Advertisement

ಅವನ ಪ್ಯಾಂಟಿನೊಳಗಿತ್ತು 60 ಹಾವುಗಳು!

08:22 AM Aug 26, 2022 | Team Udayavani |

ಲಾಸ್‌ ಏಂಜಲೀಸ್‌: ಅಮೆರಿಕಕ್ಕೆ ಹೊರಟಿದ್ದ ಜೋಸ್‌ ಮ್ಯಾನುವೆಲ್‌ ಪೆರೆಜ್‌ ಎಂಬ ವ್ಯಕ್ತಿಯ ಪ್ಯಾಂಟಿನೊಳಗೆ 60 ಹಾವುಗಳಿದ್ದವಂತೆ! ಅರೆ, ಪ್ಯಾಂಟಿನೊಳಗೆ ಅಷ್ಟೊಂದು ಹಾವುಗಳು ನುಗ್ಗಿದ್ದು ಅವನಿಗೆ ಗೊತ್ತೇ ಆಗಿಲ್ಲವೇ ಎಂದು ಯೋಚಿಸುತ್ತಿದ್ದೀರಾ? ಹಾಗಿದ್ದರೆ ಕೇಳಿ.

Advertisement

ಇವು ಅಕಸ್ಮಾತಾಗಿ ನುಗ್ಗಿರುವ ಹಾವುಗಳಲ್ಲ. ಬದಲಿಗೆ ಆ ವ್ಯಕ್ತಿಯೇ ಕಳ್ಳಸಾಗಣೆ ಮೂಲಕ ಅಮೆರಿಕಕ್ಕೆ ಕೊಂಡೊಯ್ಯುತ್ತಿದ್ದ ಹಾವುಗಳಿವು. ಮೆಕ್ಸಿಕೋ ಮತ್ತು ಹಾಂಕಾಂಗ್‌ನಿಂದ ಸರೀಸೃಪಗಳನ್ನು ಕಳ್ಳಸಾಗಣೆ ಮಾಡುವ ಕೆಲಸವನ್ನು ಜೋಸ್‌ ವಹಿಸಿಕೊಂಡಿದ್ದ. ಇದು 7.50 ಲಕ್ಷ ಡಾಲರ್‌ನ ದಂಧೆಯಾಗಿದ್ದು, ಒಟ್ಟಾರೆ 1,700 ಸರೀಸೃಪಗಳನ್ನು ಕಳ್ಳಸಾಗಣೆ ಮಾಡಿ ತರಲು ಒಪ್ಪಿಕೊಂಡಿದ್ದ.

ಈಗಾಗಲೇ ಜೋಸ್‌ ಯುಕಾಟನ್‌ ಬಾಕ್ಸ್‌ ಆಮೆಗಳು, ಮೆಕ್ಸಿಕನ್‌ ಬಾಕ್ಸ್‌ ಆಮೆಗಳು, ಮೊಸಳೆ ಮರಿಗಳು, ಮೆಕ್ಸಿಕನ್‌ ಹಲ್ಲಿಗಳನ್ನು ಕಳ್ಳಸಾಗಣೆ ಮಾಡಿದ್ದ. ಆದರೆ, ಇತ್ತೀಚೆಗೆ ಪ್ಯಾಂಟಿನೊಳಗೆ ಹಾಗೂ ತೊಡೆಸಂದಿನಲ್ಲಿ ಸುತ್ತಿ 60 ಹಾವುಗಳು ಮತ್ತು ಹಲ್ಲಿಗಳನ್ನು ಒಯ್ಯುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೊಂಡಿದ್ದು, ಆರೋಪ ಸಾಬೀತಾದ ಮೇಲೆ 45 ವರ್ಷ ಜೈಲಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next