Advertisement

ಉಡುಪಿ ಸ್ನೇಹ ಟ್ಯುಟೋರಿಯಲ್‌ ಕಾಲೇಜು: ದಾಖಲಾತಿ ಆರಂಭ

08:38 PM May 19, 2019 | Sriram |

ಉಡುಪಿ: ಜಿಲ್ಲೆಯಲ್ಲಿರುವ ಸರಕಾರಿ, ಅನುದಾನಿತ, ಅನುದಾನರಹಿತ ಕಾಲೇಜುಗಳು ಕಲಿಕೆಯಲ್ಲಿ ಮುಂದುವರಿದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತವೆ. ಆದರೆ ಇದಕ್ಕೆ ಸಮಾನಾಂತರವಾಗಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಅವಕಾಶ ಮಾಡಿಕೊಟ್ಟಿರುವ ವಿದ್ಯಾ ಸಂಸ್ಥೆಯೇ ಕಲ್ಸಂಕದಲ್ಲಿರುವ “ಸ್ನೇಹ ಟ್ಯುಟೋರಿಯಲ್‌ ಕಾಲೇಜು’.

Advertisement

ವಿದ್ಯಾರ್ಥಿಗಳು ಪ್ರಥಮ ಪಿಯುಸಿಗೆ ಪ್ರವೇಶ ಪಡೆಯುವಾಗ ತಪ್ಪಾದ ಸಂಯೋಜನೆ ಆಯ್ದುಕೊಂಡು ಎಡವುದು ಇದೆ. ಇಂತಹ ಸಂದರ್ಭ ಸಂಯೋಜನೆ ಬದಲಾಯಿಸಬೇಕಾದರೆ ಪುನಃ ಪ್ರಥಮ ಪಿಯುಸಿಗೆ ಪ್ರವೇಶಾತಿ ಪಡೆಯಬೇಕು. ಅದಕ್ಕಾಗಿ ರಾಜ್ಯ ಪ.ಪೂ.ಶಿಕ್ಷಣ ಇಲಾಖೆ ಸಂಯೋಜನೆ ಬದಲಾವಣೆಯೊಂದಿಗೆ ನೇರವಾಗಿ ದ್ವಿ.ಪಿಯು ಪರೀಕ್ಷೆ ಬರೆಯಲು ಅವಕಾಶ ನೀಡಿದೆ.

ಆದರೆ ಕೆಲವರು ಸಂಯೋಜನೆ ಬದಲಾಯಿಸಲು ಅಪೇಕ್ಷೆ ಪಡುವು ದಿಲ್ಲವಾದ್ದರಿಂದ ಅಂಥವರಿಗೆ ಪ್ರಥಮ ಪಿಯುಸಿಯಲ್ಲಿ ಕಲಿತ ಸಂಯೋಜನೆಯಲ್ಲಿಯೇ ಶಿಕ್ಷಣ ಮುಂದುವರಿಸುವ ಅವಕಾಶವಿದೆ. ಈ ವ್ಯವಸ್ಥೆ ಬಳಸಿಕೊಂಡಿರುವ ಸಂಸ್ಥೆ ವಿದ್ಯಾರ್ಜನೆಯಲ್ಲಿ ಎಡವಿದ ವಿದ್ಯಾರ್ಥಿಗಳಿಗೆ ಕಲಿಕೆಯ ಹೊಸ ದಾರಿ ತೋರಿಸಿದೆ. ಕಾಲೇಜಿನ ಶೈಕ್ಷಣಿಕ ವ್ಯವಸ್ಥೆ ಪ್ರತಿಷ್ಠಿತ ಶಾಲೆ/ಕಾಲೇಜಿನ ಮಾದರಿಯಲ್ಲಿಯೇ ನಡೆಯುತ್ತಿದ್ದು, ಪ್ರತೀ ತರಗತಿಯಲ್ಲಿ 60 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತದೆ. ಬೆಳಗ್ಗೆ ಏಕಕಾಲದಲ್ಲಿ 4 ತರಗತಿಗಳು, ಪಿಯುಸಿಗೆ 2 ತರಗತಿಗಳು, ಕಲಿಕೆಯಲ್ಲಿ ಹಿಂದುಳಿದ/8, 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮೊಟಕುಗೊಳಿಸಿದ ವಿದ್ಯಾರ್ಥಿಗಳಿಗೆ ನೇರವಾಗಿ 10ನೇ ತರಗತಿ ವಿದ್ಯಾರ್ಜನೆಗೆ ಕನ್ನಡ/ಇಂಗ್ಲಿಷ್‌ ಮಾಧ್ಯಮದ 2 ತರಗತಿಗಳು ನಡೆಯುತ್ತವೆ.

ಮಧ್ಯಾಹ್ನದ ಅನಂತರ 2 ಪಿಯುಸಿ ತರಗತಿಗಳು, 10ನೇ ತರಗತಿಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. 3 ಸಾವಿರ ಚ.ಅಡಿ ಸ್ಥಳಾವಕಾಶವಿರುವ ಇಲ್ಲಿ 13 ಉಪನ್ಯಾಸಕರಿದ್ದಾರೆ. ದ್ವಿ.ಪಿಯು ವಿಜ್ಞಾನ ವಿಭಾಗದಲ್ಲಿ ಕಲಿಯ ಬಯಸುವವರಿಗೆ ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಓಪನ್‌ ಸ್ಕೂಲಿಂಗ್‌ ಮೂಲಕ ಪರೀಕ್ಷೆ ಬರೆಸಲಾಗುತ್ತದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

ವಿಶೇಷ ಸಾಧನೆ
ಕೂಲಿ ಕಾರ್ಮಿಕ ಹಿರಿಯಡಕದ ಶೇಖರ ನಾಯ್ಕ, ರೇವತಿ ದಂಪತಿ ಪುತ್ರಿ ಶ್ರನ್ಯ ದ್ವಿ.ಪಿಯುಸಿಯಲ್ಲಿ 520 (ಶೇ. 86) ವಿಶಿಷ್ಟ ದರ್ಜೆಯಲ್ಲಿ ಉತ್ತೀರ್ಣಗೊಂಡು ಕಾಲೇಜಿಗೆ ಕೀರ್ತಿ ತಂದಿದ್ದಾಳೆ. ವೈದ್ಯೆ/ಎಂಜಿನಿಯರ್‌ ಆಗಬೇಕೆಂಬ ಮಹದಾಸೆ ಹೊತ್ತು ಎಂಜಿಎಂ ಕಾಲೇಜಿನಲ್ಲಿ ಪ್ರಥಮ ಪಿಯುಗೆ ಸೇರಿದ ಈಕೆ ವಿಜ್ಞಾನ (ಪಿಸಿಎಂಎಸ್‌) ವಿಭಾಗ ಪಡೆದು ಫೇಲಾಗಿದ್ದಾಳೆ. ಮುಂದೇನು? ಮಾಡಲೆಂದು ಪರಿತಪಿಸಿದ ಈಕೆ ಸ್ನೇಹ ಟ್ಯುಟೋರಿಯಲ್‌ ಕಾಲೇಜಿಗೆ ಸೇರಿ ತರಬೇತಿ ಪಡೆದು ವಿಶೇಷ ಸಾಧನೆಗೈದಿದ್ದಾಳೆ. ಈಕೆಯ ಪಾಲಿಗೆ ಈ ಕಾಲೇಜು ಬೆಳಕಾಗಿದ್ದು, ಪದವಿ ವಿದ್ಯಾಭ್ಯಾಸಕ್ಕಾಗಿ ಪಿಪಿಸಿ ಸೇರಲಿದ್ದಾಳೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next