Advertisement

ಲೆಕ್ಕವಿಲ್ಲದ ಠೇವಣಿಗೆ ಎಸ್ಸೆಮ್ಮೆಸ್‌ ನೋಟಿಸ್‌

03:45 AM Feb 03, 2017 | Team Udayavani |

- ಅನುಮಾನಾಸ್ಪದ 18 ಲಕ್ಷ  ಅಕೌಂಟ್‌ಗಳ ಪತ್ತೆ
- 13 ಲಕ್ಷ ಮಂದಿಗೆ ಎಸ್ಸೆಮ್ಮೆಸ್‌ ಮೂಲಕ ನೋಟಿಸ್‌
- 10 ದಿನಗಳಲ್ಲಿ ವಿವರಣೆ ನೀಡಿ, ಇಲ್ಲದಿದ್ದರೆ ಕ್ರಮ
– ಕೇಂದ್ರ ನೇರ ತೆರಿಗೆ ಮಂಡಳಿಯಿಂದ ಎಚ್ಚರಿಕೆ

Advertisement

ಹೊಸದಿಲ್ಲಿ: ಕಪ್ಪುಹಣ ವಿರುದ್ಧ ಸಮರ ಸಾರಿರುವ ಕೇಂದ್ರ ಸರಕಾರ, ಅನುಮಾನಾಸ್ಪದವಾಗಿ ತಮ್ಮ ಅಕೌಂಟ್‌ಗಳಲ್ಲಿ ಭಾರೀ ಹಣ ಇರಿಸಿಕೊಂಡಿರುವ 13 ಲಕ್ಷ ಮಂದಿಗೆ ಎಸ್‌ಎಂಎಸ್‌ ರೂಪದಲ್ಲಿ ನೋಟಿಸ್‌ ನೀಡಿದೆ.

ನಿಮ್ಮ ಅಕೌಂಟ್‌ಗೆ ಈ ಪ್ರಮಾಣದಲ್ಲಿ ಹೇಗೆ ಹಣ ಬಂತು ಎಂಬ ಬಗ್ಗೆ ವಿವರಣೆ ನೀಡಿ ಎಂದು ಸಂದೇಶದಲ್ಲಿ ಸೂಚಿಸ ಲಾಗಿದೆ. ಕಳೆದ ವಾರವಷ್ಟೇ ಕೇಂದ್ರ ಸರಕಾರ, “ಆಪರೇಶನ್‌ ಕ್ಲೀನ್‌ ಮನಿ’ ಆಂದೋಲನ ಶುರು ಮಾಡಿದ್ದು, ಆಗಲೇ 18 ಲಕ್ಷ ಅನುಮಾನಾಸ್ಪದ ಅಕೌಂಟ್‌ಗಳನ್ನು ಗುರುತಿಸಿತ್ತು. ಈ ಅಕೌಂಟ್‌ಗಳಲ್ಲಿ ಸುಮಾರು 4.7 ಲಕ್ಷ ಕೋಟಿ ಹಣವಿದ್ದು, ಇದು ಕಪ್ಪುಹಣವಿರಬೇಕು ಎಂಬ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಹಿಂದಿನ ವಹಿವಾಟು ಗಮನಿಸಿ ಈ ಅಕೌಂಟ್‌ ಹೋಲ್ಡರ್‌ಗಳಿಗೆ ನೋಟಿಸ್‌ ನೀಡಲು ನಿರ್ಧರಿಸಲಾಗಿತ್ತು ಎಂದು ಈ ಪ್ರಕ್ರಿಯೆ ಶುರು ಮಾಡಿರುವ ಕೇಂದ್ರ ನೇರ ತೆರಿಗೆ ಮಂಡಳಿಯ ಮುಖ್ಯಸ್ಥ ಸುಶೀಲ್‌ ಚಂದ್ರ ಹೇಳಿದ್ದಾರೆ.

