ಸಾಂಬ್ರಾ: ಕಳೆದ ಎರಡು ದಿನಗಳ ಹಿಂದೆ ಬೆಳಗಾವಿ ಶಾಸ್ತ್ರೀನಗರದ 9 ನೇ ಕ್ರಾಸ್‌ನ ಚರಂಡಿ ನಾಲೆಯಲ್ಲಿ ಕಂಡು ಬಂದ ಹೆಬ್ಟಾವನ್ನು ಪ್ರಸಿದ್ಧ ಉರಗ ತಜ್ಞ ಗಣೇಶ ದಡ್ಡಿಕರ್ ಅವರು ಸುರಕ್ಷಿತವಾಗಿ ಹಿಡಿದು, ಖಾನಾಪೂರ ತಾಲೂಕಿನ ಜಾಂಬೋಟಿ ಕಾಡಿಗೆ ಬುಧವಾರ ಬಿಟ್ಟು ರಕ್ಷಿಸಿದ್ದಾರೆ. ಸುಮಾರು 16 ಅಡಿ ಉದ್ದ ಮತ್ತು 40 ಕೆ.ಜಿ. ಭಾರವಿದ್ದ ಬೃಹತ್ ಹೆಬ್ಟಾವನ್ನು ಬುಧವಾರ ಜೀವ ಸಹಿತ ಹಿಡಿಯುವಲ್ಲಿ ಉರಗ ತಜ್ಞ ಗಣೇಶ ದಡ್ಡಿಕರ್ ಮತ್ತು ರಾಮಾ ಪಾಟೀಲ ಸಫಲರಾದರು. ಅರಣ್ಯ ಇಲಾಖೆ ಕಳೆದ ಎರಡು ದಿನಗಳಿಂದ ಹಾವು ಹಿಡಿಯಲು ಯತ್ನಿಸುತ್ತಿದ್ದರೂ ಯಶ ದೊರೆತಿರಲಿಲ್ಲ. ಹಾವು ಹಿಡಿಯುವ ಕಾರ್ಯಾಚರಣೆಯಲ್ಲಿ ಸುಧೀರ ಕಿಲ್ಲೇಕರ್, ಸುನೀಲ ಗೋಡಸೆ, ಸಾಗರ ಉಚಗಾಂವಕರ, ವಿಶಾಲ ಮುರಕುಟೆ, ಸಂತೋಷ ಸಾಳವಿ, ವಿನಾಯಕ ಬಿರ್ಜೆ, ಮಹಾಂತೇಶ ಕೊಮರ್ ಭಾಗವಹಿಸಿದ್ದರು.
ನಾನಾವಾಡಿ ಬಳಿ ಕಾರ್ ಪಲ್ಟಿ
ಸಾಂಬ್ರಾ: ನಗರ ಹೊರವಲಯದ ನಾನಾವಾಡಿ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಇಬ್ಬರು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಬುಧವಾರ ಸಂಭವಿಸಿದೆ. ಅಪಘಾತದಲ್ಲಿ ಸಂತೋಷ ಪಾಟೀಲ ಮತ್ತು ಸೂರಜ ಚಿಗರೆ ಎಂಬವರು ಗಾಯಗೊಂಡಿದ್ದಾರೆ. ಬೆಳಗಾವಿ ಕಡೆಗೆ ವಾಹನ ಸಾಗುತ್ತಿದ್ದಾಗ ನಾನಾವಾಡಿ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ. ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.