Advertisement

Goa ; ಲೈಂಗಿಕ ಅಪರಾಧಗಳು ಕಡಿಮೆ ಮಾಡಲು ರೆಡ್ ಲೈಟ್ ಏರಿಯಾ ಬೇಕು!

03:35 PM Sep 02, 2023 | Team Udayavani |

ಪಣಜಿ:  ರಾಜ್ಯದಲ್ಲಿ ಲೈಂಗಿಕ ಅಪರಾಧಗಳ ಸಂಖ್ಯೆಯನ್ನು ಕಡಿಮೆ ಮಾಡಲು ಗೋವಾದಲ್ಲಿ ‘ವೇಶ್ಯಾವಾಟಿಕೆ ಮಾರುಕಟ್ಟೆ’ (ಕೆಂಪು ದೀಪ ಪ್ರದೇಶ) ಅಗತ್ಯವಿದೆ ಎಂದು ಸಾಮಾಜಿಕ ಕಾರ್ಯಕರ್ತೆ ತಾರಾ ಕೇರ್ಕರ್ ವಿವಾದಾತ್ಮಕ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ ಹೆಚ್ಚುತ್ತಿರುವ ಮಹಿಳಾ ವಿರೋಧಿ ಲೈಂಗಿಕ ಅಪರಾಧಗಳ ಕುರಿತು ದಕ್ಷಿಣ ಗೋವಾದ ಶಾಲೆಯೊಂದರಲ್ಲಿ ನಡೆದ ದೌರ್ಜನ್ಯದ ಘಟನೆಯ ಕುರಿತು ಪ್ರತಿಕ್ರಿಯಿಸುವಾಗ ಕೇರ್ಕರ್ ಅವರು ಈ ಹೇಳಿಕೆ ನೀಡಿದ್ದಾರೆ.

Advertisement

ರಾಜ್ಯಕ್ಕೆ ರೆಡ್ ಲೈಟ್ ಏರಿಯಾಗಳು ಅಗತ್ಯವಾಗಿದೆ. ತಮ್ಮನ್ನು ತೃಪ್ತಿಪಡಿಸಿಕೊಳ್ಳಲು ಬಯಸುವವರು ನಮ್ಮ ಹುಡುಗಿಯರ ಮೇಲೆ ದಾಳಿ ಮಾಡುವ ಬದಲು ಅಲ್ಲಿಗೆ ಹೋಗಿ ತೃಪ್ತಿಪಡಬಹುದು ಎಂದು ತಾರಾ ಕೇರ್ಕರ್ ಹೇಳಿದರು. ಬೈನಾದಲ್ಲಿ ಕೆಂಪು ದೀಪದ ಪ್ರದೇಶವನ್ನು ಕೆಡವಿದಾಗ, ಅಂತಹ ಕ್ರಮವು ಗೋವಾದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡುತ್ತದೆ ಎಂದು ಅಂದಿನ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರಿಗೆ ಎಚ್ಚರಿಕೆ ನೀಡಿದ್ದೆ ಎಂದು ಕೇರ್ಕರ್ ಹೇಳಿದರು.

ವೇಶ್ಯಾವಾಟಿಕೆಗೆ ಬೇಡಿಕೆ ದುರದೃಷ್ಟಕರ
ಪುರುಷರ ಲೈಂಗಿಕ ದಾಹವನ್ನು ನೀಗಿಸಲು ವೇಶ್ಯಾಗೃಹಗಳನ್ನು ತೆರೆಯಬೇಕೆಂಬ ಬೇಡಿಕೆ ದುರದೃಷ್ಟಕರ ಎಂದು ಬೈನಾ ವೇಶ್ಯಾಗೃಹದಲ್ಲಿರುವ ವೇಶ್ಯೆಯರ ಪುನರ್ವಸತಿಗಾಗಿ ಶ್ರಮಿಸುತ್ತಿರುವ ಅರ್ಜ್ ಸಂಸ್ಥೆಯ ಅಧ್ಯಕ್ಷ ಅರುಣ್ ಪಾಂಡೆ ಹೇಳಿದರು. ರಾಜ್ಯದಲ್ಲಿ ಲೈಂಗಿಕ ದೌರ್ಜನ್ಯ ಮತ್ತು ವೇಶ್ಯಾವಾಟಿಕೆಗೆ ಯಾವುದೇ ಸಂಬಂಧವಿಲ್ಲ. ವಾಸ್ಕೊ ಬೈನಾದಲ್ಲಿ ಮಹಿಳೆಯರ ವೇಶ್ಯಾವಾಟಿಕೆ ವೇಶ್ಯಾವಾಟಿಕೆ ವಸತಿ ತೆರವಿನ ನಂತರ ವಾಸ್ಕೋದಲ್ಲಿ ಅತ್ಯಾಚಾರ ಹೆಚ್ಚಲಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next