ದೇಹದಲ್ಲಿರುವ ಫ್ಯಾಟ್ ಅನ್ನು ಕರಗಿಸಲು ಜನರು ನಾನಾ ಕಸರತ್ತುಗಳನ್ನು ಮಾಡುತ್ತಾರೆ. ವ್ಯಾಯಾಮ, ನಡಿಗೆ, ಡಯೆಟ್ ಮುಂತಾದ ಚಟುವಟಿಕೆಗಳ ಮೊರೆ ಹೋಗುತ್ತಾರೆ. ಇಲ್ಲೊಂದು ವಿಶೇಷ ಬಗೆಯ ವಿನೂತನ ಆಟವಿದೆ. ಇದನ್ನು ಆಡಿದರೆ ನೀವು ಫಿಟ್ ಆಗುವುದಷ್ಟೇ ಅಲ್ಲ, ಕುಣಿದು ಕುಪ್ಪಳಿಸಿ ಮಜಾ ಹೊಂದುವುದು ಖಂಡಿತ. ಇದು “ಸೋಪ್ ಫುಟ್‌ಬಾಲ್’ ಆಟ. ಅಂದರೆ ಸೋಪ್ ನೀರಲ್ಲಿ ಆಡುವ ಫುಟ್‌ಬಾಲ್ ಆಟ. ಪುಟ್ಟ ಅಂಕಣದ ತುಂಬೆಲ್ಲಾ ಸೋಪ್ ನೀರನ್ನು ಹಾಕಲಾಗಿರುತ್ತದೆ. ಅದರ ಮೇಲೆ ಏಳುತ್ತಾ ಬೀಳುತ್ತಾ ಬಾಲನ್ನು ಒದೆಯುತ್ತಾ ಆಟಗಾರರು ಗೋಲ್ ಮಾಡಲು ಪ್ರಯತ್ನಿಸಬೇಕು. ಅಂಕಣದಲ್ಲಿ ಮೆದು ಸ್ಪಾಂಜನ್ನು ಹಾಸಿರುವುದರಿಂದ, ಬಿದ್ದರೆ ಏಟಾಗುವುದೆಂಬ ಭಯ ಬೇಡವೇ ಬೇಡ. ವಾರಾಂತ್ಯವನ್ನು ನಿಮ್ಮ ಗೆಳೆಯ ಗೆಳತಿಯರೊಡನೆ ಸಂತೋಷದಾಯಕವಾಗಿ ಕಳೆಯಲು ಇದೊಂದು ಅವಕಾಶ.
ಎಲ್ಲಿ?: ಸೋಪ್ ಫುಟ್‌ಬಾಲ್, ಎಸ್‌ಪಿಟಿ ನ್ಪೋರ್ಟ್ಸ್ ಅಕಾಡೆಮಿ ಬಳಿ, ಸರ್ಜಾಪುರ ರಸ್ತೆ
ಯಾವಾಗ?: ಜುಲೈ 22, ಸಂಜೆ 4.30- 6