ನ. 8ರಂದು ಪ್ರಧಾನಿ ನರೇಂದ್ರ ಮೋದಿ ಅವರು, ನೋಟು ಅಪಮೌಲ್ಯವನ್ನು ಘೋಷಣೆ ಮಾಡಿದ ಅನಂತರ, ಈ ಅಕೌಂಟ್‌ಗಳಿಗೆ ಲಕ್ಷಾಂತರ ರೂಪಾಯಿ ಹರಿದುಬಂದಿದೆ.  ಆದರೆ ಯಾರು 5 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ತಮ್ಮ ಅಕೌಂಟ್‌ನಲ್ಲಿ ಹಾಕಿಕೊಂಡಿದ್ದಾರೆಯೋ ಅವರಿಗೆ ಮಾತ್ರ ನೋಟಿಸ್‌ ನೀಡಲು ಶುರು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಕೇವಲ ಎಸ್‌ಎಂಎಸ್‌ ಮಾತ್ರವಲ್ಲದೇ ಇಮೇಲ್‌ ಮೂಲಕವೂ ನೋಟಿಸ್‌ ನೀಡಿದ್ದೇವೆ ಎಂದು ಅವರು ಹೇಳಿದ್ದಾರೆ. ಈ ನೋಟಿಸ್‌ಗಳಿಗೆ ಅವರು 10 ದಿನಗಳಲ್ಲಿ ವಿವರ ನೀಡಲೇಬೇಕು. ಇಲ್ಲದಿದ್ದರೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಆದಾಯ ಪರಿಶೀಲನೆ: ನೋಟುಗಳ ಅಪಮೌಲ್ಯದ ಬಳಿಕ ಬ್ಯಾಂಕ್‌ ಠೇವಣಿ ಇರಿಸಿರುವವರ ಬಗ್ಗೆ ಮಾಹಿತಿ ಪರಿಶೀಲನೆಯನ್ನು ಆದಾಯ ತೆರಿಗೆ ಇಲಾಖೆ ಮುಂದುವರಿಸಿದೆ. ತೆರಿಗೆ ಪಾವತಿದಾರರು ಕಳೆದ ವರ್ಷದ ನ. 8ರ ಬಳಿಕ ಠೇವಣಿ ಇರಿಸಿದ್ದರೆ ಇಲಾಖೆಯ ವೆಬ್‌ಸೈಟ್‌ನಲ್ಲಿ ಲಾಗ್‌ ಇನ್‌ ಆಗಿ ಅದಕ್ಕೆ ಸಂಬಂಧಿಸಿದ ಮಾಹಿತಿ ತಾಳೆಯಾಗದಿದ್ದರೆ ಅದಕ್ಕೆ ಸಂಬಂಧಿಸಿದಂತೆ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರಿಸುವಂತೆ ಸೂಚಿಸಿದೆ. ತೆರಿಗೆ ಪಾವತಿ ಮಾಡುವ ಪಟ್ಟಿಯಲ್ಲಿ ಠೇವಣಿದಾರರ ಹೆಸರು ಇದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ಪ್ರಕ್ರಿಯೆ ನಡೆಸಲಾಗುತ್ತಿದೆ. ತನಿಖೆ ನೆಪದಲ್ಲಿ ಐಟಿ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಆನ್‌ಲೈನ್‌ನಲ್ಲಿ ಈ ಪ್ರಕ್ರಿಯೆ ನಡೆಸಲಾಗುತ್ತದೆ. https://incometaxindiaefi ling.gov.in ವೆಬ್‌ಸೈಟ್‌ನಲ್ಲಿ ಇ-ಫೈಲಿಂಗ್‌ ವಿಂಡೋ ಮೂಲಕ ತೆರಿಗೆ ಪಾವತಿದಾರರು ಈ ಬಗ್ಗೆ ಉತ್ತರಗಳನ್ನು ನೀಡಬೇಕು. ಕ್ಯಾಶ್‌ ಟ್ರಾನ್ಸಾಕÏನ್ಸ್‌ 2016 ಎಂಬ ಲಿಂಕ್‌ ಮೂಲಕ ಪ್ರಶ್ನೆಗಳಿಗೆ ಉತ್ತರಿಸಬಹುದು. ತೆರಿಗೆದಾರರು ಪ್ಯಾನ್‌ ನಂಬರ್‌ ಮತ್ತು ಬ್ಯಾಂಕ್‌ ಖಾತೆಯನ್ನು ಖಚಿತಪಡಿಸಿಕೊಳ್ಳಬೇಕು. ಕೆಲವು ದಿನಗಳ ಹಿಂದಷ್ಟೇ 18 ಲಕ್ಷ ಮಂದಿಯ ಬ್ಯಾಂಕ್‌ ವಿವರಗಳು ತಾಳೆಯಾಗದ್ದರಿಂದ ಅವರಿಗೆ ಶೀಘ್ರ ನೋಟಿಸ್‌ ಜಾರಿ ಮಾಡುವುದಾಗಿ ಇಲಾಖೆ ಹೇಳಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next