Advertisement
ಏನಿದು ಘಟನೆ?: ದೆಹಲಿ ಪೊಲೀಸ್ ಸ್ಪೆಷಲ್ ಸೆಲ್‌ನ ಎನ್‌ಕೌಂಟರ್ ಸ್ಪೆಷಲಿಸ್ಟ್ ಆಗಿರುವ ವಿನೋದ್ ಬಡೋಲಾ ಅವರು ನೆಹರೂ ಪಾರ್ಕ್‌ನಲ್ಲಿ ಸಂಜೆ ವಾಕ್ ಮಾಡಲು ಹೊರಟಿದ್ದರು. ಈ ವೇಳೆ ಇಬ್ಬರು ದುಷ್ಕರ್ಮಿಗಳು ಅವರ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ. ಅವರಲ್ಲಿ ಒಬ್ಬರು ಬಡೋಲಾ ಅವರ ಮೂಗಿಗೆ ಗುದ್ದಿದ್ದಾರೆ. ಇದರಿಂದ ಗಾಯಗೊಂಡ ವಿನೋದ್ ಕೆಳಕ್ಕೆ ಬಿದ್ದಿದ್ದಾರೆ. ಮತ್ತೊಬ್ಬ ಕತ್ತಿನಲ್ಲಿದ್ದ ಸರವನ್ನು ಎಳೆದು ಪರಾರಿ ಆಗಿದ್ದಾನೆ. ಆದರೆ ಗಾಯಗೊಂಡಿದ್ದ ವಿನೋದ್ ಪಕ್ಕದಲ್ಲಿ ಪಿಸ್ತೂಲ್ ಹಿಡಿದು ನಿಂತಿದ್ದ ಆರೋಪಿಯನ್ನು ಹಿಡಿದು ವಿನೋದ್ ಪೊಲೀಸರಿಗೆ ಕರೆ ಮಾಡಿದ್ದಾರೆ.
Related Articles
Advertisement
48 ವರ್ಷ ವಯಸ್ಸಿನ ವಿನೋದ್ ಬಡೋಲಾ ಅವರು ತಮ್ಮ ವೃತ್ತಿಜೀವನದುದ್ದಕ್ಕೂ ಹಲವಾರು ಉನ್ನತ ಮಟ್ಟದ ಕಾರ್ಯಾಚರಣೆಗಳು ಮತ್ತು ಎನ್‌ಕೌಂಟರ್‌ಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಕ್ಟೋಬರ್ 2013 ರಲ್ಲಿ ಬಡೋಲಾ ಮತ್ತು ಅವರ ತಂಡವು ನಗರದ ಉದ್ಯಮಿಗಳಲ್ಲಿ ಭಯವನ್ನು ಹುಟ್ಟುಹಾಕಿದ ದರೋಡೆಕೋರ ನಿತು ದಾಬೋಡಿಯಾವನ್ನು ಯಶಸ್ವಿಯಾಗಿ ಪತ್ತೆ ಹಚ್ಚಿದರು. ದಕ್ಷಿಣ ದೆಹಲಿಯ ವಸಂತ್ ಕುಂಜ್‌ನಲ್ಲಿರುವ ಪಂಚತಾರಾ ಹೋಟೆಲ್ ಬಳಿ ನಡೆದ ಭೀಕರ ಎನ್‌ಕೌಂಟರ್‌ನಲ್ಲಿ ಅವರು ದಾಬೋಡಿಯಾವನ್ನು ಎನ್ ಕೌಂಟರ್ ಮಾಡಿದ್ದರು.
ವಿನೋದ್ ಬಡೋಲಾ ಅವರು ವಿವಿಧ ಕಾರ್ಯಾಚರಣೆ ಹಾಗೂ ತಮ್ಮ ಶೌರ್ಯಕ್ಕಾಗಿ ರಾಷ್ಟ್ರಪತಿಗಳ ಪ್ರಶಸ್ತಿಗೆ ಭಾಜನರಾಗಿದ್ದಾರೆ.