Advertisement

ಅರ್ಚಕನ ಉರಗ ಪ್ರೇಮ : 1500 ಕ್ಕೂ ಹೆಚ್ಚು ಹಾವುಗಳನ್ನು ರಕ್ಷಣೆ ಮಾಡಿದ ಗುರುರಾಜ್

11:07 AM Sep 07, 2022 | Team Udayavani |

ಹುಣಸೂರು : ಎಲ್ಲೇ – ಯಾವುದೇ ಹಾವು ಕಂಡರೂ ಸೈ ಸ್ಥಳದಲ್ಲಿ ಸಿಗುವ ಕಡ್ಡಿ ಹಿಡಿದು ಹಾವು ಹಿಡಿಯಲು ಹೋಗುತ್ತಾರೆ ಅರ್ಚಕ ಎಚ್.ಆರ್. ಗುರುರಾಜ್.

Advertisement

ಹುಣಸೂರು ನಗರದ ಬ್ರಾಹ್ಮಣರ ಬಡಾವಣೆಯ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯದಲ್ಲಿ ಅರ್ಚಕರಾಗಿರುವ ಗುರುರಾಜ್ ಈ ವರೆಗೆ ಸುಮಾರು 1500 ಕ್ಕೂ ಹೆಚ್ಚು ವಿವಿಧ ಜಾತಿಯ ಹಾವುಗಳನ್ನು ಹಿಡಿದು ನಗರದ ಅಯ್ಯಪ್ಪಸ್ವಾಮಿ ಬೆಟ್ಟ. ಕಲ್ ಬೆಟ್ಟ ಫಾರೆಸ್ಟ್ ಅಥವಾ ಚಿಕ್ಕ ಹುಣಸೂರು ಬಳಿಯ ಬಾಚಹಳ್ಳಿ ರಸ್ತೆಯ ಕಲ್ಮಂಟಿಗಳಲ್ಲಿ ಬಿಟ್ಟು ಉರಗ ಪ್ರೇಮ ಮೆರೆಯುತ್ತಾರೆ.

ತಂದೆ ಮಿಲ್ಟ್ರಿ ರಾಮಚಂದ್ರ ರಾಯರಿಂದ ಬಳುವಳಿಯಾಗಿ ಬಂದದ್ದು. ಹಾವನ್ನು ಕಂಡೊಡನೆ ಸುತ್ತಮುತ್ತಲಿನವರಿಗೆ ಧೈರ್ಯ ಹೇಳೋದು. ನಂತರ ಯಾವುದೇ ಅಳುಕಿಲ್ಲದೆ ಏಯ್ ಸುಮ್ಮನಿರು ನಾನೇನೂ ಮಾಡಲ್ಲ ಎಂಬ ಮಾತು ಜೋರಾಗಿ ಹೇಳುತ್ತಾ. ಸ್ಥಳದಲ್ಲಿ ಸಿಗುವ ಕಡ್ಡಿಯಿಂದ ಹಾವಿನ ತಲೆ ಒತ್ತಿ ಹಿಡಿದು ಅದರ ತಲೆಯನ್ನು ಕೈಯಲ್ಲಿ ಹಿಡಿದರೆಂದರೆ ಮುಗಿತು ಹಾವು ಬಂಧನವಾದಂತೆ ಸರಿ. ಇನ್ನು ಯಾವುದಾದರೂ ಚೀಲ ಸಿಕ್ಕರೆ ಹಾವನ್ನು ಅದರೊಳಗೆ ಹಾಕಿಕೊಂಡು ಯಾವುದಾದರೂ ಬೈಕ್ ಹತ್ತಿ ದೂರದ ಬೆಟ್ಟಕ್ಕೆ ಬಿಟ್ಟು ಬರೋದು.

ಸಾಕಷ್ಟು ಬಾರಿ ಹಾವಿನಿಂದ ಕಚ್ಚಿಸಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದದ್ದೂ ಇದೆ.

ಹಾವು ಕಚ್ಚಿ ಚಿಕಿತ್ಸೆ ಪಡೆದ ವೇಳೆ ಅಳುಕದೆ ಅಂದು ಉಪವಾಸವಿದ್ದು ಕಚ್ಚಿದ ಭಾಗದ ಊತ ಕಡಿಮೆಯಾಗುತ್ತಿದ್ದಂತೆ ಮತ್ತೆ ತನ್ನ ಕಾಯಕ ಮುಂದುವರೆಸಿದ್ದಾರೆ.

Advertisement

ಈವರೆಗೆ 1500 ಕ್ಕೂ ಹೆಚ್ಚು ಮಂಡಲ. ಉರಿ ಮಂಡಲ. ಬೇಲಿ ಬದಿಯಲ್ಲಿ ಸೀಟಿ ಊದುವ ಕೊಳಕು ಮಂಡಲ.ನಾಗರ. ಗೋದಿನಾಗರ. ಹಸಿರು ಹಾವು ಹೀಗೆ ಹಲವು ಹಾವುಗಳನ್ನು ಹಿಡಿದು ಕಾಡಿಗೆ ಬಿಟ್ಟು ಬಂದಿದ್ದಾರೆ.

ಹಾವುಗಳಿಗೆ ಪೆಟ್ಟಾಗಿದ್ದಲ್ಲಿ ಅಯ್ಯೋ ನಿನಗೆ ಏನಾಯಿತೆಂದು ಮರುಕ ಪಟ್ಟ ಘಟನೆಗಳು ಇವರ ಮುಂದಿದೆ. ಹಾವು ಕಂಡೊಡನೆ ದೊಣ್ಣೆ. ಕಲ್ಲಿನಿಂದ ಹೊಡೆಯೋದು ಬಿಡಿ.

ಏನಾದರಾಗಲಿ ನಾವು ಹಾವುಗಳನ್ನು ಕಂಡು ಭಯ ಬೀಳದೆ ಅದಕ್ಕೇನೂ ತೊಂದರೆ ಮಾಡದಿದ್ದಲ್ಲಿ ಅದರ ಪಾಡಿಗೆ ಹೋಗುತ್ತದೆ. ನಮ್ಮಿಂದ ತೊಂದರೆ ಯಾಗುತ್ತದೆ ಎಂಬ ಭಯದಲ್ಲೇ ಅವು ಕಚ್ಚುತ್ತವೆ. ಭಯ ಬೀಳದೆ ಹಾವು ಕಚ್ಚಿದ ವೇಳೆ ಚಿಕಿತ್ಸೆ ಪಡೆಯಬೇಕು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next