Advertisement

10 ಸಾವಿರ ಕೋಟಿ ರೂ. ಉಳಿತಾಯ : ನೂತನ ಎಸ್‌ಎನ್‌ಎ ವ್ಯವಸ್ಥೆಯಿಂದಾದ ನೆರವು

05:15 PM Jun 09, 2022 | Team Udayavani |

ಹೊಸದಿಲ್ಲಿ: ವಿವಿಧ ರಾಜ್ಯಗಳಿಗಾಗಿ ಕೇಂದ್ರ ಸರಕಾರ ರೂಪಿಸಿರುವ ಯೋಜನೆಗಳಿಗಾಗಿ (ಸಿಎಸ್‌ಎಸ್‌) ಬಿಡುಗಡೆ ಮಾಡುವ ಹಣ ಎಲ್ಲಿ ಹೋಗುತ್ತದೆ, ಎಲ್ಲಿ ಖರ್ಚಾಗುತ್ತದೆ ಎಂಬುದರ ಮೇಲೆ ಸತತವಾಗಿ ನಿಗಾ ವಹಿಸಲು ಅನುಕೂಲವಾಗುವಂಥ ವ್ಯವಸ್ಥೆಯನ್ನು ಕೇಂದ್ರ ಸರಕಾರ ರೂಪಿಸಿದೆ. ಸಿಂಗಲ್‌ ನೋಡಲ್‌ ಏಜೆನ್ಸಿ (ಎಸ್‌ಎನ್‌ಎ) ಎಂಬ ಹೆಸರಿನ ಈ ವ್ಯವಸ್ಥೆಯಿಂದಾಗಿ ಕೇಂದ್ರಕ್ಕೆ 10 ಸಾವಿರ ಕೋಟಿ ರೂ. ಉಳಿತಾಯವಾಗಿದೆ ಎಂದು ಕೇಂದ್ರ ಹಣಕಾಸು ಇಲಾಖೆ ತಿಳಿಸಿದೆ.

Advertisement

ಸಿಎಸ್‌ಎಸ್‌ ಅಡಿಯಲ್ಲಿ ಕೇಂದ್ರದಿಂದ ವಿವಿಧ ರಾಜ್ಯಗಳಿಗೆ ಹಣ ಬಿಡುಗಡೆ ಯಾಗುವ ಹಣ, ಆರ್‌ಬಿಐ ವತಿಯಿಂದ ನಿರ್ವಹಿಸ ಲ್ಪಡುವ ರಾಜ್ಯಗಳ ಖಾತೆಗಳಿಗೆ ಬಂದು ಬೀಳುತ್ತದೆ. ಅಲ್ಲಿಂದ ವಿವಿಧ ಯೋಜನೆಗಳಿಗಾಗಿ ಇದು ಹಣ ವಿಲೇವಾರಿಯಾಗುತ್ತದೆ. ಈ ಎಲ್ಲ ಪ್ರಕ್ರಿಯೆ, ಎಸ್‌ಎನ್‌ಎ ಮೂಲಕವೇ ನಡೆಯುವಂತೆ ಮಾಡಿರುವು ದರಿಂದ ಹಣದ ಹರಿವಿನ ಪ್ರತೀ ಹಂತದಲ್ಲೂ ಕೇಂದ್ರ ಅವಗಾಹನೆ ಮಾಡಬಹುದಾಗಿದೆ. ಹಾಗಾಗಿ, ಯೋಜನೆಗಳಿಗೆ ಎಷ್ಟು ಬೇಕೋ ಅಷ್ಟೇ ಹಣ ಖರ್ಚಾಗುತ್ತಿದೆ.

ಅನಗತ್ಯ ಖರ್ಚು ಗಳನ್ನು ತಪ್ಪಿಸಲಾಗಿದೆ. ಇದರಿಂದಾಗಿ, 2021-22ರ ಆರ್ಥಿಕ ವರ್ಷದಲ್ಲಿ ಕೇಂದ್ರದ ಯೋಜನೆಗಳಿಗಾಗಿ ಬಿಡುಗಡೆ ಮಾಡಲಾ ಗಿರುವ ಅನುದಾನದಲ್ಲಿ ಸುಮಾರು 1.2 ಲಕ್ಷ ಕೋಟಿ ರೂ. ಹಣ, ರಾಜ್ಯ ಸರಕಾರಗಳ ಖಾತೆಗಳಲ್ಲಿ ಬಳಕೆ ಯಾ ಗದೆ ಹಾಗೆಯೇ ಉಳಿದಿದೆ. ಇದನ್ನು ಮುಂದಿನ ಯೋಜನೆಗಳಿಗೆ ಬಳಸಲು ಅವಕಾಶ ಸಿಕ್ಕಿದೆ. ಇಷ್ಟೂ ಹಣ ಖರ್ಚಾಗಿದ್ದರೆ, ಮುಂದಿನ ವರ್ಷದ ಸಿಎಸ್‌ಎಸ್‌ ಯೋಜನೆಗಳಿಗೆ ಬೇರೆ ಕಡೆಯಿಂದ ಹಣ ಸಾಲದ ರೂಪದಲ್ಲಿ ತರಬೇಕಿರುತ್ತಿತ್ತು. 1.2 ಲಕ್ಷ ಕೋಟಿ ರೂ. ಸಾಲಕ್ಕೆ ಏನಿಲ್ಲ ವೆಂದರೂ 10 ಸಾವಿರ ಕೋಟಿ ರೂ. ಬಡ್ಡಿ ಕೊಡಬೇಕಿರುತ್ತಿತ್ತು. ಆ ಬಡ್ಡಿ ಎಸ್‌ಎನ್‌ಎಯಿಂದ ಉಳಿತಾಯವಾಗಿದೆ ಎಂದು ಕೇಂದ್ರ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next