Advertisement

ಅಚ್ಲಾಡಿ ಹಾಲು ಉತ್ಪಾದಕರ ಸಂಘದಲ್ಲಿ ಸಾಮಾಜಿಕ ಅಂತರ ಪಾಲನೆ; ಸ್ವಚ್ಚತೆಗೆ ಮಾದರಿ ಕ್ರಮ

10:17 AM Mar 26, 2020 | keerthan |

ಕೋಟ: ಕೋವಿಡ್-19 ಮಹಾಮಾರಿ ಹರಡುವುದನ್ನು ತಡಗೆಟ್ಟುವ ಸಲುವಾಗಿ ದೇಶಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದೆ. ಈ ನಡುವೆ ಸಾಮಾಜಿಕ ಅಂತರ ಕೈಗೊಳ್ಳುವ ಮೂಲಕ ಅಚ್ಲಾಡಿ ಹಾಲು ಉತ್ಪಾದಕರ ಸಂಘ ಮಾದರಿಯಾಗಿದೆ.

Advertisement

ಉಡುಪಿ ತಾಲೂಕಿನ ಅಚ್ಲಾಡಿಯ ಹಾಲಿನ ಡೈರಿಯ ಎದುರುಗಡೆ 5 ಅಡಿ ಅಂತರದ 35 ಬಾಕ್ಸ್‌ಗಳನ್ನು ನಿರ್ಮಿಸಿದ್ದು ಅಂತರ ಕಾಯ್ದುಕೊಂಡು ಬಾಕ್ಸ್ ಒಳಗಡೆಯೇ ಒಬ್ಬೊಬ್ಬರಾಗಿ ಡೈರಿಯ  ಒಳಗಡೆ ಬರುವಂತೆ ಕ್ರಮ ಕೈಗೊಳ್ಳಲಾಗಿದೆ. ಡೆಟಾಲ್ ಮಿಶ್ರಿತ ನೀರನ್ನು ಇರಿಸಲಾಗಿದ್ದು ಹಾಲು ನೀಡಲು ತೆರಳುವವರು ಕೈ ಶುಚಿಯಾಗಿಸಿಕೊಂಡು ಒಳಗಡೆ ಹೋಗುವಂತೆ ತಿಳಿಸಲಾಗುತ್ತಿದೆ.

ಅದಲ್ಲದೆ ಹಾಲು ಸ್ವೀಕರಿಸುವಲ್ಲಿ ಕೂಡ ಕೇವಲ ಮೂರು ಜನರು ನಿಲ್ಲುವಂತೆ ವ್ಯವಸ್ಥೆ ಮಾಡಲಾಗಿದೆ. ಸದಸ್ಯರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಬರುವಂತೆ ತಿಳಿಸಲಾಗುತ್ತಿದೆ. ಮತ್ತು ಸಿಬಂದಿಗಳು ಮಾಸ್ಕ್, ಗ್ಲೌಸ್‌ಗಳನ್ನು ಧರಿಸಿ ವೈಯ್ಯಕ್ತಿಕ ಸ್ವಚ್ಚತೆಗೆ ಒತ್ತು ನೀಡಲಾಗುತ್ತಿದೆ.

ಸಂಘದ ಅಧ್ಯಕ್ಷರಾದ ಸುರೇಂದ್ರ ಶೆಟ್ಟಿ ಹಾಗೂ ನಿರ್ದೇಶಕರು ಸ್ಥಳದಲ್ಲಿ ಉಪಸ್ಥಿತರಿದ್ದು ಸದಸ್ಯರಿಗೆ ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು.  ಹಾಲು ಸಂಗ್ರಹಿಸುವ ಸಂದರ್ಭ ಮನೆಯಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಕೂಡ ಮಾರ್ಗರ್ದಶನ ನೀಡಲಾಯಿತು. ಸದಸ್ಯರು ಕೂಡ ಸಂಘದ ಸೂಚನೆಯನ್ನು ಚಾಚುತಪ್ಪದೆ ಪಾಲಿಸುತ್ತಿರುವುದು ಕಂಡು ಬಂತು.

Advertisement
Advertisement

Udayavani is now on Telegram. Click here to join our channel and stay updated with the latest news.

Next