Advertisement

Kampli: ಬೈಕ್ ನಲ್ಲಿ ಅಡಗಿ ಕುಳಿತ ನಾಗರ ಹಾವು… ಪಕ್ಕದಲ್ಲೇ ಆಟವಾಡುತ್ತಿದ್ದ ಮಕ್ಕಳು

01:22 PM Jul 15, 2024 | Team Udayavani |

ಕಂಪ್ಲಿ: ಪಟ್ಟಣದ ಸತ್ಯನಾರಾಯಣ ಪೇಟೆಯ ಮನೆಯ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನದ ಸೀಟಿನಡಿ ನಾಗರ ಹಾವೊಂದು ಪ್ರತ್ಯಕ್ಷವಾಗಿ ಕೆಲಕಾಲ ಆತಂಕವನ್ನು ಸೃಷ್ಟಿಸಿತ್ತು.

Advertisement

ಪಟ್ಟಣದ ವರ್ತಕರಾದ ಟಿ.ಕೊಟ್ರೇಶ್ ಅವರು ತಮ್ಮ ಮನೆ ಮುಂದೆ ಬೈಕ್ ನಿಲ್ಲಿಸಿ ಮನೆಗೆ ಹೋಗಿದ್ದರು, ಈ ಸಮಯದಲ್ಲಿ ಬೈಕ್ ನೊಳಗೆ ನಾಗರ ಹಾವೊಂದು ಬಚ್ಚಿ ಕುಳಿತಿದೆ ಇದೇ ವೇಳೆ ಬೈಕ್ ಪಕ್ಕದಲ್ಲೇ ಆಟವಾಡುತ್ತಿದ್ದ ಮಕ್ಕಳು ಬೈಕ್ ನಲ್ಲಿ ಹಾವೊಂದು ಹೆಡೆ ಬಿಚ್ಚಿ ಅತ್ತಿತ್ತ ನೋಡುತ್ತಿರುವುದನ್ನು ಕಂಡು ಗಾಬರಿಗೊಂಡು ಮನೆಯವರಿಗೆ ಮಾಹಿತಿ ನೀಡಿದ್ದಾರೆ ವಿಚಾರ ತಿಳಿಯುತ್ತಲೇ ಬೈಕ್ ಬಳಿ ಹತ್ತಾರು ಮಂದಿ ಸೇರಿದ್ದಾರೆ ಎಲ್ಲರೂ ಗಾಬರಿಯಿಂದ ಹಾವನ್ನು ಓಡಿಸಲು ಬೊಬ್ಬೆ ಹೊಡೆದಿದ್ದಾರೆ, ಈ ವೇಳೆ ಇದೇ ಮಾರ್ಗದಲ್ಲಿ ಹೋಗುತ್ತಿದ್ದ ಪೊಲೀಸ್ ಪೇದೆ ಅಶೋಕ್ ಬಾರಿಕರ ಅವರು ಏನೆಂದು ವಿಚಾರಿಸಿದಾಗ ಬೈಕ್ ನಲ್ಲಿ ಹಾವು ಅವಿತು ಕುಳಿತಿರುವ ಬಗ್ಗೆ ಹೇಳಿದ್ದಾರೆ ಅಸ್ಟೊತ್ತಿಗೆ ಅಲ್ಲಿದ್ದ ಜನರನ್ನು ಸಮಾಧಾನ ಪಡಿಸಿದ ಅಶೋಕ್ ಹಾವನ್ನು ಹಿಡಿಯುವ ಕಂಪ್ಲಿ ಕೋಟೆಯ ಉರಗಪ್ರೇಮಿ ಪ್ರಾಣೇಶ್ ಶಾಂಭವಿ ಅವರಿಗೆ ದೂರವಾಣಿ ಕರೆ ಮಾಡಿ ಕರೆಸಿದ್ದಾರೆ.

ಉರಗಪ್ರೇಮಿ ಪ್ರಾಣೇಶ ಶಾಂಭವಿ ಅವರು ಬಂದು ಕೆಲ ಹೊತ್ತು ಪ್ರಯಾಸ ಪಟ್ಟು ಕೊನೆಗೂ ಬೈಕ್ ನಲ್ಲಿದ್ದ ಹಾವನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಸಕಾಲಕ್ಕೆ ಸ್ಪಂದಿಸಿದ ಪೊಲೀಸ್ ಪೇದೆ ಅಶೋಕ್ ಹಾಗೂ ಉರಗಪ್ರೇಮಿ ಪ್ರಾಣೇಶ್ ಶಾಂಭವಿ ಅವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Mahanati Grand Finale: ಮೈಸೂರಿನ ಪ್ರಿಯಾಂಕಗೆ ʼಮಹಾನಟಿʼ ಪಟ್ಟ; ಗೆದ್ದ ಬಹುಮಾನವೇನು?

Advertisement

Udayavani is now on Telegram. Click here to join our channel and stay updated with the latest news.