ಮಂಗಳೂರು : ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಈ ವರ್ಷದ ಜನವರಿ 01ರಿಂದ 18ರ ವರೆಗೆ ಭಾರಿ ಚಿನ್ನ ಕಳ್ಳಸಾಗಣೆ ಯತ್ನಗಳನ್ನು ವಿಫಲಗೊಳಿಸಿದ್ದು, ಬರೋಬ್ಬರಿ 3ಕೆಜಿ 677 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಈ ಚಿನ್ನದ ಮಾರುಕಟ್ಟೆ ಬೆಲೆ 2 ಕೋಟಿ 01 ಲಕ್ಷದ 69,800 ರೂ.ಆಗಿದೆ.
8 ಮಂದಿ ಪುರುಷ ಪ್ರಯಾಣಿಕರು ದುಬೈ ಮತ್ತು ಅಬುಧಾಬಿಯಿಂದ ವಿಮಾನದಲ್ಲಿ ಬಂದಿಳಿದಿದ್ದು, ಚಿನ್ನವನ್ನು ಪೇಸ್ಟ್ ರೂಪದಲ್ಲಿ ಘನ ಗಮ್‌ನೊಂದಿಗೆ ಬೆರೆಸಿ ಪ್ಯಾಕೆಟ್‌ಗಳಾಗಿ ಮಾಡಿ, ಗುದನಾಳದಲ್ಲಿ ಮರೆಮಾಡಿ, ಟ್ರಾಲಿ ಬ್ಯಾಗ್ ನಲ್ಲಿ ಮರೆ ಮಾಚಿ , ಬನಿಯನ್ ನಲ್ಲಿ ಅಡಗಿಸಿಟ್ಟು ಕಳ್ಳ ಸಾಗಾಣಿಕೆ ಮಾಡುತ್ತಿದ್ದರು ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಓರ್ವ ಪ್ರಯಾಣಿಕನಿಂದ 3 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಈ ಸಿಗರೇಟ್ ಗಳನ್ನೂ ವಶಪಡಿಸಿ ಕೊಂಡಿರುವುದಾಗಿ ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚಿನ ತನಿಖೆಗಳನ್ನು ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.