ್ಕು ನೀಡುವ ಮೂಲಕ ಎಲ್ಲ ಸಮುದಾಯಗಳಿಗೆ ಹಕ್ಕು ಮತ್ತು ಕರ್ತವ್ಯ ನೀಡಿದ್ದಾರೆಂದು ಹೇಳಿದರು.

ಡಾ| ಅಂಬೇಡ್ಕರರು ಒಂದು ಜಾತಿಗೆ ಸಿಮೀತವಾಗಿಲ್ಲ. ಎಲ್ಲ ಸಮುದಾಯಗಳಿಗೂ ಹಕ್ಕು ನೀಡುವ ಮೂಲಕ ಆಧುನಿಕ ಸಂವಿಧಾನ ಶಿಲ್ಪಿ ಆಗಿ ದೇಶದ ಜನರ ಕಣ್ಮಣಿ ಆಗಿದ್ದಾರೆಂದು ತಿಳಿಸಿದರು.

Advertisement

ಇದೇ ವೇಳೆ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವೇದಿಕೆ ಮೇಲೆ ತಾಪಂ ಕಾರ್ಯ ನಿರ್ವಾಹಕಾಧಿಕಾರಿ ಎಫ್‌.ಜಿ. ಚಿನ್ನನವರ, ನಗರಸಭೆ ಪೌರಾಯುಕ್ತ ವಾಸನ್‌ ಆರ್‌, ಬಿಇಒ ಡಿ.ಎಸ್‌. ಕುಲಕರ್ಣಿ, ಗ್ರೇಡ್‌-2 ತಹಶೀಲ್ದಾರ ಎಸ್‌.ಕೆ. ಕುಲಕರ್ಣಿ, ಸಮಾಜ ಕಲ್ಯಾಣ ಅಧಿಕಾರಿ ಎಸ್‌.ವಿ. ಕಲ್ಲಪ್ಪನವರ ಹಾಗೂ ವಿವಿಧ ಇಲಾಖೆಗಳ ತಾಲೂಕಾ ಧಿಕಾರಿಗಳಾದ ಎ.ಬಿ. ಹೊನ್ನಾವರ,ಎಂ.ಎಲ್‌. ಜನ್ಮಟ್ಟಿ, ಎಸ್‌.ಪಿ.ವರಾಳೆ, ಎಂ.ಎಸ್‌ .ನಾಗನ್ನವರ, ಆರ್‌.ಕೆ. ಬಿಸಿರೊಟ್ಟಿ ಇದ್ದರು.

ದಲಿತ ಮುಖಂಡರಾದ ಸತ್ಯಜೀತ ಕರವಾಡೆ, ಲಕ್ಷ್ಮಣ ಕೆಳಗಡೆ, ರಮೇಶ ಮಾದರ, ಕಾಡಪ್ಪ ಮೇಸ್ತ್ರಿ, ಮನೋಹರ ಅಜ್ಜನಕಟ್ಟಿ, ಸುಧಾ ಮುರಕುಂಬಿ, ಬಾಳೇಶ ಸಂತವ್ವಗೋಳ, ಅಜಿತ ಹರಿಜನ, ವಿಟ್ಠಲ ಸಣ್ಣಕ್ಕಿ, ಬಬಲೆಪ್ಪ ಮಾದರ ಇದ್ದರು. ಇದಕ್ಕೂ ಪೂರ್ವದಲ್ಲಿ ಮಿನಿ ವಿಧಾನಸೌಧದ ಆವರಣದಲ್ಲಿಯ ಡಾ| ಬಿ.ಆರ್‌. ಅಂಬೇಡ್ಕರ್‌ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮೆರವಣಿಗೆ ಮೂಲಕ ತಾ.ಪಂ. ಕಚೇರಿ ಸಭಾಭವನಕ್ಕೆ ಆಗಮಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next