ಮಸ್ಕಿ: ತಾಲೂಕಿನ ಅಂಕುಶದೊಡ್ಡಿ ಗ್ರಾ.ಪಂ. ವ್ಯಾಪ್ತಿಯ ಬುದ್ದಿನ್ನಿ ಎಸ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿನ ನೀರಿನ ಟ್ಯಾಂಕ್ (ಸಂಪ್) ನಲ್ಲಿ ಬುಧವಾರ ನಾಗರಹಾವು ಕಾಣಿಸಿಕೊಂಡಿದ್ದು ಮಕ್ಕಳು ಆತಂಕಗೊಂಡ ಘಟನೆ ನಡೆದಿದೆ.
ವಿಷಯ ತಿಳಿದ ಬುದ್ದಿನ್ನಿ ಎಸ್ ಶಾಲಾ ಎಸ್ ಡಿಎಂಸಿ ಅಧ್ಯಕ್ಷ ನಾಗರಡ್ಡೆಪ್ಪ ದೇವರಮನಿ, ಮುಖಂಡ ಬಸವರಾಜ ಇಳಿಗೇರ ಮಸ್ಕಿಯಿಂದ ಉರಗ ತಜ್ಞ ಶಾಂತಯ್ಯಸ್ವಾಮಿಯನ್ನು ಕರೆತಂದು ನೀರಿನಲ್ಲಿದ್ದ ನಾಗರಹಾವನ್ನು ಹಿಡಿದು ರಕ್ಷಿಸಿದ್ದಾರೆ.
ಹಾವಿಗೆ ಹಾಲು ಕುಡಿಯಿಸಿ ಮಕ್ಕಳಿಗೆ ತೋರಿಸಲಾಯಿತು. ಆಮೇಲೆ ಹಾವನ್ನು ದೂರದ ಕಾಡಿಗೆ ಬಿಡಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಕಳಕಪ್ಪ ಹಾದಿಮನಿ, ಶಿಕ್ಷಕ ಆದೇಶ ಸಾನಬಾಳ, ಗ್ರಾಮಸ್ಥರಾದ ಪಂಪಣ್ಣ ಬಡಿಗೇರ ಸೇರಿ ಇನ್ನಿತರರು ಇದ್ದರು.